ಕರ್ನಾಟಕ

karnataka

ETV Bharat / state

'ಅಂಬೇಡ್ಕರ್ ಭವನ ನಿರ್ಮಾಣ ಹೆಸರಲ್ಲಿ ಅಧಿಕಾರಿಗಳಿಂದ 40 ಲಕ್ಷ ರೂ ಲೂಟಿ' - ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಅಹೋರಾತ್ರಿ ಧರಣಿ

ಅಂಬೇಡ್ಕರ್ ಭವನ ನಿರ್ಮಾಣದ ಹೆಸರಲ್ಲಿ 40 ಲಕ್ಷ ರೂಪಾಯಿಗಳನ್ನು ಅಧಿಕಾರಿಗಳು ಲಪಟಾಯಿಸಿದ್ದಾರೆ ಎಂದು ದಲಿತ ಸಂಘಟನೆಗಳು ಆರೋಪಿಸಿವೆ.

Ambedkar Bhawan construction  allegation of officials looted money  Karnataka Dalit Organizations Federation protest  ಅಂಬೇಡ್ಕರ್ ಭವನ ನಿರ್ಮಾಣ  ದಲಿತ ಸಂಘಟನೆಗಳ ಆರೋಪ  ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಅಹೋರಾತ್ರಿ ಧರಣಿ  ಕರ್ನಾಟಕ ದಲಿತ ಸಂಘಟನೆ
ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಅಹೋರಾತ್ರಿ ಧರಣಿ

By

Published : Sep 15, 2022, 2:29 PM IST

ನೆಲಮಂಗಲ: ಅಂಬೇಡ್ಕರ್ ಭವನ ನಿರ್ಮಾಣದ ಹೆಸರಲ್ಲಿ 40 ಲಕ್ಷ ರೂ ಹಣವನ್ನು ಅಧಿಕಾರಿಗಳು ಕಬಳಿಸಿದ್ದು, ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಸದಸ್ಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ನೆಲಮಂಗಲದ ಲೋಹಿತ್ ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿದೆ. ಆದರೆ ದಾಖಲೆಗಳಲ್ಲಿ ಇರುವ ಅಂಬೇಡ್ಕರ್ ಭವನ ಸ್ಥಳದಲ್ಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನೆಲಮಂಗಲ ಯೋಜನಾ ಪ್ರಾಧಿಕಾರ 2017-18 ನೇ ಸಾಲಿನಲ್ಲಿ 2 ಕೋಟಿ 95 ಲಕ್ಷ ರೂ ಗಳಲ್ಲಿ 25 ಕಾಮಗಾರಿ ಮಾಡಿರುವುದಾಗಿ ದಾಖಲೆಗಳು ಹೇಳುತ್ತಿವೆ. ಇದರಲ್ಲಿ ಒಂದು ಕಾಮಗಾರಿಯೂ ಸಹ ಪೂರ್ಣವಾಗಿಲ್ಲ ಎಂದು ಸಂಘಟನೆ ಆರೋಪಿಸಿದೆ.

ಈ ಹಗರಣದಲ್ಲಿ KRDL ಮತ್ತು ನೆಲಮಂಗಲ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಮತ್ತು ಮಾಜಿ ಅಧ್ಯಕ್ಷರು ಭಾಗಿಯಾಗಿದ್ದಾರೆ. ಜಿಲ್ಲಾಧಿಕಾರಿಗಳಿಗೂ ದೂರು ನೀಡಿದರೂ ಇಲ್ಲಿಯವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಒಂದು ವೇಳೆ ಮುಂದೆಯೂ ಕ್ರಮ ತೆಗೆದುಕೊಳ್ಳದಿದ್ದರೆ ಮುಖ್ಯಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಹಿಂದಿ ದಿವಸ್ ಆಚರಣೆಗೆ ವಿರೋಧ: ಫ್ರೀಡಂ ಪಾರ್ಕ್ ನಲ್ಲಿ ಕರವೇ ಪ್ರತಿಭಟನೆ

ABOUT THE AUTHOR

...view details