ಬೆಂಗಳೂರು:ಬಜಾರ್, ಬೈ ಟೂ ಲವ್ ಚಿತ್ರದ ನಾಯಕನಟ ಧನ್ವೀರ್ ಗೌಡ, ಅಭಿಮಾನಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಉಪ್ಪಾರಪೇಟೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.
ನಿನ್ನೆ ರಾತ್ರಿ ಎಸ್.ಸಿ ರಸ್ತೆಯ ಅನುಪಮಾ ಥಿಯೇಟರ್ ಬಳಿ ಘಟನೆ ನಡೆದಿದ್ದು, ನಟ ಧನ್ವೀರ್ ವಿರುದ್ಧ ಚಂದ್ರಶೇಖರ್ ಎಂಬುವವರು ದೂರು ನೀಡಿದ್ದಾರೆ. ಸ್ನೇಹಿತನ ಜೊತೆ ಊಟ ಮುಗಿಸಿ ಮನೆಗೆ ತೆರಳುತ್ತಿದ್ದ ಚಂದ್ರಶೇಖರ್, ನಟ ಧನ್ವೀರ್ ಕಂಡು ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾರೆ. ಅಭಿಮಾನಿಯ ಬೇಡಿಕೆಗೆ ಧನ್ವೀರ್ ಸ್ಪಂದಿಸಿರಲಿಲ್ಲ. ಹೀಗಾಗಿ ಅಭಿಮಾನಿ ಚಂದ್ರಶೇಖರ್ ಬಹಳ ಬೇಸರಗೊಂಡು ತಮ್ಮ ಅಸಮಾಧಾನ ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.