ಕರ್ನಾಟಕ

karnataka

ETV Bharat / state

ಆಹಾರ ಸರಬರಾಜಿನಲ್ಲಿ ಗೋಲ್‌ಮಾಲ್ ಆರೋಪ: ಲೋಕಾಯುಕ್ತಕ್ಕೆ‌ ದೂರು - ವಕೀಲ ಎಸ್ ನಟರಾಜ ಶರ್ಮಾ

ಮಕ್ಕಳು ಹಾಗೂ ಗರ್ಭಿಣಿಯರಿಗೆ ನೀಡುವ ಆಹಾರ ಸರಬರಾಜಿನಲ್ಲಿ ಗೋಲ್​ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ.

ಲೋಕಾಯುಕ್ತ
ಲೋಕಾಯುಕ್ತ

By ETV Bharat Karnataka Team

Published : Nov 17, 2023, 7:56 PM IST

ಬೆಂಗಳೂರು : ಮಕ್ಕಳು ಹಾಗೂ ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ಸರಬರಾಜು ಮಾಡಲು ಅನರ್ಹ ಸಂಸ್ಥೆಗಳಿಗೆ ನೀಡಿದ ಗುತ್ತಿಗೆಯಲ್ಲಿ ಸುಮಾರು 600 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಸ್ ನಟರಾಜ ಶರ್ಮಾ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಇಲಾಖೆಯಲ್ಲಿ ಜವಾಬ್ದಾರಿ ಹೊತ್ತ ಮೂವರ ವಿರುದ್ಧ ದೂರು ನೀಡಲಾಗಿದೆ. ಇಲಾಖೆಯು‌ ಅಂಗನವಾಡಿಯಲ್ಲಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ಸರಬರಾಜು ಮಾಡಲು ನೀಡಿರುವ ಟೆಂಡರ್ ವಿಚಾರದಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಕಪ್ಪು ಪಟ್ಟಿಯಲ್ಲಿರುವ ಕಂಪನಿ ಜೊತೆ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಟೆಂಡರ್ ನೀಡಿದ್ದು, ಗುತ್ತಿಗೆದಾರರಿಂದ ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರ ಕಳಪೆ‌ ಗುಣಮಟ್ಟದ್ದಾಗಿತ್ತು. ಹೀಗಾಗಿ ಸ್ಥಳೀಯ ಸೇವಾ ಸಂಘಗಳೇ ಆಹಾರ ಪೂರೈಕೆ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು. ಆದರೆ ಆದೇಶ ಉಲ್ಲಂಘಿಸಿ ಬ್ಲಾಕ್ ಲಿಸ್ಟ್​ನಲ್ಲಿರುವ ಕಂಪನಿಗೆ ಟೆಂಡರ್ ನೀಡಿರುವುದಾಗಿ ದೂರಿನಲ್ಲಿ ನಟರಾಜ ಶರ್ಮಾ ಉಲ್ಲೇಖಿಸಿದ್ದಾರೆ.

ನಿಯಮ ಉಲ್ಲಂಘಿಸಿ ಬ್ಲಾಕ್‌ ಲಿಸ್ಟ್ ಕಂಪನಿಗೆ ಟೆಂಡರ್ ನೀಡಿ ಸುಮಾರು 600 ಕೋಟಿ ಅವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಇಲಾಖೆಯ ಮೂವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ನಟರಾಜ್ ಅವರು‌ ತಿಳಿಸಿದ್ದಾರೆ.

ಇದನ್ನೂ ಓದಿ :ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಪೌಷ್ಟಿಕಾಂಶಯುಕ್ತ ಆಹಾರ ಕೊಡುವುದು ನಮ್ಮ ಸರ್ಕಾರದ ಆದ್ಯತೆ: ಸಚಿವ ಹೆಚ್​ ಸಿ ಮಹದೇವಪ್ಪ

ABOUT THE AUTHOR

...view details