ಬೆಂಗಳೂರು: ಕೊರೊನಾ ವಿರುದ್ಧ ಸದಾ ಹೋರಾಡುತ್ತಿರುವ ಪೊಲೀಸರಿಗೆ ಕೊರೊನಾ ಹೆಮ್ಮಾರಿ ವಕ್ಕರಿಸಿದ್ದ ಬೆನ್ನಲೇ ನಗರ ಪೊಲೀಸರು ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ.
ಕೊರೊನಾ ಎಫೆಕ್ಟ್: ಬೆಂಗಳೂರಿನಲ್ಲಿ ಎಲ್ಲ ಪೊಲೀಸ್ ವಾಹನಗಳಿಗೂ ಸ್ಯಾನಿಟೈಸರ್ ಭಾಗ್ಯ! - ಬೆಂಗಳೂರಿನಲ್ಲಿ ಪೊಲೀಸ್ ವಾಹನಗಳಿಗೂ ಸ್ಯಾನಿಟೈಸರ್,
ಕೊರೊನಾ ಎಫೆಕ್ಟ್ನಿಂದಾಗಿ ಬೆಂಗಳೂರು ನಗರದ ಎಲ್ಲ ಪೊಲೀಸ್ ವಾಹನಗಳಿಗೂ ಸ್ಯಾನಿಟೈಸರ್ ಸಿಂಪಡಿಸಿದ್ದಾರೆ.
ಕೃಪೆ: Social media
ಈ ಸಂಬಂಧ ನಗರದಲ್ಲಿ ಬಳಸುವ ಎಲ್ಲ ಪೊಲೀಸ್ ವಾಹನಗಳಿಗೆ ಸ್ಯಾನಿಟೈಸರ್ ಸಿಂಪಡಿಸಿದ್ದಾರೆ. ಆನ್ ಟ್ರ್ಯಾಕ್ ಕಂಪನಿಯ ನೆರವಿನಿಂದ ಪೊಲೀಸ್ ಇಲಾಖೆಯಲ್ಲಿ ಬಳಸುವ ಬಹುತೇಕ ಪೊಲೀಸ್ ವಾಹನಗಳಿಗೆ ಮೈಸೂರು ರಸ್ತೆಯಲ್ಲಿರುವ ನಗರದ ಕೇಂದ್ರ ವಿಭಾಗದ ಕೇಂದ್ರ ಸಶಸ್ತ್ರ ಮೀಸಲು (ಸಿಎಆರ್) ಮೈದಾನದಲ್ಲಿ ರಾಸಾಯನಿಕ ಸಿಂಪಡಿಸಲಾಯಿತು.
ಹೊಯ್ಸಳ, ಕೆಎಸ್ಆರ್ಪಿ, ಪೊಲೀಸ್ ಬೈಕ್ ಸೇರಿದಂತೆ ಎಲ್ಲ ಪೊಲೀಸ್ ವಾಹನಗಳಿಗೆ ಆನ್ ಟ್ರ್ಯಾಕ್ ಕಂಪನಿಯ ಅಧಿಕಾರಿಗಳು ಸ್ಯಾನಿಟೈಸರ್ ಸಿಂಪಡಿಸಿದರು. ಈ ಮೂಲಕ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಯಿತು.