ಕರ್ನಾಟಕ

karnataka

ETV Bharat / state

ದುಡ್ಡು ಪಡೆದು ಆರೋಪಿಗಳ ಬಿಟ್ಟು ಕಳಿಸಿದ್ದಾರೆ: ಡಿ.ಜೆ. ಹಳ್ಳಿ ಪೊಲೀಸರ ವಿರುದ್ಧ ಮಹಿಳೆಯ ಗಂಭೀರ ಆರೋಪ - ಡಿ.ಜೆ.ಹಳ್ಳಿ ಪೊಲೀಸರ ವಿರುದ್ಧ ಮಹಿಳೆಯ ಗಂಭಿರ ಆರೋಪ

ಕಳೆದ ವರ್ಷ ತನ್ನೂರು ನೊಣವಿನಕೆರೆಗೆ ಹೋಗಿದ್ದಾಗ ಜಮೀನು ವಿಚಾರಕ್ಕೆ ಇವರ ಮೇಲೆ ಗಂಭೀರ ಹಲ್ಲೆ ನಡೆದಿತ್ತು. ಈ ಸಂಬಂಧ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಡಿ.ಜೆ.ಹಳ್ಳಿಯ ತನ್ನ ನಿವಾಸಕ್ಕೆ ವಾಪಾಸಾಗಿದ್ದರು. ಆಗ ಮತ್ತೆ ಕೊಲೆ ಬೆದರಿಕೆ ಕರೆಗಳು ಬಂದಿದ್ದರಿಂದ ಡಿ.ಜೆ. ಹಳ್ಳಿ ಠಾಣೆಯಲ್ಲೂ ದೂರು ದಾಖಲಿಸಿದ್ದರು.

Allegation against the DJ Hall police
ಡಿ.ಜೆ.ಹಳ್ಳಿ ಪೊಲೀಸರ ವಿರುದ್ಧ ಮಹಿಳೆಯ ಗಂಭಿರ ಆರೋಪ

By

Published : Feb 28, 2021, 5:35 PM IST

ಬೆಂಗಳೂರು: ಡಿ.ಜೆ.ಹಳ್ಳಿ ಪೊಲೀಸರು ತನಗೆ ಅನ್ಯಾಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಫೇಸ್​ಬುಕ್​ ಲೈವ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೃತಾ ಎಂಬ ಮಹಿಳೆ ಫೇಸ್​ಬುಕ್ ಲೈವ್ ಮುಖಾಂತರ ಪೊಲೀಸರಿಂದ ತಮಗೆ ಅನ್ಯಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ. ಎಲ್ಲಾ ರೀತಿಯ ಸಾಕ್ಷ್ಯಾಧಾರ ಕೊಟ್ಟರೂ ಪೊಲೀಸರು ಯಾಕೆ ಹೀಗೆ ವರ್ತನೆ ಮಾಡ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ನೊಣವಿನಕೆರೆ ನಿವಾಸಿಯಾಗಿರುವ ಅಮೃತಾ ತಾತ್ಕಾಲಿಕವಾಗಿ ಡಿ.ಜೆ.ಹಳ್ಳಿಯಲ್ಲಿ ವಾಸವಿದ್ದರು. ಕಳೆದ ವರ್ಷ ತನ್ನೂರು ನೊಣವಿನಕೆರೆಗೆ ಹೋಗಿದ್ದಾಗ ಜಮೀನು ವಿಚಾರಕ್ಕೆ ಇವರ ಮೇಲೆ ಗಂಭೀರ ಹಲ್ಲೆ ನಡೆದಿತ್ತು. ಈ ಸಂಬಂಧ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಡಿ.ಜೆ. ಹಳ್ಳಿಯ ತನ್ನ ನಿವಾಸಕ್ಕೆ ವಾಪಸಾಗಿದ್ದರು. ಆದರೆ ಮತ್ತೆ ಕೊಲೆ ಬೆದರಿಕೆ ಕರೆಗಳು ಬಂದಿದ್ದವು. ಹೀಗಾಗಿ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲೂ ಮಹಿಳೆ ದೂರು ನೀಡಿದ್ದರು.

ನಂತರ ಕ್ರಮ ಕೈಗೊಂಡ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದಿದ್ದರಂತೆ. ಆದರೆ ನಂತರ ಆರೋಪಿಗಳನ್ನು ಬಿಟ್ಟು ಕಳಿಸಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮತ್ತೆ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ತೆರಳಿದ ಅಮೃತಾ, ಆರೋಪಿಗಳನ್ನು ಬಿಟ್ಟರೆ ಅವರು ಮತ್ತೆ ಬೆದರಿಕೆ ಹಾಕುತ್ತಾರೆ. ಅವರನ್ನು ಮತ್ತೆ ಬಂಧಿಸಿ ಎಂದು ಕೇಳಿಕೊಂಡಿದ್ದಾರಂತೆ. ಆದರೆ ಪೊಲೀಸರು ದುಡ್ಡು ಪಡೆದು ಆರೋಪಿಗಳನ್ನ ಬಿಟ್ಟು ಕಳಿಸಿದ್ದಾರೆಂದು ಅಮೃತಾ ಆರೋಪಿಸಿದ್ದಾರೆ. ತನಗಾದ ಈ ಎಲ್ಲ ಅನ್ಯಾಯಗಳ ಬಗ್ಗೆ ಫೇಸ್​ಬುಕ್​ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಘಟನೆ ಹಿನ್ನೆಲೆ : ತುಮಕೂರಿನ ನೊಣವಿನಕೆರೆಯ ಬಳಿವಿರುವ ಜಮೀನಿಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಅಮೃತಾ ಹಾಗೂ ಸಂಬಂಧಿಕರ‌ ನಡುವೆ ಮನಸ್ತಾಪ ಉಂಟಾಗಿತ್ತು. ಕಳೆದ ವರ್ಷ ಮೇ 12ರಂದು ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿತ್ತು. ಈ ಸಂಬಂಧ ನೊಣವಿನಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಗ ಎಂಟು ಮಂದಿ ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಇದಾದ ಬಳಿಕ ಬೆಂಗಳೂರಿ‌ನ ಡಿ.ಜೆ.ಹಳ್ಳಿಯಲ್ಲಿ ವಾಸವಾಗಿದ್ದಾಗಲೂ ಸಂಬಂಧಿಕರು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದರು. ಮನೆ ಬಳಿಯು ಬಂದು ಆರೋಪಿಗಳು ಧಮ್ಕಿ ಹಾಕಿರುವುದಾಗಿ ಅಮೃತಾ ಆರೋಪಿಸಿದ್ದರು.

For All Latest Updates

TAGGED:

ABOUT THE AUTHOR

...view details