ಕರ್ನಾಟಕ

karnataka

ETV Bharat / state

ನಾಳೆ ದೀಪ ಬೆಳಗಿಸೋಣ, ಕೊರೊನಾ ವೈರಸ್​​​ ಸೋಲಿಸೋಣ: ಸಿಎಂ - ದೇಶದಲ್ಲಿ ಕೊರೊನಾ ಹಾವಳಿ

ಕೊರೊನಾ ಸೋಂಕಿನ ತಡೆಗೆ ಒಗ್ಗಟ್ಟಿನ ಮಂತ್ರ ಜಪಿಸಿರುವ ಪ್ರಧಾನಿ ಮೋದಿಯವರ ಕರೆ ನಾವೆಲ್ಲಾ ಬೆಂಬಲಿಸೋಣ. ದೀಪ ಬೆಳಗಿಸುವ ಮೂಲಕ ಕೊರೊನಾ ಸೋಂಕನ್ನು ಹಿಮ್ಮೆಟ್ಟಿಸೋಣ ಎಂದು ಸಿಎಂ ಬಿಎಸ್​ವೈ ಮನವಿ ಮಾಡಿದರು.

all support to modi calls tomorrow
ಸಿಎಂ ಬಿಎಸ್ ಯಡಿಯೂರಪ್ಪ

By

Published : Apr 4, 2020, 9:46 PM IST

ಬೆಂಗಳೂರು: ದೇಶದ ಜನತೆ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಸಮರ ಸಾರಬೇಕು. ಈ ಮೂಲಕ ವಿಶ್ವಕ್ಕೆ ಮಾದರಿಯಾಗಬೇಕು. ಪ್ರಧಾನಿ ಮೋದಿಯವರ ಕರೆಯಂತೆ ನಾಳೆ ( ಏ. 5) ರಾತ್ರಿ 9 ಗಂಟೆ 9 ನಿಮಿಷಕ್ಕೆ ದೀಪ, ಟಾರ್ಚ್​ ಬೆಳಗಿಸುವ ಮೂಲಕ ಸೋಂಕಿನ ವಿರುದ್ಧ ಹೋರಾಡೋಣ ಎಂದು ಸಿಎಂ ಬಿ.ಎಸ್.​ಯಡಿಯೂರಪ್ಪ ಮನವಿ ಮಾಡಿದರು.

ಸಿಎಂ ಬಿ.ಎಸ್.ಯಡಿಯೂರಪ್ಪ

ಲಾಕ್​ಡೌನ್​, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮುಖ್ಯ ಉದ್ದೇಶವೇ ಸೋಂಕನ್ನು ಇಲ್ಲವಾಗಿಸುವುದು. ಎಲ್ಲರೂ ತಮ್ಮ ಮನೆ ಒಳಗಡೆ ಮೋದಿಯವರ ಕರೆಯನ್ನು ಬೆಂಬಲಿಸಿ ಎಂದರು.

ಕಣ್ಣಿಗೆ ಕಾಣದ ಶತೃ ವಿರುದ್ಧ ನಾವು ನಡೆಸುತ್ತಿರುವ ಬೆಳಕಿನ ರಣಕಹಳೆ ಇದು. 130 ಕೋಟಿ ಪ್ರಜೆಗಳು ಈ ಹೋರಾಟದಲ್ಲಿ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರುವ ಸಮಯ ಇದು. ದೀಪ ಬೆಳಗಿಸೋಣ, ಕೊರೊನಾ ಹೋಗಲಾಡಿಸೋಣ ಎಂದರು.

ABOUT THE AUTHOR

...view details