ಬೆಂಗಳೂರು: ಏರ್ ಇಂಡಿಯಾದ ಈ ಮಹತ್ವದ ಕಾರ್ಯದಲ್ಲಿ ಮಹಿಳಾ ಸಿಬ್ಬಂದಿ ತಾವೂ ಯಾರಿಗೂ ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಲು ಮುಂದಾಗಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊನಿಂದ ಬೆಂಗಳೂರಿಗೆ ವಿಮಾನ ಆಗಮಿಸುತ್ತಿದೆ. ವಿಶೇಷ ಅಂದರೆ ಇದಕ್ಕೆ ಸಂಪೂರ್ಣ ಮಹಿಳೆಯರ ಸಾರಥ್ಯವಿದೆ.
ಉತ್ತರ ಧ್ರುವದ ಮೇಲೆ ಹೋಗಿ ಅಟ್ಲಾಂಟಿಕ್ ಮಾರ್ಗದ ಮೂಲಕ ವಿಶ್ವದ ಇನ್ನೊಂದು ತುದಿಯಾದ ಕರ್ನಾಟಕ ರಾಜಧಾನಿಯನ್ನು ತಲುಪುವ ಮೂಲಕ ಮಹಿಳಾ ಧೀರ ಪಡೆ ದಾಖಲೆ ಬರೆಯಲು ಮುಂದಾಗಿದೆ. ಎಐ 176 ವಿಮಾನ ಶನಿವಾರ ರಾತ್ರಿ 8.30ಕ್ಕೆ (ಸ್ಥಳೀಯ ಸಮಯ) ಸ್ಯಾನ್ ಫ್ರಾನ್ಸಿಸ್ಕೊದಿಂದ ಹೊರಟಿದ್ದು, ಸೋಮವಾರ ಮುಂಜಾನೆ 3.45 ಕ್ಕೆ ಬೆಂಗಳೂರಿಗೆ ಆಗಮಿಸಲಿದೆ ಎಂದು ಏರ್ ಇಂಡಿಯಾ ಮೂಲಗಳು ಮಾಹಿತಿ ನೀಡಿವೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಈ ಬಗ್ಗೆ ಭಾರೀ ಸಂತಸ ವ್ಯಕ್ತಪಡಿಸಿದ್ದಾರೆ. ಸರಣಿ ಟ್ವೀಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ನಮ್ಮ ನಾರಿ ಶಕ್ತಿ ಸಾಧಿಸುತ್ತದೆ ಎಂದು ಹೆಮ್ಮೆ ಪಟ್ಟಿದ್ದಾರೆ.