ಬೆಂಗಳೂರು: ಶೃಂಗೇರಿಯಲ್ಲಿರುವ ಶಂಕರಾಚಾರ್ಯರ ಮೂರ್ತಿ ಮೇಲೆ ಅನ್ಯ ಧರ್ಮೀಯರ ಧ್ವಜ ಹಾರಿಸಿದ್ದು, ಅರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಗೃಹ ಸಚಿವ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಶಂಕರಾಚಾರ್ಯರ ಮೂರ್ತಿ ಮೇಲೆ ಅನ್ಯ ಧರ್ಮದ ಧ್ವಜ ಹಾರಿಸಿದ ಆರೋಪ: ಕ್ರಮಕ್ಕೆ ಮನವಿ - Basavaraj bommai news
ಶೃಂಗೇರಿ ಶಂಕರಾಚಾರ್ಯರ ಮೂರ್ತಿ ಮೇಲೆ ಅನ್ಯ ಧರ್ಮದ ಧ್ವಜ ಹಾರಿಸಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಮನವಿ
ವಿಧಾನಸೌಧದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಬ್ರಾಹ್ಮಣ ಮಂಡಳಿ ಅಧ್ಯಕ್ಷ ಎಚ್. ಎಸ್ ಸಚ್ಚಿದಾನಂದ ಮೂರ್ತಿ ಭೇಟಿ ಮಾಡಿದರು.
ಶೃಂಗೇರಿಯಲ್ಲಿ ಶಂಕರಾಚಾರ್ಯರ ಪುತ್ಥಳಿ ಮೇಲೆ ಅನ್ಯ ಧರ್ಮೀಯರ ಧ್ವಜ ಹಾರಿಸಿದ್ದಾರೆ. ಇದು ಹಿಂದೂ ಧರ್ಮದ ಶ್ರದ್ಧೆಗೆ ಹೊಡೆತ ನೀಡಿದೆ. ಹೀಗಾಗಿ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಈ ಸಂದರ್ಭ ಸಚಿವರಲ್ಲಿ ಮನವಿ ಮಾಡಿದರು.