ಬೆಂಗಳೂರು: ನ್ಯಾಯಾಲಯದ ಆದೇಶದ ನಡುವೆಯೂ ಎಫ್ಐಆರ್ ದಾಖಲಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದ ಆರೋಪದಡಿ ಪುಲಕೇಶಿನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಅವರನ್ನ ಅಮಾನತು ಮಾಡಲಾಗಿದೆ. ಕರ್ತವ್ಯಲೋಪವೆಸಗಿದ ಆರೋಪದಡಿ ಇನ್ಸ್ಪೆಕ್ಟರ್ ಸೋಮಶೇಖರ್ ಅವರನ್ನು ಅಮಾನತು ಮಾಡಿ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಕರ್ತವ್ಯಲೋಪ ಆರೋಪ: ಪುಲಕೇಶಿನಗರ ಇನ್ಸ್ಪೆಕ್ಟರ್ ಅಮಾನತು - Pulakeshinagar inspector suspended
Pulakeshinagar inspector suspended: ದರೋಡೆ ಪ್ರಕರಣಗಳ ಬಗ್ಗೆ ದೂರು ದಾಖಲಿಕೊಳ್ಳದ ಹಾಗೂ ಡೈರಿ ಮೆಂಟೈನ್ ಮಾಡದ ಆರೋಪದ ಮೇಲೆ ಇನ್ಸ್ಪೆಕ್ಟರ್ ಸೋಮಶೇಖರ್ ಅವರನ್ನು ಅಮಾನತು ಮಾಡಲಾಗಿದೆ.
ಕರ್ತವ್ಯಲೋಪ ಆರೋಪ: ಪುಲಕೇಶಿನಗರ ಇನ್ಸ್ಪೆಕ್ಟರ್ ಅಮಾನತು
Published : Dec 22, 2023, 1:21 PM IST
|Updated : Dec 22, 2023, 1:27 PM IST
ಕೋರ್ಟ್ ಆದೇಶ ಇದ್ದರೂ ಖಾಸಗಿ ದೂರುಗಳನ್ನು ದಾಖಲಿಸದೇ ವಿಳಂಬ ಮಾಡಿ ಕಳೆದ ಆರು ತಿಂಗಳಿನಿಂದ ಎಫ್ಐಆರ್ ಮಾಡದೇ ಬಾಕಿ ಇಟ್ಟುಕೊಂಡಿರುವ ಆರೋಪ ಕೇಳಿ ಬಂದಿತ್ತು. ಅಲ್ಲದೇ ರಾಬರಿ ಪ್ರಕರಣಗಳ ದೂರು ದಾಖಲಿಸಿಕೊಳ್ಳದ ಆರೋಪ ಹಾಗೂ ಡೈರಿ ಮೈಂಟೈನ್ ಮಾಡದ ಆರೋಪದ ಮೇಲೆ ಅಮಾನತು ಮಾಡಲಾಗಿದೆ.
ಇದನ್ನೂ ಓದಿ:ಹಣ ದುರುಪಯೋಗ ಆರೋಪ: ಬಿಡದಿ ಠಾಣೆಯ ಇನ್ಸ್ಪೆಕ್ಟರ್ ಶಂಕರ್ ನಾಯಕ್ ಅಮಾನತು
Last Updated : Dec 22, 2023, 1:27 PM IST