ಕರ್ನಾಟಕ

karnataka

ETV Bharat / state

ಏರ್‌ಪೋರ್ಟ್‌ನಲ್ಲಿ ಪರಿಚಯವಾದ ಮಹಿಳೆಗೆ ಲೈಂಗಿಕ ಕಿರುಕುಳ ; ಉದ್ಯಮಿ ವಿರುದ್ಧ ಎಫ್ಐಆರ್ - ಡಿ ಜೆ ಹಳ್ಳಿ ಠಾಣೆ ಪೊಲೀಸರು

ಏರ್​ಪೋರ್ಟ್​ನಲ್ಲಿ ಪರಿಚಯವಾದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಉದ್ಯಮಿ ಗಣೇಶ್​ ನಾರಾಯಣ್​ ವಿರುದ್ಧ ಡಿ ಜೆ ಹಳ್ಳಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಮಹಿಳೆಗೆ ಲೈಂಗಿಕ ಕಿರುಕುಳ
ಮಹಿಳೆಗೆ ಲೈಂಗಿಕ ಕಿರುಕುಳ

By

Published : May 21, 2023, 9:25 PM IST

ಬೆಂಗಳೂರು :ಏರ್‌ಪೋರ್ಟ್‌ನಲ್ಲಿ ಪರಿಚಯವಾದ ಮಹಿಳೆಯ ಜೊತೆ ಸ್ನೇಹ ಬೆಳೆಸಿಕೊಂಡು ಲೈಂಗಿಕ ಕಿರುಕುಳ ನೀಡಿದ ಆರೋಪ ಉದ್ಯಮಿ ಗಣೇಶ್ ನಾರಾಯಣ್ ವಿರುದ್ಧ ಕೇಳಿ ಬಂದಿದ್ದು, ಡಿ ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಡಿ ಜೆ ಹಳ್ಳಿಯ ಕೆ ಬಿ ಸಂದ್ರದ ಅಂಬೇಡ್ಕರ್ ಲೇಔಟ್‌ನ 33 ವರ್ಷದ ಮಹಿಳೆಯೊಬ್ಬರು ಘಟನೆ ಸಂಬಂಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಆಯೋಗದ ಸೂಚನೆ ಮೇರೆಗೆ ಉದ್ಯಮಿ ಗಣೇಶ್ ನಾರಾಯಣ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಹಳೆ ದ್ವೇಷದ ಹಿನ್ನೆಲೆ ಹತ್ಯೆ: ಎರಡೇ ದಿನದಲ್ಲಿ 7 ಮಂದಿ ಕೊಲೆ ಆರೋಪಿಗಳ ಬಂಧನ

ತಾನೇ ಕ್ಯಾಬ್​ ಬುಕ್ ಮಾಡಿದ್ದ ಆರೋಪಿ ಗಣೇಶ್​ ನಾರಾಯಣ್​ : ಸಂತ್ರಸ್ತ ಮಹಿಳೆ ಕಳೆದ ಆಗಸ್ಟ್ 14ರಂದು ರಾತ್ರಿ 12 ಗಂಟೆಗೆ ಮುಂಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಕ್ಯಾಬ್ ಬುಕ್ ಮಾಡಿಕೊಂಡು ಮನೆಗೆ ಹೋಗಲು ವಿಮಾನ ನಿಲ್ದಾಣದ ಕ್ಯಾಬ್ ಜೋನ್‌ನಲ್ಲಿ ಕಾಯುತ್ತಿರುವಾಗ ಬಂದು ಪರಿಚಯಿಸಿಕೊಂಡಿದ್ದ ಆರೋಪಿ ಗಣೇಶ್ ನಾರಾಯಣ್, ತಾನೇ ಕ್ಯಾಬ್ ಬುಕ್ ಮಾಡಿದ್ದು, ಸಂತ್ರಸ್ತೆ ಕ್ಯಾಬ್‌ನಲ್ಲಿ ಮನೆಗೆ ತೆರಳಿದ್ದಾರೆ.

ಇದನ್ನೂ ಓದಿ:ಬ್ಯಾಂಕ್​ನಿಂದ ಹಣ ಪಡೆದು ಬರುತ್ತಿದ್ದ ವ್ಯಕ್ತಿಯ ಬ್ಯಾಗ್ ಕಿತ್ತುಕೊಂಡು ಹೋದ ಕಳ್ಳರು..!

ಅನಾರೋಗ್ಯದ ಹಿನ್ನೆಲೆಯಲ್ಲಿ ಸಂತ್ರಸ್ತೆ ಭೇಟಿಗೆ ನಿರಾಕರಣೆ:ಆಕೆಯ ನಂಬರ್ ಪಡೆದಿದ್ದ ಆರೋಪಿ ಮಾರನೇ ದಿನ ಬೆಳಗ್ಗೆ ಸಂತ್ರಸ್ತ ಮಹಿಳೆಗೆ ಕರೆ ಮಾಡಿ ಭೇಟಿಯಾಗಲು ಬರುವಂತೆ ಕರೆದಿದ್ದಾನೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಸಂತ್ರಸ್ತೆ ಭೇಟಿಗೆ ನಿರಾಕರಿಸಿದ್ದಾರೆ. ದಿನ ಕಳೆದಂತೆ ಇಬ್ಬರು ಹೀಗೆಯೇ ಮೊಬೈಲ್‌ನಲ್ಲಿ ಮಾತನಾಡುತ್ತಾ ಪರಸ್ಪರ ಸಲುಗೆ ಬೆಳೆಸಿಕೊಂಡಿದ್ದಾರೆ. ಸಂತ್ರಸ್ತೆಯು ತನ್ನ ಕುಟುಂಬ ಸೇರಿ ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ತೊಂದರೆಗಳ ಬಗ್ಗೆ ಗಣೇಶ್ ಬಳಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಗ್ರಾನೈಟ್ ಅಂಗಡಿ ಮಾಲೀಕನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು.. ತುಮಕೂರಿನಲ್ಲಿ ಹರಿದ ನೆತ್ತರು

ಡಿ ಜೆ ಹಳ್ಳಿ ಠಾಣೆ ಪೊಲೀಸರಿಂದ ತನಿಖೆ : ಸಂತ್ರಸ್ತೆ ಜತೆಗೆ ತುಂಬಾ ಸಲುಗೆ ಬೆಳೆಸಿಕೊಂಡು ಗಣೇಶ್​ ಮೊಬೈಲ್ ಕಾಲ್, ಚಾಟಿಂಗ್ ನಡೆಸಿದ್ದಾನೆ. ಬಳಿಕ ಆಕೆಗೆ ವಿಡಿಯೊ ಕಾಲ್ ಮಾಡಿ ಇಕ್ಯೂ ಗೇಮ್ ಆಟವಾಡಲು ಆರಂಭಿಸಿದ್ದಾನೆ. ದಿನ ಕಳೆದಂತೆ ಆರೋಪಿಯ ವರ್ತನೆ ಬದಲಾವಣೆಯಾದ ಹಿನ್ನೆಲೆಯಲ್ಲಿ ಸಂತ್ರಸ್ತೆ ಆತನ ಸ್ನೇಹ ಕಡಿದುಕೊಳ್ಳಲು ಮುಂದಾಗಿದ್ದಾರೆ.

ಆದರೆ, ಆರೋಪಿ ಗಣೇಶ್, ತನ್ನೊಂದಿಗೆ ಸಂಬಂಧ ಇರಿಸಿಕೊಳ್ಳುವಂತೆ ಸಂತ್ರಸ್ತೆಗೆ ಒತ್ತಡ ಹಾಕಿದ್ದಾನೆ. ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಂಬಂಧ ಪ್ರಕರಣ ದಾಖಲಿಸಿರುವ ಡಿ ಜೆ ಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಶೂಟಿಂಗ್ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಲಾರಿ ಡಿಕ್ಕಿ: ಜನಪ್ರಿಯ ಕಿರುತೆರೆ ನಟಿ ಸಾವು

ABOUT THE AUTHOR

...view details