ಕರ್ನಾಟಕ

karnataka

ETV Bharat / state

ಲಾಕ್​​​ಡೌನ್ ಎಫೆಕ್ಟ್: ಸಿಲಿಕಾನ್ ಸಿಟಿಯಲ್ಲಿ ಶೇ. 65ರಷ್ಟು ಮಾಲಿನ್ಯ ಪ್ರಮಾಣ ಇಳಿಕೆ - ಬೆಂಗಳೂರು ವಾಯು ಮಾಲಿನ್ಯ ಇಳಿಕೆ

ಕೋವಿಡ್ ಕರ್ಫ್ಯೂ, ಲಾಕ್​​ಡೌನ್ ಪರಿಣಾಮವಾಗಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ.

Air pollution rate reduced in Bengaluru
ವಾಯು ಮಾಲೀನ್ಯ ಪ್ರಮಾಣ ಇಳಿಕೆ

By

Published : May 19, 2021, 8:30 AM IST

Updated : May 19, 2021, 10:15 AM IST

ಬೆಂಗಳೂರು: ಲಾಕ್​ಡೌನ್​ನಿಂದ ವಾಹನ ಸಂಚಾರ, ರಸ್ತೆ, ಕಟ್ಟಡ ಕಾಮಗಾರಿಗಳು ಮತ್ತು ಕಾರ್ಖಾನೆಗಳು ಸ್ಥಗಿತಗೊಂಡಿದ್ದು, ಪರಿಣಾಮ ರಾಜಧಾನಿಯಲ್ಲಿ ವಾಯು ಮಾಲಿನ್ಯ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿದೆ.

ಕರ್ಫ್ಯೂ, ಲಾಕ್​​ಡೌನ್​ನಿಂದಾಗಿ ನಗರದ ಪ್ರಮುಖ ಜನದಟ್ಟಣೆ ಪ್ರದೇಶಗಳಾದ ಸಿಲ್ಕ್ ಬೋರ್ಡ್, ಮೆಜೆಸ್ಟಿಕ್, ಕೆ.ಆರ್ ಮಾರುಕಟ್ಟೆಗಳಲ್ಲಿ ಧೂಳು, ಹೊಗೆ ಕಡಿಮೆಯಾಗಿದೆ. ವಾಯು ಗುಣಮಟ್ಟದ ಸೂಚ್ಯಂಕ ಏ. 15ರಂದು ಮೈಸೂರು ರಸ್ತೆಯಲ್ಲಿ ಗರಿಷ್ಠ 142, ಪೀಣ್ಯದಲ್ಲಿ ಕನಿಷ್ಠ 44 ಇತ್ತು. ಮೇ. 18ರಂದು ಬಿಟಿಎಂ ಬಡಾವಣೆಯಲ್ಲಿ ಗರಿಷ್ಠ 59, ಕನಿಷ್ಠ 24 ದಾಖಲಾಗಿದೆ. ಅಂದಾಜು ಶೇ. 65ಕ್ಕಿಂತ ಹೆಚ್ಚಿನ ಮಾಲಿನ್ಯ ಪ್ರಮಾಣ ತಗ್ಗಿದೆ.

ಮಾಲಿನ್ಯ ಮಟ್ಟ ( ಮಾಲಿನ್ಯಕಾರಕಗಳ ಪ್ರಮಾಣ)

ಕ್ರ.ಸಂ ಸ್ಥಳ ಏ. 15 ಮೇ. 18
1 ಹೆಬ್ಬಾಳ 111 28
2 ಜಯನಗರ 105 37
3 ಮೈಸೂರು ರಸ್ತೆ 142 37
4 ನಿಮ್ಹಾನ್ಸ್ 106 43
5 ಸಿಲ್ಕ್ ಬೋರ್ಡ್ 105 37
6 ಸಿಟಿ ರೈಲು ನಿಲ್ದಾಣ 106 49
7 ಬಸವೇಶ್ವರ ನಗರ 67 36
8 ಪೀಣ್ಯ 44 24
9 ಬಿಟಿಎಂ 75. 59
Last Updated : May 19, 2021, 10:15 AM IST

ABOUT THE AUTHOR

...view details