ಕರ್ನಾಟಕ

karnataka

ETV Bharat / state

ಸಾಂತ್ವನ ವಿಚಾರದಲ್ಲೂ ತಾರತಮ್ಯ ಆರೋಪ: ಮಸೂದ್, ಫಾಝಿಲ್ ನಿವಾಸಕ್ಕೂ ಭೇಟಿ ನೀಡಲಿದ್ದಾರೆ ಸಿಎಂ - Bjp leader murder

ದಕ್ಷಿಣ ಕನ್ನಡ ಸರಣಿ ಕೊಲೆ ಪ್ರಕರಣ- ಸಾಂತ್ವನ ಹೇಳುವ ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡಿದೆ ಎಂಬ ಆರೋಪ- ಮಸೂದ್, ಫಾಝಿಲ್ ನಿವಾಸಕ್ಕೂ ಭೇಟಿ ನೀಡುವುದಾಗಿ ಸಿಎಂ ಹೇಳಿಕೆ

ಸಿಎಂ
ಸಿಎಂ

By

Published : Aug 1, 2022, 5:43 PM IST

ಬೆಂಗಳೂರು: ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತನ ನಿವಾಸಕ್ಕೆ ಸಿಎಂ ಜು.28 ರಂದು ಭೇಟಿ ನೀಡಿದ್ದರು. ಆದ್ರೆ ಅದೇ ಊರಿನಲ್ಲಿ ಹತ್ಯೆಯಾಗಿದ್ದ ಮತ್ತೊಂದು ಕೋಮಿನ ವ್ಯಕ್ತಿಯ ಕುಟುಂಬಕ್ಕೆ ಸಾಂತ್ವನ ಹೇಳದೆ ವಾಪಸ್​ ಆಗಿದ್ದರು. ಸಿಎಂ ಅವರ ಈ ನಡೆಗೆ ಕಾಂಗ್ರೆಸ್, ಜೆಡಿಎಸ್ ಮತ್ತು ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಸಿಎಂ ಬೊಮ್ಮಾಯಿ ಮತ್ತೊಮ್ಮೆ ಮಂಗಳೂರಿಗೆ ಭೇಟಿ ನೀಡಿ, ಹತ್ಯೆಯಾಗಿರುವ ಮತ್ತಿಬ್ಬರ ಕುಟುಂಬಕ್ಕೂ ಸಾಂತ್ವನ ಹೇಳುವುದಾಗಿ ತಿಳಿಸಿದ್ದಾರೆ.

ಸಿಎಂ ಇದೀಗ ಮಸೂದ್ ಮತ್ತು ಫಾಝಿಲ್ ನಿವಾಕ್ಕೂ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಸರ್ಕಾರ ಎಲ್ಲರನ್ನೂ ಸಮಾನವಾಗಿ ನೋಡಲಿದೆ. ಬೆಳ್ಳಾರೆಯಲ್ಲಿ ಹತ್ಯೆಯಾಗಿದ್ದ ಮಸೂದ್ ಹಾಗೂ ಸುರತ್ಕಲ್​ನಲ್ಲಿ ಹತ್ಯೆಯಾದ ಫಾಝಿಲ್ ನಿವಾಸಕ್ಕೆ ಸದ್ಯದ್ರಲ್ಲೇ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಮನೆಗೆ ಸಿಎಂ ಭೇಟಿ.. ಕುಟುಂಬಕ್ಕೆ ರೂ 25 ಲಕ್ಷ ಪರಿಹಾರದ ಚೆಕ್ ಹಸ್ತಾಂತರ

ರವಿಕುಮಾರ್​ರಿಂದ ಸ್ಪಷ್ಟೀಕರಣ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕೂಡ ಈ ವಿವಾದಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಸಿಎಂ, ಮಸೂದ್, ಫಾಝಿಲ್ ನಿವಾಸಕ್ಕೆ ಹೋಗಿ ಸಾಂತ್ವನ ಹೇಳಿಲ್ಲ ಎನ್ನುವ ಆರೋಪಕ್ಕೆ ರವಿಕುಮಾರ್ ಸ್ಪಷ್ಟೀಕರಣ ನೀಡಿದ್ದಾರೆ. ನಾವು ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ. ಆ ಸಂದರ್ಭ ಬೇರೆ ಇತ್ತು. ಹಾಗಾಗಿ ಮುಖ್ಯಮಂತ್ರಿಗಳು ಅಂದು ಮಸೂದ್ ಮತ್ತು ಫಾಝಿಲ್ ನಿವಾಸಕ್ಕೆ ಭೇಟಿ ನೀಡಿರಲಿಲ್ಲ. ಸಿಎಂಗೆ ಯಾವಾಗ ಹೋಗಬೇಕು, ಯಾವಾಗ ಹೋಗಬಾರದು ಅನ್ನೋದು ಗೊತ್ತಿದೆ. ಇಬ್ಬರ ಮನೆಗೂ ಸದ್ಯದ್ರಲ್ಲೇ ಭೇಟಿ ನೀಡುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ:ಹಂತಕರನ್ನು ಆ.​ 5ರೊಳಗೆ ಬಂಧಿಸದಿದ್ದಲ್ಲಿ ಸತ್ಯಾಗ್ರಹ.. ಸರ್ಕಾರಕ್ಕೆ ಕುಮಾರಸ್ವಾಮಿ ಡೆಡ್​ಲೈನ್​

ಈ ವಿಚಾರವಾಗಿ ಸ್ಥಳೀಯ ಸಂಸದರಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ನೇರವಾಗಿ ಏನನ್ನೂ ಹೇಳದೆ, ಕೊಲೆಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ಶಾಂತಿಸ್ಥಾಪನೆ ಮುಖ್ಯ ಎಂದಿದ್ದಾರೆ. ಒಟ್ಟಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಕುಟುಂಬಗಳಿಗೆ ಸಾಂತ್ವನ ಹೇಳುವ ವಿಚಾರದಲ್ಲಿ ಸರ್ಕಾರ ತಾರತಮ್ಯವೆಸಗುತ್ತಿದೆ ಎನ್ನುವ ಅಪವಾದ ಬರುತ್ತಿದ್ದಂತೆ ಬಿಜೆಪಿ ನಾಯಕರು ಯೂ ಟರ್ನ್ ಹೊಡೆದಿದ್ದಾರೆ. ಮುಖ್ಯಮಂತ್ರಿಗಳೂ ಸೇರಿದಂತೆ ಬಿಜೆಪಿ ನಾಯಕರು ಮಸೂದ್, ಫಾಝಿಲ್ ನಿವಾಸಕ್ಕೆ ಭೇಟಿ ನೀಡುವ ಹೇಳಿಕೆ ನೀಡಿ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದ್ದಾರೆ.

For All Latest Updates

ABOUT THE AUTHOR

...view details