ಬೆಂಗಳೂರು:ಇಲ್ಲಿನ ಜಾಲಹಳ್ಳಿಯಲ್ಲಿರುವ ಏರ್ಫೋರ್ಸ್ ಟೆಕ್ನಿಕಲ್ ಕಾಲೇಜಿನ (AFTC) ಹಾಸ್ಟೆಲ್ ಕೊಠಡಿಯಲ್ಲಿ ವಾಯುಪಡೆ ವಿದ್ಯಾರ್ಥಿ, ದೆಹಲಿ ಮೂಲದ ಅಂಕಿತ್ ಕುಮಾರ್ (27) ಸಾವಿನ ಕುರಿತಂತೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿದ್ದಾರೆ. ಅಂಕಿತ್ನದ್ದು ಆತ್ಮಹತ್ಯೆಯಲ್ಲ, ಇದೊಂದು ಕೊಲೆಯೆಂದು ಮೃತ ವಿದ್ಯಾರ್ಥಿಯ ಕುಟುಂಬದವರು ಆರೋಪಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ವಾಯುಸೇನೆ ತರಬೇತಿ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಅಂಕಿತ್ ಅವರನ್ನು ಯಾವುದೋ ಕಾರಣದ ಮೇಲೆ ಇತ್ತೀಚೆಗೆ ತರಬೇತಿಯಿಂದ ಅಧಿಕಾರಿಗಳು ಅಮಾನತು ಮಾಡಿ, ಶಿಸ್ತು ಕ್ರಮ ತೆಗೆದುಕೊಳ್ಳಲಾಗಿತ್ತು ಎನ್ನಲಾಗ್ತಿದೆ. ಇದರ ನಡುವೆ ಕಳೆದ ಬುಧವಾರ ಹಾಸ್ಟೆಲ್ ಕೊಠಡಿಯಲ್ಲಿ ಸೀಲಿಂಗ್ ಫ್ಯಾನ್ಗೆ ಅಂಕಿತ್ ಕುಮಾರ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಆಗ ಖಿನ್ನತೆಯಿಂದ ಅಂಕಿತ್ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿತ್ತು.