ಕರ್ನಾಟಕ

karnataka

ETV Bharat / state

ವಾಯುಭಾರ ಕುಸಿತ : ಬೆಂಗಳೂರಿಗರಿಗೆ ಮತ್ತೆ ಕಾಡಲಿದ್ದಾನೆ ವರುಣ ದೇವ

ಬೆಂಗಳೂರಿನಲ್ಲಿ ಇನ್ನೂ ನಾಲ್ಕೈದು ದಿನ ಭಾರಿ ಮಳೆಯಾಗಲಿದೆ. ಶ್ರೀಲಂಕಾ ಭಾಗದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ದಕ್ಷಿಣ ಒಳನಾಡು ಸೇರಿದಂತೆ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಹವಾಮಾನ ಇಲಾಖೆ ವಿಜ್ಞಾನಿ ಸಿ.ಎಸ್ ಪಾಟೀಲ್

By

Published : Oct 28, 2019, 6:00 PM IST

ಬೆಂಗಳೂರು :ನಗರದಲ್ಲಿ ಇನ್ನೂ ನಾಲ್ಕೈದು ದಿನ ಭಾರಿ ಮಳೆಯಾಗಲಿದೆ. ಶ್ರೀಲಂಕಾ ಭಾಗದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ದಕ್ಷಿಣ ಒಳನಾಡು ಸೇರಿದಂತೆ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಹವಾಮಾನ ಇಲಾಖೆ ವಿಜ್ಞಾನಿ ಸಿ.ಎಸ್ ಪಾಟೀಲ್

ಈಟಿವಿ ಭಾರತ್ ಜೊತೆ ಮಾತನಾಡಿದ ಹವಾಮಾನ ಇಲಾಖೆ ವಿಜ್ಞಾನಿ ಸಿ.ಎಸ್. ಪಾಟೀಲ್, ಉತ್ತರ ಒಳನಾಡು ಜಿಲ್ಲೆಯಲ್ಲಿ ಮುಂದಿನ ಎರಡು ದಿನದಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ, ಆದರೆ ಕರಾವಳಿ ಜಿಲ್ಲೆಗಳಲ್ಲಿ ದಿನಾಂಕ 30-31 ರ ನಂತರ ಮಳೆ ಅಧಿಕವಾಗಲಿದೆ. ಬೆಂಗಳೂರಲ್ಲೂ ನಾಲ್ಕೈದು ದಿನ ಮಳೆ ವ್ಯಾಪಕವಾಗಿ ಮುಂದುವರಿಯಲಿದೆ ಎಂದು ತಿಳಿಸಿದರು.

ಒಂದೆಡೆ ಮಳೆ ಹೆಚ್ಚಾಗುವುದರಿಂದ ಪರಿಸರ ಪ್ರೇಮಿಗಳಿಗೆ ಖುಷಿಯ ಸಂಗತಿ ಆಗಿದೆ, ಇತ್ತ ಪಟಾಕಿ ಪ್ರೇಮಿಗಳಿಗೆ ನಿರಾಸೆಯುಂಟು ಮಾಡಲಿದೆ. ರಾತ್ರಿ ವೇಳೆಯಲ್ಲೇ ಮಳೆ ಹೆಚ್ಚಾಗಿ ಸುರಿಯಲಿರುವುದರಿಂದ ಪಟಾಕಿಯಿಂದ ಆಗುವ ಮಾಲಿನ್ಯ ಕಡಿಮೆಯಾಗಲಿದೆ.

ABOUT THE AUTHOR

...view details