ಕರ್ನಾಟಕ

karnataka

ETV Bharat / state

ಆಪಾದನೆ ಬಿಟ್ಟು ಬಹಿರಂಗ ಚರ್ಚೆಗೆ ಬನ್ನಿ: ಬಚ್ಚೇಗೌಡರ ವಿರುದ್ಧ ಎಂಟಿಬಿ ಗರಂ - MP Bache Gowda

ಬಚ್ಚೇಗೌಡರು ಮಾಧ್ಯಮದವರ ಮುಂದೆ ಹೇಳಿರುವುದೆಲ್ಲ ಸತ್ಯಕ್ಕೆ ದೂರವಾದ ಮಾತು ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

mtb nagaraj
ಮಾಜಿ ಶಾಸಕ ಎಂಟಿಬಿ ನಾಗರಾಜ್

By

Published : Mar 18, 2020, 5:05 AM IST

ಬೆಂಗಳೂರು: ಸಂಸದ ಬಚ್ಚೇಗೌಡರು ಮಾಧ್ಯಮದವರ ಮುಂದೆ ಹೇಳಿರುವುದೆಲ್ಲ ಸತ್ಯಕ್ಕೆ ದೂರವಾದ ಮಾತು ಎಂದು ಮಾಜಿ ಶಾಸಕ ಎಂಟಿಬಿ ನಾಗರಾಜ್ ಹೇಳಿದರು.

ಮಾಜಿ ಸಚಿವ ಎಂಟಿಬಿ ನಾಗರಾಜ್ ಅಧಿಕಾರ ದುರುಪಯೋಗ ಪಡೆಸಿಕೊಂಡು ಹೊಸಕೋಟೆ ತಾಲೂಕಿನಲ್ಲಿ ಪೊಲೀಸ್ ಠಾಣೆಗಳನ್ನು ತಮ್ಮ ಠಾಣೆಗಳಂತೆ ಮಾರ್ಪಡಿಸಿ ಕೊಂಡಿದ್ದಾರೆಂದು ಚಿಕ್ಕಬಳ್ಳಾಪುರ ಸಂಸದ ಬಿ .ಎನ್.ಬಚ್ಚೇಗೌಡ ಹೇಳಿಕೆ ನೀಡಿದ್ದು, ಇದಕ್ಕೆ ತಿರುಗೇಟು ನೀಡಿದ ಮಾಜಿಮಂತ್ರಿ ಎಂಟಿಬಿ ನಾಗರಾಜ್, ನಾನು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದರೆ ಮುಖ್ಯಮಂತ್ರಿಗಳಿಗೆ ದೂರು ನೀಡಲಿ ಎಂದು ಸವಾಲು ಹಾಕಿದರು.

ಮಾಜಿ ಶಾಸಕ ಎಂಟಿಬಿ ನಾಗರಾಜ್

ಕಳೆದ ಉಪಚುನಾವಣೆಯಲ್ಲಿ ಸೋತ ನಂತರ ಬುದ್ಧಿ ಭ್ರಮಣಯಾಗಿದೆಯೆಂದು ಬಚ್ಚೇಗೌಡ ಹೇಳಿಕೆ ನೀಡಿದ್ದು, ಅದಕ್ಕೆ ವರ್ಷಗಳಿಂದ ಹೊಸಕೋಟೆ ರಾಜಕಾರಣ ಹೇಗಿತ್ತು ಎಂದು ನೋಡಿದರೆ ಯಾರು ಪೊಲೀಸ್ ಠಾಣೆಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ತಿಳಿಯುತ್ತದೆ ಎಂದು ತಿರುಗೇಟು ನೀಡಿದರು.

ಇನ್ನು ಕೆಲವೇ ದಿನಗಳಲ್ಲಿ ನಾನು ಸುದ್ದಿಗೋಷ್ಠಿ ನಡೆಸಿ ಬಚ್ಚೇಗೌಡರ ಅಕ್ರಮಗಳ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡುತ್ತೇನೆ. ವಿನಾಕಾರಣ ನನ್ನ ಮೇಲೆ ಅಪಾದನೆ ವಹಿಸುವ ಬದಲು ಬಹಿರಂಗವಾಗಿ ಯಾವುದೇ ಮಾಧ್ಯಮದಲ್ಲಿ ಚರ್ಚೆಗೆ ಬಂದು ನೇರಾ ನೇರಾ ಚರ್ಚೆಯಲ್ಲಿ ಭಾಗವಹಿಸಲಿ ಎಂದು ಸವಾಲನ್ನು ಹಾಕಿದ್ದಾರೆ.

ABOUT THE AUTHOR

...view details