ಬೆಂಗಳೂರು: ನಿಷೇಧದ ನಡುವೆಯೂ ತಂಬಾಕು ಮಾರಾಟ ಮಾಡುತ್ತಿದ್ದ ಕಂಪನಿ ಮೇಲೆ ಸಿಸಿಬಿಯ ಎಸಿಪಿ ದಾಳಿ ನಡೆಸಿದ್ದರು. ಆದ್ರೆ ದಾಳಿ ಬಳಿಕ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಿಸಿಬಿ ಅಧಿಕಾರಿ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ: ತನಿಖೆಗೆ ಜಂಟಿ ಪೊಲೀಸ್ ಆಯುಕ್ತರ ಆದೇಶ
ನಿಷೇಧದ ನಡುವೆ ತಂಬಾಕು ಮಾರಾಟ ಮಾಡುತ್ತಿದ್ದ ಕಂಪನಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಪ್ರಕರಣ ದಾಖಲಿಸಬಾರದೆಂದು ಕಂಪನಿ ಮಾಲೀಕ ಲಂಚ ಕೊಡಲು ಮುಂದಾಗಿದ್ದಾನೆ ಎನ್ನಲಾಗಿದೆ.
ಸಿಸಿಬಿ ಅಧಿಕಾರಿ ಮೇಲೆ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ
ಈ ಕುರಿತು ಪ್ರಕರಣ ದಾಖಲಿಸಬಾರದೆಂದು ಕಂಪನಿ ಮಾಲೀಕ ಲಂಚ ಕೊಡಲು ಮುಂದಾಗಿದ್ದರಂತೆ. ಮೊದಲು ಎಸಿಪಿ 20 ಲಕ್ಷ ರೂ. ಲಂಚ ಪಡೆದಿದ್ದಾರೆ. ಅಲ್ಲದೇ ಮತ್ತೆ 65 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಈ ಕುರಿತು ಹಿರಿಯ ಅಧಿಕಾರಿಗಳಿಗೆ ಕಂಪನಿ ಮಾಲೀಕ ದೂರು ನೀಡಿದ್ದಾನೆ. ಬಳಿಕ ಎಸಿಪಿ ಮೇಲೆ ಸಿಸಿಬಿ ಡಿಸಿಪಿ ರವಿಕುಮಾರ್ ತನಿಖೆ ನಡೆಸಿ ವರದಿ ನೀಡುವಂತೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಆದೇಶಿಸಿದ್ದಾರೆ.