ಬೆಂಗಳೂರು:ಫೇಸ್ಬುಕ್ ಪೋಸ್ಟ್ ಹಾಗೂ ರಾಜಕೀಯ ಜಿದ್ದಾ ಜಿದ್ದಿಯಿಂದಾಗಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜೆ ಹಳ್ಳಿ ಠಾಣೆಗೆ ಆಗಮಿಸಿ ಅಖಂಡ ಶ್ರೀನಿವಾಸಮೂರ್ತಿ ದೂರು ನೀಡಿದ್ದಾರೆ.
ಮಂಗಳವಾರ ನಡೆದ ದುರ್ಘಟನೆ ವೇಳೆ ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ, ಕಚೇರಿ, ಅಕ್ಕ ಪಕ್ಕದವರ ಆಸ್ತಿ-ಪಾಸ್ತಿ ಸಂಪೂರ್ಣವಾಗಿ ಧ್ವಂಸವಾಗಿತ್ತು. ಹೀಗಾಗಿ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.