ಆನೇಕಲ್ :ಸರ್ಕಾರಿ ಯೋಜನೆಗಳನ್ನ ಅನುಷ್ಠಾನಗೊಳಿಸುವಲ್ಲಿ ಅಧಿಕಾರಾರೂಢ ಪಕ್ಷ ತನ್ನ ಸಾಧನೆ ಎಂದು ತೋರುವ ಫ್ಲೆಕ್ಸ್ ಹಾಕಿದ್ದ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಜಿಪಂ ಸದಸ್ಯ ಬಿಜೆಪಿಯ ಬಂಡಾಪುರ ರಾಮಚಂದ್ರ ಅವರು ಶಾಸಕ ಬಿ. ಶಿವಣ್ಣರಿಗೆ ಮುಖಾಮುಖಿ ಪ್ರಶ್ನೆ ಹಾಕಿದರು. ಹೀಗಾಗಿ, ಮುಖಂಡರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.
ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ಮುಗಿಸುವ ಸಂದರ್ಭದಲ್ಲಿ ಹಾಜರಿದ್ದ ಜಿಪಂ ಸದಸ್ಯ ರಾಮಚಂದ್ರ, ತಾಪಂ ಸದಸ್ಯರು, ಕಾಂಗ್ರೆಸ್ ಮುಖಂಡರ ಮೇಲೆ ಶಿಷ್ಟಾಚಾರ ಉಲ್ಲಂಘನೆಯ ಕುರಿತು ಪ್ರಶ್ನೆಗಳ ಸುರಿಮಳೆ ಸುರಿಸಿದರು.