ಬೆಂಗಳೂರು:ರಾಜೀನಾಮೆ ನೀಡಿದ ಶಾಸಕರು ಮಾತ್ರವಲ್ಲ, ಎಲ್ಲಾ 78 ಶಾಸಕರು ನನ್ನ ಆಪ್ತರು ಎಂದು ಹೇಳುವ ಮೂಲಕ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಮೇಲಿನ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಎಲ್ಲಾ ಕಾಂಗ್ರೆಸ್ ಶಾಸಕರು ನನ್ನ ಆಪ್ತರೇ: ಟೀಕೆಗೆ ಸಿದ್ದು ಟಾಂಗ್ - ಸಿದ್ದರಾಮಯ್ಯ
ರಾಜೀನಾಮೆ ನೀಡುವ ಶಾಸಕರೆಲ್ಲ ಸಿದ್ದರಾಮಯ್ಯ ಆಪ್ತರು ಎಂಬ ಕಾಂಗ್ರೆಸ್ ವಲಯ ಹಾಗೂ ಮಾಧ್ಯಮಗಳ ಆರೋಪಕ್ಕೆ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
ಟ್ವೀಟ್ ಮೂಲಕ ತಮ್ಮ ನಿಲುವು ಪ್ರಕಟಿಸಿರುವ ಸಿದ್ದರಾಮಯ್ಯ, ರಾಜೀನಾಮೆ ನೀಡಿರುವ ಶಾಸಕರು ಮಾತ್ರವಲ್ಲ, ಕಾಂಗ್ರೆಸ್‌ನ ಎಲ್ಲ 78 ಶಾಸಕರೂ ನನಗೆ ಆಪ್ತರಾಗಿದ್ದಾರೆ. ಅವರು ನಮ್ಮ ಪಕ್ಷದ ಬಹಳಷ್ಟು ನಾಯಕರಿಗೂ ಆಪ್ತರಾಗಿದ್ದಾರೆ. ಮಾಧ್ಯಮಗಳು ಸೆಲೆಕ್ಟಿವ್ ಆಗಿ ಈ ಶಾಸಕರು ನನ್ನ ಆಪ್ತರು ಎಂದು ಹೇಳುತ್ತಿರುವುದು ಸರಿ ಅಲ್ಲ. ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ರಾಜೀನಾಮೆ ನೀಡುವ ಶಾಸಕರೆಲ್ಲ ಸಿದ್ದರಾಮಯ್ಯ ಆಪ್ತರು ಎಂಬ ಕಾಂಗ್ರೆಸ್ ವಲಯ ಹಾಗೂ ಮಾಧ್ಯಮದ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಸಿದ್ದರಾಮಯ್ಯ, ಇದರ ಜೊತೆಜೊತೆಗೆ ರಾಜೀನಾಮೆ ನೀಡಿದವರು ನನಗೆ ಮಾತ್ರವಲ್ಲ. ನಮ್ಮ ಪಕ್ಷದ ಇನ್ನಿತರ ನಾಯಕರಿಗೂ ಆಪ್ತರು ಎನ್ನುವ ಮೂಲಕ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.