ಬೆಂಗಳೂರು: ಸರ್ಕಾರದ ಮೇಲೆ ನಂಬಿಕೆ ಹೊರಟುಹೋಗಿದೆ. ಕೂಡಲೇ ಸರ್ಕಾರ ನೌಕರರ ಜೊತೆ ಮಾತುಕತೆಗೆ ಮುಂದಾಗಬೇಕು ಎಂದು ಎಐಟಿಯುಸಿ ಸಂಘಟನೆ ರಾಜ್ಯಾಧ್ಯಕ್ಷ ಅನಂತ್ ಸುಬ್ಬರಾವ್ ಆಗ್ರಹಿಸಿದ್ದಾರೆ.
ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಲು ಸರ್ಕಾರ ತಡ ಮಾಡಬಾರದು: ಅನಂತ್ ಸುಬ್ಬರಾವ್ - ಕಾರ್ಮಿಕ ಸಂಘಟನೆಯ ರಾಜ್ಯಾಧ್ಯಕ್ಷ ಅನಂತ್ ಸುಬ್ಬರಾವ್
ಸಾರಿಗೆ ನೌಕರರ ಮುಷ್ಕರ ಸಂಬಂಧ ಕಾರ್ಮಿಕ ಸಂಘಟನೆಯ ರಾಜ್ಯಾಧ್ಯಕ್ಷ ಅನಂತ್ ಸುಬ್ಬರಾವ್ ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿದ್ದಾರೆ. ನೌಕರರ ಬೇಡಿಕೆಗೆ ಸರ್ಕಾರ ಶೀಘ್ರ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.
ಅನಂತ್ ಸುಬ್ಬರಾವ್
ಈಟಿವಿ ಭಾರತದ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಸರ್ಕಾರ ಮುಖಂಡರ ಜೊತೆ ಮಾತುಕತೆಗೆ ನಿರ್ಧರಿಸಬೇಕು. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಲು ಸಾಧ್ಯ. ಈಗಾಗಲೇ ಸರ್ಕಾರ ಸಮಸ್ಯೆ ಬಗೆಹರಿಸಲು ಮೂರು ತಿಂಗಳ ಕಾಲಹರಣ ಮಾಡಿದೆ. ಇನ್ನೂ ತಡ ಮಾಡಬಾರದು. ಇದನ್ನು ಬಿಟ್ಟು ಖಾಸಗಿ ಬಸ್ ಓಡಿಸುವುದು ಪರ್ಯಾಯವಲ್ಲ ಎಂದರು.
ಇದನ್ನೂ ಓದಿ:ಸಾರಿಗೆ ನೌಕರರ ಒಂದು ದಿನದ ಮುಷ್ಕರದಿಂದ ಆದ ನಷ್ಟವೆಷ್ಟು ಗೊತ್ತಾ?