ಬೆಂಗಳೂರು: ರಾಜ್ಯ ಆಂತರಿಕಾ ಭದ್ರತಾ ಇಲಾಖೆಗೆ ಹೊಸ ಅತಿಥಿಗಳ ಆಗಮನವಾಗಿದೆ. ಪೊಲೀಸರ ಜೊತೆ ಇನ್ನು ಕೆಲವೇ ವರ್ಷಗಳಲ್ಲಿ ಏರ್ಪೋರ್ಟ್ ಭದ್ರತೆಗೆ ಜರ್ಮನ್ ಶೆಫರ್ಡ್ ನಾಯಿಗಳು ನಿಯೋಜನೆಗೊಳ್ಳಲಿವೆ.
ರಾಜ್ಯದ ಏಳು ವಿಮಾನ ನಿಲ್ದಾಣಗಳಲ್ಲಿ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿರುವ ಐಎಸ್ಡಿಗೆ ಇದೀಗ 6 ಜರ್ಮನ್ ಶೆಫರ್ಡ್ಸ್ ನಾಯಿಗಳ ಸೇರ್ಪಡೆಯಾಗಿದೆ. ಈ ಹಿನ್ನೆಲೆಯಲ್ಲಿ ನಾಯಿ ಮರಿಗಳಿಗೆ ಕೆಲವು ವರ್ಷಗಳ ತರಬೇತಿ ನೀಡಿ ಇಲಾಖೆಗೆ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ.
ಐಎಸ್ಡಿ ಪೊಲೀಸರೊಂದಿಗೆ ವಿಮಾನ ನಿಲ್ದಾಣದ ಭದ್ರತೆ ಬರಲಿವೆ ಜರ್ಮನ್ ಶೆಫರ್ಡ್ ಈ ನಾಯಿಗಳು ಬಳ್ಳಾರಿ, ಬೀದರ್, ಕಲಬುರಗಿ, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಶಿವಮೊಗ್ಗ ಏರ್ಪೋರ್ಟ್ ಭದ್ರತೆಯಲ್ಲಿ ಪೊಲೀಸರ ಜೊತೆ ನಿಯೋಜನೆಗೊಳ್ಳಲಿವೆ.
ಸ್ಫೋಟಕಗಳು ಹಾಗೂ ಡ್ರಗ್ಸ್ ಪತ್ತೆ ಹಚ್ಚುವ ಬಗ್ಗೆ ನಾಯಿಗಳಿಗೆ ವಿಶೇಷ ತರಬೇತಿ ನಡೆಯಲಿದೆ ಎಂದು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ ರಾವ್ ತಿಳಿಸಿದರು.
ಇದನ್ನೂ ಓದಿ:ಶಿವಮೊಗ್ಗ ಸ್ಫೋಟ ಪ್ರಕರಣ: ಕಲ್ಲು ಕ್ವಾರಿಯ ಮಾಲೀಕ ಸೇರಿ ಮೂವರ ವಿಚಾರಣೆ