ಕರ್ನಾಟಕ

karnataka

ETV Bharat / state

2013-2023 ಮಾರ್ಚ್ ವರೆಗಿನ ಎಲ್ಲ ಪ್ರಕರಣಗಳ ತನಿಖೆ ಆಗಲಿ: ಮಾಜಿ ಸಿಎಂ ಬೊಮ್ಮಾಯಿ - ಈಟಿವಿ ಭಾರತ್​ ಕನ್ನಡ ನ್ಯೂಸ್

ಎಲ್ಲಾ ಕೇಸ್​ಗಳ​ ತನಿಖೆಯಾಗಲಿ ಯಾರು ತಪ್ಪಿತಸ್ಥರು ಇದ್ದಾರೊ ಅವರಿಗೆ ಶಿಕ್ಷೆಯಾಗಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಾಜಿ ಸಿಎಂ ಬೊಮ್ಮಾಯಿ
ಮಾಜಿ ಸಿಎಂ ಬೊಮ್ಮಾಯಿ

By

Published : Jul 5, 2023, 8:29 PM IST

Updated : Jul 5, 2023, 8:45 PM IST

ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು : ಸರ್ಕಾರ ನಿಜವಾಗಿಯೂ ಭ್ರಷ್ಟಾಚಾರದ ವಿರುದ್ದ ಇದ್ದರೆ, ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹ ಮಾಡುತ್ತೇನೆ. 2013 ರಿಂದ 2023 ಮಾರ್ಚ್ ವರೆಗೂ, ಎಲ್ಲಾ ಕೇಸುಗಳ ತನಿಖೆಯೂ ಆಗಲಿ. ಈಗಾಗಲೇ ಸರ್ಕಾರ ನೇಮಿಸಿರುವ ಕಮಿಷನ್ ಮುಂದೆ ಆ ಎಲ್ಲ ಕೇಸ್​ಗಳನ್ನ ಇಡಲಿ. ಸೆಲೆಕ್ಟಿವ್ ಆಗಿ ರಾಜಕೀಯ ಪ್ರೇರಿತವಾಗಿ ತನಿಖೆ ಮಾಡದೇ, ಎಲ್ಲಾ ಕೇಸ್​ ತನಿಖೆಯಾಗಲಿ. ಯಾರು ತಪ್ಪಿತಸ್ಥರು ಇದ್ದಾರೊ ಅವರಿಗೆ ಶಿಕ್ಷೆಯಾಗಲಿ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಶೇ 40ರಷ್ಟು ಕಮಿಷನ್ ತನಿಖೆ ವಿಚಾರವಾಗಿ ಪ್ರತಿಕ್ರಿಸಿದ ಅವರು, ಶೇ 40ರಷ್ಟು ಕಮಿಷನ್​ ಅಲಿಗೇಷನ್ ಅನ್ನು ಕಾಂಗ್ರೆಸ್​ ನವರು ಒಂದೂವರೆ ವರ್ಷದಿಂದ ಆರೋಪ‌ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ದಾಖಲೆ ಕೊಟ್ಟಿಲ್ಲ. ತನಿಖೆ ಮಾಡಿದರೇ ನಮಗೆ ನ್ಯಾಯ ಸಿಗುವ ಭರವಸೆ ಇದೆ. ಯಾರು ತಪ್ಪಿತಸ್ಥರಿದ್ದಾರೋ ಅವರಿಗೆ ಶಿಕ್ಷೆಯಾಗಲಿ. ಈಗಾಗಲೇ ಹಲವು ಕೇಸ್ ಗಳು ಲೋಕಾಯುಕ್ತದ ಮುಂದೆ ಇವೆ. ಈ ಹಿಂದೆ ಬಿಬಿಎಂಪಿ ಹಾಗೂ ಇತರ ಇಲಾಖೆ ವಿರುದ್ದ ಶೇ 40ರಷ್ಟು ಕಮಿಷನ್​ ತೆಗೆದುಕೊಂಡಿರುವುದಾಗಿ ಹೇಳಿ ಲೋಕಾಯುಕ್ತಾದಲ್ಲಿ ಕೇಸ್ ದಾಖಲಾಗಿದೆ. ಅವುಗಳನ್ನು ಕೂಡ ತನಿಖೆ ನಡೆಸಲಿ. ಕೆಂಪಣ್ಣ ಆರೋಪದ ವಿರುದ್ದ ಮುನಿರತ್ನ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಇನ್ನು ಅದಕ್ಕೆ ಅವರು ದಾಖಲೆ ಕೊಟ್ಟಿಲ್ಲ ಉತ್ತರ ಕೊಟ್ಟಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಅವಧಿ ಹಗರಣಗಳನ್ನು ತನಿಖೆಗೆ ಒಳಪಡಿಸಿ; ಎನ್.ಆರ್ ರಮೇಶ್ :2019 ರಿಂದ 2023 ರ ಅವಧಿಯ 4 ವರ್ಷಗಳಲ್ಲಿ ನಡೆದಿರುವ ಹಗರಗಳನ್ನು ಸಿಐಡಿ ಅಥವಾ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಸರ್ಕಾರ ವಹಿಸಿದೆ. ಇದಕ್ಕೆ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್ ಆರ್ ರಮೇಶ್ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿನ ಅಕ್ರಮಗಳನ್ನು ಸಹ ತನಿಖೆಗೆ ಒಳಪಡಿಸಲು ಮುಖ್ಯ ಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ.

ಬಿಟ್ ಕಾಯಿನ್ ಹಗರಣ, ಪಿಎಸ್ಐ ನೇಮಕಾತಿ ಅಕ್ರಮ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣ, ಕೋವಿಡ್ ವೇಳೆ, ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಸಲಕರಣೆ, ಔಷಧಗಳ ಖರೀದಿ ಅಕ್ರಮ, ವಿಶ್ವವಿದ್ಯಾಲಯಗಳಲ್ಲಿ ನಡೆದಿರುವ ಹಗರಣಗಳು, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಸಬ್ಸಿಡಿ ಬಿಡುಗಡೆಯಲ್ಲಿ ಅಕ್ರಮ, ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ, ಆಕ್ಸಿಜನ್ ದುರಂತ, ನೀರಾವರಿ ಯೋಜನೆಗಳ ಗುತ್ತಿಗೆಯಲ್ಲಿ ಕಮಿಷನ್ ದಂಧೆ ಮೊದಲಾದ ಯೋಜನೆಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವಿವಿಧ ತನಿಖಾ ಸಂಸ್ಥೆಗಳ ತನಿಖೆಗೆ ವಹಿಸಿರುವುದನ್ನು ನಾವು ಸ್ವಾಗತಿಸುತ್ತೇವೆ.

ಹಾಗೆಯೇ, ತಾವು ಪಾರದರ್ಶಕ ರಾಜಕೀಯ ಜೀವನವನ್ನು ನಡೆಸುತ್ತಿರುವುದು ನಿಜವೇ ಆಗಿದ್ದಲ್ಲಿ ತಾವು ಈ ಹಿಂದೆ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದ 2013-2018 ರ 5 ವರ್ಷಗಳ ಅವಧಿಯಲ್ಲಿ ನಡೆದಿರುವ ಅಕ್ರಮಗಳನ್ನು ಸಹ ತನಿಖೆಗಗೆ ವಹಿಸಬೇಕು ಎಂದು ವಿನಂತಿಸಿದ್ದಾರೆ.

800 ಕೋಟಿಗೂ ಹೆಚ್ಚು ಹಣವನ್ನು ದುರ್ಬಳಕೆ ಮಾಡಿ ಕೊಂಡಿರುವ ಕೃಷಿ ಭಾಗ್ಯ ಹಗರಣ, ಪಾಲಿಕೆ ವ್ಯಾಪ್ತಿಯಲ್ಲಿ 174 ಇಂದಿರಾ ಕ್ಯಾಂಟೀನ್ ಗಳ ನಿರ್ಮಾಣದ ಹೆಸರಿನಲ್ಲಿ ನಡೆದಿರುವ 35 ಕೋಟಿ ಮೊತ್ತದ ಹಗರಣ, ಇಂದಿರಾ ಕ್ಯಾಂಟೀನ್ ಗ್ರಾಹಕರ ಹೆಸರಿನಲ್ಲಿ ನಡೆದಿರುವ 560 ಕೋಟಿ ರೂಪಾಯಿ ಮೊತ್ತದ ಹಗರಣ, 160 ಕೋಟಿ ರೂಪಾಯಿ ಮೊತ್ತದ ಬೀದಿ ದೀಪಗಳ ಹಗರಣ, ಬಿಬಿಎಂಪಿ ತ್ಯಾಜ್ಯ ವಿಲೇವಾರಿ ವಾಹನಗಳ ಖರೀದಿ ಹಗರಣ, ಬನ್ನೇರುಘಟ್ಟ ರಸ್ತೆಯ ಬೇಗೂರು ಪ್ರದೇಶದಲ್ಲಿ 850 ಕೋಟಿ ಮೌಲ್ಯದ ಮೀಸಲು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಬೃಹತ್ ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿರುವ ಭೂ ಹಗರಣ ಸೇರಿದಂತೆ 20 ಕೋಟಿಗೂ ಹೆಚ್ಚು ಕೊಳ್ಳೆಹೊಡೆದಿರುವ ಯೋಜನೆಗಳನ್ನು ಪಟ್ಟಿ ಮಾಡಿದ ಮಾಹಿತಿಯನ್ನು ಪತ್ರದೊಂದಿಗೆ ಸಿ. ಎಂ ಕಚೇರಿಗೆ ಎನ್. ಆರ್ ರಮೇಶ್ ಕಳುಹಿಸಿ ಕೊಟ್ಟಿದ್ದಾರೆ.

ಇದನ್ನೂ ಓದಿ :Basavaraj Bommai: ಸಿಎಂ ಕಚೇರಿಯಲ್ಲಿ ಸಣ್ಣ ಹುದ್ದೆಗೆ ₹ 30 ಲಕ್ಷ, ದೊಡ್ಡ ಹುದ್ದೆಗೆ ಕೋಟಿ ಕೋಟಿ ಇದೆ: ಮಾಜಿ ಸಿಎಂ ಬೊಮ್ಮಾಯಿ

Last Updated : Jul 5, 2023, 8:45 PM IST

ABOUT THE AUTHOR

...view details