ಕರ್ನಾಟಕ

karnataka

ETV Bharat / state

ವಾಯುಸೇನೆ ತರಬೇತಿಗೆ ಬಂದಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ವಾಯುಸೇನೆ ತರಬೇತಿಗೆ ಬಂದಿದ್ದ ದೆಹಲಿ ಮೂಲದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನಲ್ಲಿ ನಡೆದಿದೆ.

air-force-cadet-trainee-committed-suicide
ವಾಯುಸೇನೆ ತರಬೇತಿಗೆ ಬಂದಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

By

Published : Sep 23, 2022, 7:42 AM IST

ಬೆಂಗಳೂರು: ವಾಯುಸೇನೆ ತರಬೇತಿಗೆ ಬಂದಿದ್ದ ದೆಹಲಿ ಮೂಲದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಏರ್ ಫೋರ್ಸ್ ಟೆಕ್ನಿಕಲ್ ಕಾಲೇಜು ಕ್ಯಾಂಪಸ್​ನಲ್ಲಿ ನಡೆದಿದೆ. ಮೃತರ ಕುಟುಂಬಸ್ಥರು ಅಧಿಕಾರಿಗಳ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.

ದೆಹಲಿ ಮೂಲದ ಅಂಕಿತ್ ಕುಮಾರ್ (27) ಮೃತ ವಿದ್ಯಾರ್ಥಿ. ಕೆಲ ವರ್ಷಗಳ ಹಿಂದೆ ವಾಯು ಸೇನೆ ತರಬೇತಿ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಅಂಕಿತ್, ಜಾಲಹಳ್ಳಿಯ ಏರ್ ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದ. ಕಾರಣಾಂತರದಿಂದ ಅಂಕಿತ್‌ನನ್ನು ತರಬೇತಿಯಿಂದ ಅಧಿಕಾರಿಗಳು ಅಮಾನತು ಮಾಡಿದ್ದರು ಎನ್ನಲಾಗಿದೆ.

ಇದರಿಂದ ನೊಂದ ಯುವಕ, ಸೆ. 21ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಎಎಫ್​ಟಿಸಿ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ. ಇದರ ಅನ್ವಯ ಗಂಗಮ್ಮನಗುಡಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಬದುಕಿಗೆ ಹೊರೆಯಾದ ಸಾಲ.. ಮೈಸೂರಲ್ಲಿ ಬಾವಿಗೆ ಹಾರಿ ದಂಪತಿ ಆತ್ಮಹತ್ಯೆ

ABOUT THE AUTHOR

...view details