ಕೋವಿಡ್ ಜೋನ್ನಲ್ಲಿ ಆ ಜಿಲ್ಲೆ ಮಾತ್ರ ಸೇಫ್.. ರಾಜ್ಯದ ಇತರ ಜಿಲ್ಲೆಗಳ ಸ್ಥಿತಿಗತಿ ಹೇಗಿದೆ? - ರೆಡ್ ಜೋನ್ ಜಿಲ್ಲೆಗಳು
ವಾರದಿಂದ ವಾರಕ್ಕೆ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಳವಾಗ್ತಿದ್ದು, ಡೇಂಜರ್ ಜೋನ್ನಲ್ಲಿ ರಾಜ್ಯದ 15 ಜಿಲ್ಲೆಗಳಿವೆ. 14 ಜಿಲ್ಲೆಗಳು ಯೆಲ್ಲೋ ಜೋನ್ನಲ್ಲಿ ಇದ್ದು, ರಾಜ್ಯದ ಒಂದೇ ಒಂದು ಜಿಲ್ಲೆ ಮಾತ್ರ ಸೇಫ್ ಜೋನ್ನಲ್ಲಿದೆ.
ಡೇಂಜರ್
By
Published : May 17, 2021, 5:46 PM IST
|
Updated : May 17, 2021, 6:42 PM IST
ಬೆಂಗಳೂರು: ನಗರಕ್ಕೆ ಸೀಮಿತವಾಗಿದ್ದ ಕೊರೊನಾ ಸೋಂಕು, ಲಾಕ್ ಡೌನ್ ಕಾರಣಕ್ಕೆ ಜನರು ಗ್ರಾಮೀಣ ಭಾಗಕ್ಕೆ ವಲಸೆ ಹೊರಟ ಪರಿಣಾಮ ಇದೀಗ ಎಲ್ಲ ಕಡೆ ಕೊರೊನಾ ರಣಕೇಕೆ ಮುಂದುವರೆದಿದೆ. ಹೀಗಾಗಿ, ರಾಜ್ಯ ಸರ್ಕಾರಕ್ಕೆ ಲಾಕ್ಡೌನ್ ವಿಸ್ತರಿಸೋದು ಅನಿವಾರ್ಯವಾಗುತ್ತಾ? ಎಂಬ ಪ್ರಶ್ನೆ ಕಾಡದೇ ಇರದು. ಏಕೆಂದರೆ ರಾಜ್ಯದ ಬಹಳಷ್ಟು ಜಿಲ್ಲೆಗಳ ಪಾಸಿಟಿವಿಟಿ ರೇಟ್ ಬೆಚ್ಚಿ ಬೀಳಿಸುತ್ತಿದೆ.
ವಾರದಿಂದ ವಾರಕ್ಕೆ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಳವಾಗ್ತಿದ್ದು, ಡೇಂಜರ್ ಜೋನ್ನಲ್ಲಿ ರಾಜ್ಯದ 15 ಜಿಲ್ಲೆಗಳು ಇವೆ. 14 ಜಿಲ್ಲೆಗಳು ಯೆಲ್ಲೋ ಜೋನ್ನಲ್ಲಿ ಇದ್ದು, ರಾಜ್ಯದ ಒಂದೇ ಒಂದು ಜಿಲ್ಲೆ ಮಾತ್ರ ಸೇಫ್ ಜೋನ್ನಲ್ಲಿದೆ.
ದೇಶಾದ್ಯಂತ 6 ರಿಂದ 8 ವಾರಗಳ ಲಾಕ್ಡೌನ್ಗೆ ಐಸಿಎಂಆರ್ ಸಲಹೆ ನೀಡಿದೆ. ಮೇ 20ರೊಳಗೆ ಪಾಸಿಟಿವಿಟಿ ರೇಟ್ 10ಕ್ಕಿಂತ ಕಡಿಮೆ ಆಗಗಿದ್ದರೆ ಲಾಕ್ಡೌನ್ ಮುಂದುವರೆಸುವಂತೆ ಸಲಹೆ ನೀಡಿದೆ. ICMR ಸಲಹೆಯಂತೆ ಸದ್ಯ ಚಿತ್ರದುರ್ಗ ಜಿಲ್ಲೆಯೊಂದನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳು ಡೇಂಜರ್ ಜೋನ್ನಲ್ಲಿವೆ. ಏಕೆಂದರೆ ಕಳೆದ ಒಂದು ವಾರದ ಸರಾಸರಿ ಪಾಸಿಟಿವಿಟಿ ರೇಟ್ ಆತಂಕ ಮೂಡಿಸುವಂತಿದೆ. ಮೇ 7 ರಿಂದ 13ರ ವರೆಗಿನ ಸರಾಸರಿ ಪಾಸಿಟಿವಿಟಿ ರೇಟ್ ನೋಡಿದರೆ ಲಾಕ್ಡೌನ್ ಅನಿರ್ವಾಯವಾಗಿದೆ.
ರೆಡ್ ಹಾಗೂ ಯೆಲ್ಲೋ ಜೋನ್ನಲ್ಲಿರುವ ಜಿಲ್ಲೆಗಳ ಪಟ್ಟಿ
ರೆಡ್ ಜೋನ್ ಜಿಲ್ಲೆಗಳು
ಪಾಸಿಟಿವಿಟಿ ರೇಟ್
ಯೆಲ್ಲೋ ಜೋನ್ ಜಿಲ್ಲೆಗಳು
ಪಾಸಿಟಿವಿಟಿ ರೇಟ್
ಉತ್ತರ ಕನ್ನಡ
38.27
ದಕ್ಷಿಣ ಕನ್ನಡ
26.27
ಬಳ್ಳಾರಿ
34.60
ಧಾರವಾಡ
26.19
ಮೈಸೂರು
33.90
ಕೊಪ್ಪಳ
25.10
ಕೋಲಾರ
33.81
ಗದಗ
23.64
ತುಮಕೂರು
33.59
ಮಂಡ್ಯ
23.54
ಹಾಸನ
32.35
ಚಿಕ್ಕಬಳ್ಳಾಪುರ
23.16
ಕೊಡಗು
31. 57
ಚಿಕ್ಕಮಗಳೂರು
21.85
ಉಡುಪಿ
30.88
ರಾಮನಗರ
21.70
ರಾಯಚೂರು
29.16
ಬೆಂಗಳೂರು ಗ್ರಾಮಾಂತರ
21.35
ಬೆಂಗಳೂರು ನಗರ
28.84
ಯಾದಗಿರಿ
20.15
ಬಾಗಲಕೋಟೆ
28.58
ಬೆಳಗಾವಿ
19.56
ಕಲಬುರಗಿ
28.44
ದಾವಣಗೆರೆ
15.71
ಚಾಮರಾಜನಗರ
28.05
ಹಾವೇರಿ
11.76
ಶಿವಮೊಗ್ಗ
27.24
ಬೀದರ್
11.32
ವಿಜಯಪುರ
27.24
ಸೇಫ್ ಜೋನ್ನಲ್ಲಿರುವ ಒಂದೇ ಒಂದು ಜಿಲ್ಲೆಯೆಂದರೆಚಿತ್ರದುರ್ಗ - 5.63. ಒಟ್ಟಾರೆ, ಕರ್ನಾಟದಕ ಸರಾಸರಿ ಪಾಸಿಟಿವಿಟಿ ರೇಟ್ 27.24% ರಷ್ಟು ಇದೆ. ಕೊರೊನಾ ಸೋಂಕು ಅನ್ನ ನಿರ್ಲಕ್ಷ್ಯ ಮಾಡದೇ ಜನರು ಸುಖಾಸುಮ್ನೆ ಓಡಾಡುವುದು, ಗುಂಪು ಸೇರುವುದನ್ನ ತಡೆಯಬೇಕಿದೆ. ಇಲ್ಲವೆಂದರೆ ಎರಡನೇ ಅಲೆಯ ತೀವ್ರತೆ ಇನ್ನಷ್ಟು ಭೀಕರವಾಗಿ ಇರಲಿದೆ.