ಕರ್ನಾಟಕ

karnataka

ETV Bharat / state

ಮತದಾರರ ಮಾಹಿತಿ ಕಳವು ಆರೋಪ ಪ್ರಕರಣ: ಅಮಾನತುಗೊಂಡಿದ್ದ ಐಎಎಸ್ ಅಧಿಕಾರಿಗಳು ಮರು ನೇಮಕ - ಕರ್ತವ್ಯ ಲೋಪ ಎಸಗಿದ್ದ ಆರೋಪ

ಕರ್ತವ್ಯ ಲೋಪ ಎಸಗಿದ್ದ ಆರೋಪ -ಅಮಾನತುಗೊಂಡಿದ್ದ ಐಎಎಸ್​ ಅಧಿಕಾರಿಗಳಿಬ್ಬರು ಮರುನೇಮಕ- ರಾಜ್ಯ ಸರ್ಕಾರದ ಆದೇಶ

IAS officer
ಐಎಎಸ್ ಅಧಿಕಾರಿಗಳು

By

Published : Dec 24, 2022, 3:58 PM IST

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಅಮಾನತುಗೊಂಡಿದ್ದ ಐಎಎಸ್ ಅಧಿಕಾರಿಗಳಾದ ಕೆ ಶ್ರೀನಿವಾಸ್ ಮತ್ತು ಎಸ್ ರಂಗಪ್ಪ ಅವರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಶ್ರೀನಿವಾಸ್ ಅವರನ್ನು ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಮತ್ತು ರಂಗಪ್ಪ ಅವರನ್ನು ರಾಜ್ಯ ಖನಿಜ ನಿಗಮದ ಕಾರ್ಯಕಾರಿ ನಿರ್ದೇಶಕ ಹುದ್ದೆಗೆ ನೇಮಕ ಮಾಡಲಾಗಿದೆ.

ಪ್ರಕರಣದ ಹಿನ್ನೆಲೆ: ಚಿಲುಮೆ ಸಂಸ್ಥೆಯು ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಮತದಾರರ ಮಾಹಿತಿ ಕಳವು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಂಡಿತ್ತು.

ಮಹದೇವಪುರ ವಿಧಾನಸಭಾ ಕ್ಷೇತ್ರದ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಕೆ ಶ್ರೀನಿವಾಸ್ ಹಾಗೂ ಶಿವಾಜಿನಗರ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಎಸ್ ರಂಗಪ್ಪ ಅವರನ್ನು ಸೇವೆಯಿಂದ ನವೆಂಬರ್ 26 ರಂದು ಅಮಾನತುಗೊಳಿಸಿತ್ತು. ಇದೀಗ ಒಂದೇ ತಿಂಗಳಲ್ಲಿ ಅಮಾನತು ರದ್ದುಗೊಳಿಸಿ ಅವರನ್ನು ಹುದ್ದೆಗಳಿಗೆ ನೇಮಕಗೊಳಿಸಿದೆ.

ಇನ್ನು, ಕೆಆರ್​ಐಡಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ. ಹಿರೇಮಠ್ ಅವರನ್ನು ಸದ್ಯದ ಹುದ್ದೆಯ ಜೊತೆಗೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಮತ್ತು ಕೆ.ಎ ದಯಾನಂದ್ ಅವರು ಹಿಂದುಳಿದ ವರ್ಗಗಳ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ:ಮತದಾರರ ಮಾಹಿತಿ ಕಳವು ಪ್ರಕರಣ: ವಿಚಾರಣೆಗೆ ಹಾಜರಾದ ಐಎಎಸ್ ಅಧಿಕಾರಿ

ABOUT THE AUTHOR

...view details