ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಇತರ ನಗರ, ಪಟ್ಟಣಗಳಲ್ಲೂ ವಾಯು ಮಾಲಿನ್ಯ ಪ್ರಮಾಣದಲ್ಲಿ ವರ್ಷದಿಂದ, ವರ್ಷಕ್ಕೆ ಏರಿಕೆಯಾಗುತ್ತಿದೆ. ರಾಜ್ಯದ 25 ಜಿಲ್ಲೆಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯುಮಾಲಿನ್ಯ ಮಾಪಕಗಳಿವೆ. ನಾಲ್ಕು ಜಿಲ್ಲೆಗಳಲ್ಲಿ ಉತ್ತಮ ಸ್ಥಿತಿಯಲ್ಲಿವೆ. ಆದರೆ, ಉಳಿದೆಲ್ಲಾ ಕಡೆ ಸಮಾಧಾನಕರ ಹಾಗೂ ಮಧ್ಯಮ ಪ್ರಮಾಣಕ್ಕೆ ವಾಯು ಗುಣಮಟ್ಟ ಇಳಿಕೆಯಾಗಿದೆ.
ಗಾಳಿಯಲ್ಲಿ ಮಾಲಿನ್ಯಕಾರಕಗಳ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2019-20 ನೇ ಸಾಲಿನ ವಾರ್ಷಿಕ ವರದಿಯಲ್ಲೂ ಅಂಕಿ-ಅಂಶ ಸಹಿತ ಇದನ್ನು ವಿವರಿಸಲಾಗಿದೆ. ವಾಯು ಗುಣಮಟ್ಟದಲ್ಲಿ ಉತ್ತಮ ಸ್ಥಾನದಿಂದ ಸಮಾಧಾನಕರ ಸ್ಥಾನಕ್ಕೆ ಕುಸಿತ ಕಂಡಿತ್ತು. ಇದೀಗ ಕೆಲ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಇನ್ನೂ ಇಳಿಕೆ ಕಂಡು ಸಾಧಾರಣ ಸ್ಥಾನಕ್ಕೆ ಕುಸಿದಿದೆ.
ಈಗಾಗಲೇ ದೇಶದಲ್ಲೇ ಬೆಂಗಳೂರುಅಸ್ತಮಾ ರೋಗಿಗಳು ಹೆಚ್ಚಿರುವ ಮೂರನೇ ಸ್ಥಾನದಲ್ಲಿದೆ. ನಗರದ 31 ಕಡೆ ಹೆಚ್ಚು ಧೂಳು ಇದೆ ಎಂದು ಮಂಡಳಿ ಗುರುತಿಸಿದೆ. ಗಾಳಿಯಲ್ಲಿ ಧೂಳಿನ ಸಾಂದ್ರತೆ ಹೆಚ್ಚಾಗುತ್ತಿದೆ. ಬೆಂಗಳೂರು ಸೇರಿ ಧಾರವಾಡ, ದಾವಣಗೆರೆ, ಗುಲ್ಬರ್ಗಾವನ್ನು ಕೂಡಾ ಕ್ರಿಟಿಕಲೀ ಪೊಲ್ಯೂಟೆಡ್ ಏರಿಯಾ ಎಂದು ಪಟ್ಟಿ ಮಾಡಲಾಗಿದೆ. ಮಾಲಿನ್ಯ ತಡೆಗಟ್ಟಲು ಪ್ರತ್ಯೇಕ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ.
ವಾತಾವರಣದಲ್ಲಿರುವ ಗಂಧಕದ ಡೈಆಕ್ಸೈಡ್ (SO2), ನೈಟ್ರೇಟ್ ಗಳು (NO2) , ಮಾಲಿನ್ಯಕಾರಣ ಕಣಗಳು (PM) , ಅಮೋನಿಯಾ ( NH3) , ಹಾಗೂ ಸೀಸದ ಪ್ರಮಾಣದ ಆಧಾರದಲ್ಲಿ ಗುಣಮಟ್ಟ ಸೂಚ್ಯಂಕ (ಎಕ್ಯುಐ) ಅನ್ನು ನಿರ್ಧರಿಸಲಾಗುತ್ತದೆ. ಈ ಕಣಗಳು ರಾಷ್ಟ್ರ ರಾಷ್ಟ್ರೀಯ ಮಿತಿಗಿಂತ ಕಡಿಮೆಯೇ ಇದ್ದರೂ, ಮಾಲಿನ್ಯಕಾರಕ ಕಣಗಳು(ಪಿಎಂ 2.5, ಪಿ.ಎಂ.10) ಮಾತ್ರ ರಾಷ್ಟ್ರೀಯ ಮಿತಿಗಿಂತ ಹೆಚ್ಚಾಗುತ್ತಿದೆ. ಅಂದರೆ ವಾಹನಗಳ ಹೊಗೆ, ಧೂಳು, ಕಾಮಗಾರಿಗಳಿಂದ ಉಂಟಾಗುವ ಧೂಳಿನ ಪ್ರಮಾಣ ಹೆಚ್ಚು ಇದೆ.
ಇದರಲ್ಲಿ ಆರು ವಿಭಾಗದಲ್ಲಿ ವಾಯುಗುಣಮಟ್ಟ ಸೂಚಿಸಲಾಗುತ್ತದೆ.
ಉತ್ತಮ (0-50)
ಸಮಾಧಾನಕರ (51-100)
ಮಧ್ಯಮ/ಸಾಧಾರಣ (101-200)
ಕಳಪೆ- (201-300)
ತೀರ ಕಳಪೆ (301-400)
ಆತಂಕಕಾರಿ/ಗಂಭೀರ (401)
ನಗರದಲ್ಲಿ ಒಟ್ಟು 18 ಕಡೆ ವಾಯುಮಾಲಿನ್ಯ ಮಾಪಕಗಳಿದ್ದು ನಿರಂತರವಾಗಿ ವಾಯುಗುಣಮಟ್ಟವನ್ನು ಅಳೆಯಲಾಗುತ್ತದೆ.
ಪ್ರದೇಶಗಳು PM-10
1) ವೈಟ್ ಫೀಲ್ಡ್ ಕೈಗಾರಿಕಾ ಪ್ರದೇಶ. - 82.7
2) ಯಲಹಂಕ-ರೈಲ್ ವೀಲ್ ಫ್ಯಾಕ್ಟ್ರಿ - 81.4
3) ಯಶವಂತಪುರ ಪೊಲೀಸ್ ಠಾಣೆ- 75.0
4) ಸೆಂಟ್ರಲ್ ಸಿಲ್ಕ್ ಬೋರ್ಡ್,ಹೊಸೂರು ರಸ್ತೆ- 90.1
5) ನಿಮ್ಹಾನ್ಸ್- 60.0
6) ಸೆಂಟ್ರಲ್ ಸಿಲ್ಕ್ ಬೋರ್ಡ್- 80.1
7)ಪೀಣ್ಯ. - 96.3
8) ಸ್ವಾನ್ ಸಿಲ್ಕ್, ಪೀಣ್ಯ- 86.4
9) ಮೈಸೂರು ರಸ್ತೆ, ಆಮ್ಕೊ ಬ್ಯಾಟರೀಸ್(AMCO ಬ್ಯಾಟ್ರೀಸ್)- 84.0
10) ಬಾಣಸವಾಡಿ ಪೊಲೀಸ್ ಠಾಣೆ- 93.3
11) ಕ.ವಿ.ಕಾ. ಮೈಸೂರು ರಸ್ತೆ- 71.2
12) ಕಜಿಸೊಣ್ಣೇನಹಳ್ಳಿ- 78.7
13) ತೆರಿ ಕಚೇರಿ, ದೊಮ್ಮಲೂರು- 96.5
14) ಯುವಿಸಿಇ-ಕೆ.ಆರ್ ಸರ್ಕಲ್ - 82.5
15) ವಿಕ್ಟೋರಿಯಾ ಆಸ್ಪತ್ರೆ- 59.5
16) ಇಂದಿರಾಗಾಂಧಿ ಚೈಲ್ಡ್ ಹೆಲ್ತ್ ಕೇರ್ ಸೆಂಟರ್- 56.5
17) ವೆಟರ್ನರಿ ಕಾಲೇಜ್ ,ಹೆಬ್ಬಾಳ- 62.3
18) ಜಯನಗರ 5th ಬ್ಲಾಕ್ - 72.1