ಕರ್ನಾಟಕ

karnataka

ETV Bharat / state

ಶರತ್ ಬಚ್ಚೇಗೌಡ, ರಾಜು ಕಾಗೆ ಪಕ್ಷದ ಚೌಕಟ್ಟಿನಲ್ಲಿ ನಡೆಯದಿದ್ರೆ ಶಿಸ್ತು ಕ್ರಮ: ಆರ್.ಅಶೋಕ್ - ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆ

ನಾಳೆ ಬಿಜೆಪಿಗೆ ಅನರ್ಹ ಶಾಸಕರು ಸೇರ್ಪಡೆಯಾಗುತ್ತಿದ್ದು, ಅವರೆಲ್ಲರನ್ನೂ ಮತ್ತೆ ಗೆಲ್ಲಿಸಿಕೊಂಡು ಬರಬೇಕು. ಶಾಸಕರನ್ನಾಗಿ ಮಾಡಿ ಪಕ್ಷಕ್ಕೆ ಬಲ ತುಂಬಬೇಕು ಎಂದು ನಿರ್ಧರಿಸಿದ್ದೇವೆ‌. ಆದರೆ ಶರತ್ ಬಚ್ಚೇಗೌಡ ಹಾಗೂ ರಾಜು ಕಾಗೆ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದು, ಅನಿವಾರ್ಯವಾದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

R. Ashok , ಆರ್.ಅಶೋಕ್

By

Published : Nov 13, 2019, 7:53 PM IST

ಬೆಂಗಳೂರು:ಶರತ್ ಬಚ್ಚೇಗೌಡ ಹಾಗೂ ರಾಜು ಕಾಗೆ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದು, ಅವರ ಜೊತೆ ಪಕ್ಷದವರು ಮಾತನಾಡುತ್ತಿದ್ದಾರೆ. ಇವರು ಪಕ್ಷದ ಚೌಕಟ್ಟಿನಲ್ಲಿ ನಡೆಯದಿದ್ದರೇ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದರು.

ಕಂದಾಯ ಸಚಿವ ಆರ್.ಅಶೋಕ್

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಎಲ್ಲಾ ಅನರ್ಹ ಶಾಸಕರು ನಾಳೆ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಅಷ್ಟೂ ಜನರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಅವರೆಲ್ಲರನ್ನೂ ಮತ್ತೆ ಗೆಲ್ಲಿಸಿಕೊಂಡು ಬರಬೇಕು. ಶಾಸಕರನ್ನಾಗಿ ಮಾಡಿ ಪಕ್ಷಕ್ಕೆ ಬಲ ತುಂಬಬೇಕು ಎಂದು ನಿರ್ಧರಿಸಿದ್ದೇವೆ‌ ಎಂದರು.

ಅನರ್ಹರ ಕ್ಷೇತ್ರದ ಟಿಕೆಟ್ ಹಂಚಿಕೆ ಸಂಬಂಧ ಶರತ್ ಬಚ್ಚೇಗೌಡ ಹಾಗೂ ರಾಜು ಕಾಗೆ ಇಬ್ಬರದ್ದು ಮಾತ್ರ ಸ್ವಲ್ಪ ಕಾಂಪ್ಲಿಕೇಟ್ ಆಗಿದೆ. ಉಳಿದೆಲ್ಲಾ ಕ್ಷೇತ್ರಗಳಲ್ಲಿ ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ಕೆಲಸ ಮಾಡಲು ಎಲ್ಲರೂ ಒಪ್ಪಿದ್ದಾರೆ ಎನ್ನುವ ಮೂಲಕ ಅನರ್ಹ ಶಾಸಕರಿಗೆ ಟಿಕೆಟ್ ಪಕ್ಕ ಎಂಬ ಸುಳಿವು ನೀಡಿದರು.

ನಾಳೆ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಅನರ್ಹ ಶಾಸಕರು ಬಿಜೆಪಿ ಸೇರಲಿದ್ದಾರೆ. ಈ ವೇಳೆ ರಾಜ್ಯ ಉಸ್ತುವಾರಿ ಮುರಳೀಧರರಾವ್ ಕೂಡ ಇರಲಿದ್ದಾರೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details