ಬೆಂಗಳೂರು: ಒಂದೂವರೆ ವರ್ಷದ ಹಿಂದೆ ಕೆಲಸಕ್ಕೆ ಸೇರಿ ಬಿಟ್ಟಿದ್ದ ಯುವಕನೊಬ್ಬ ತನ್ನ ಅಂಗಡಿ ಮಾಲೀಕನ ಮಗುವನ್ನು ಅಪಹರಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆ ಕಳೆದ ಡಿ.28ರಂದು ಬನಶಂಕರಿ 2ನೇ ಹಂತದ ಕಾವೇರಿ ನಗರದಲ್ಲಿ ನಡೆದಿದೆ. ಕೆಲಸಗಾರ ವಾಸೀಂ ಎಂಬಾತ ನನ್ನ ಮಗುವನ್ನು ಅಪಹರಿಸಿಕೊಂಡು ಹೋಗಿರುವುದಾಗಿ ಮಗುವಿನ ತಂದೆ ಶಫೀವುಲ್ಲಾ ಎಂಬುವವರು ಆರೋಪಿಸಿ ಬನಶಂಕರಿ ಠಾಣೆಗೆ ದೂರು ನೀಡಿದ್ದಾರೆ.
2015ರಲ್ಲಿ ನಾನು ಮದುವೆ ಆಗಿದ್ದೆ. ನನಗೆ ನಾಲ್ಕು ವರ್ಷಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಬಳಿಕ ನನ್ನ ಪತ್ನಿ ನನ್ನಿಂದ ವಿಚ್ಛೇದನ ಪಡೆದು ದೂರವಾಗಿದ್ದಾಳೆ. ನಾನು ಮತ್ತು ನನ್ನ ಮಗಳು ಇಬ್ಬರು ಕಳೆದ ನಾಲ್ಕು ವರ್ಷದಿಂದ ಒಟ್ಟಿಗೆ ಇದ್ದೇವೆ. ಆಕೆಯ ಆರೈಕೆಯನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಸದ್ಯ ಬನಶಂಕರಿಯಲ್ಲಿ ಫರ್ನೀಚರ್ ಶಾಫ್ ನಡೆಸುತ್ತಿದ್ದೇನೆ ಎಂದು ಶಫೀವುಲ್ಲಾ ಹೇಳಿದ್ದಾರೆ.