ಕರ್ನಾಟಕ

karnataka

ಲಾಕ್‌ಡೌನ್: ರಾಜ್ಯಾದ್ಯಂತ ಉಪನೋಂದಣಿ ಕಚೇರಿ ಸ್ಥಗಿತಗೊಳಿಸಿ ಆದೇಶ

By

Published : May 11, 2021, 2:28 AM IST

ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಲಾಕ್‌ಡೌನ್ ಹೇರಲಾಗಿದೆ. ಆದರೆ ಉಪನೋಂದಣಿ ಕಚೇರಿಗಳಿಗೆ ಲಾಕ್‌ಡೌನ್​ನಿಂದ ವಿನಾಯಿತಿ ನೀಡಲಾಗಿತ್ತು. ಆದಾಯದ ದೃಷ್ಟಿಯಿಂದ ಉಪ ನೋಂದಾಣಿ ಕಚೇರಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಸರ್ಕಾರ ಕಠಿಣ ಲಾಕ್‌ಡೌನ್ ಹೇರಿರುವುದರಿಂದ ಜನರ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.

ವಿಧಾನಸೌಧ

ಬೆಂಗಳೂರು:ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಎಲ್ಲಾ ಉಪನೋಂದಣಿ ಕಚೇರಿಗಳನ್ನು ಸ್ಥಗಿತಗೊಳಿಸಲು ಆದೇಶಿಸಲಾಗಿದೆ.

ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಲಾಕ್‌ಡೌನ್ ಹೇರಲಾಗಿದೆ. ಆದರೆ ಉಪನೋಂದಣಿ ಕಚೇರಿಗಳಿಗೆ ಲಾಕ್‌ಡೌನ್​ನಿಂದ ವಿನಾಯಿತಿ ನೀಡಲಾಗಿತ್ತು. ಆದಾಯದ ದೃಷ್ಟಿಯಿಂದ ಉಪನೋಂದಾಣಿ ಕಚೇರಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಸರ್ಕಾರ ಕಠಿಣ ಲಾಕ್‌ಡೌನ್ ಹೇರಿರುವುದರಿಂದ ಜನರ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಹೀಗಾಗಿ ರಾಜ್ಯದಲ್ಲಿನ ಉಪನೋಂದಣಿ ಕಚೇರಿಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.

ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿಗಳು ಹಾಗೂ ಜಿಲ್ಲಾನೋಂದಣಿ ಕಚೇರಿಗಳನ್ನು ಮೇ 23ರವರೆಗೆ ಸ್ಥಗಿತಗೊಳಿಸಿ ಆದೇಶಿಸಿದೆ. ಇಲಾಖೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಕೇಂದ್ರಸ್ಥಾನದಲ್ಲಿಯೇ ಹಾಜರಾಗಿರಲು ಸೂಚಿಸಿದೆ.

ABOUT THE AUTHOR

...view details