ಕರ್ನಾಟಕ

karnataka

ETV Bharat / state

ಅಸಲಿ‌ ತಾಲಿಬಾನ್ ನಾಗಪುರದಲ್ಲಿದೆ, ಹೊಟ್ಟೆಗೆ ಹಿಟ್ಟಿಲ್ಲದವ ಇಂದು ಸಾವಿರಾರು ಕೋಟಿ ಮಾಲೀಕ : ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ - ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಸುದ್ದಿ

ಆರ್.ಅಶೋಕ್ ಮೇಲೆ ಡಿನೋಟಿಫಿಕೇಶನ್ ಆರೋಪ ಇಲ್ಲವೇ? ಹರತಾಳು ಹಾಲಪ್ಪ ಜೈಲಿಗೆ ಹೋಗಿರಲಿಲ್ವೇ? ಜನಾರ್ದನ್ ರೆಡ್ಡಿ ಜೈಲಿಗೆ ಹೋಗಿ ಬಂದವರಲ್ವೇ? ಕೃಷ್ಣಯ್ಯ ಶೆಟ್ಟಿ ಜೈಲಿಗೆ ಹೋಗಿದ್ದವರಲ್ಲವೇ? ಅರ್ಧಕ್ಕಿಂತ ಹೆಚ್ಚು ಕ್ಯಾಬಿನೆಟ್ ಜೈಲಿನಲ್ಲಿತ್ತು. ಸಿ ಟಿ ರವಿಯವರಿಗೆ ಇದು ಗೊತ್ತಿಲ್ಲವೇ? ಚಿಕ್ಕಮಗಳೂರಿನಲ್ಲಿ ಸಿ ಟಿ ರವಿಗೆ ಲೂಟಿ‌ ರವಿ ಅಂತಾರೆ. ಹೊಟ್ಟೆಗೆ ಹಿಟ್ಟಿಲ್ಲದವ ಇಂದು ಸಾವಿರಾರು ಕೋಟಿ ಮಾಲೀಕ. ಸಿ ಟಿ ರವಿ ಇಷ್ಟು ದೊಡ್ಡ ಸಾಹುಕಾರ ಆಗಿದ್ದು ಹೇಗೆ? ಎಂದು ಕಿಡಿಕಾರಿದರು..

ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ
ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ

By

Published : Aug 25, 2021, 7:09 PM IST

ಬೆಂಗಳೂರು :ಹೊಟ್ಟೆಗೆ ಹಿಟ್ಟಿಲ್ಲದವ ಇಂದು ಸಾವಿರಾರು ಕೋಟಿ ಮಾಲೀಕ. ಸಿ ಟಿ ರವಿ ಇಷ್ಟು ದೊಡ್ಡ ಸಾಹುಕಾರ ಆಗಿದ್ದು ಹೇಗೆ? ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಟೀಕಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ದಾಬೋಲ್ಕರ್, ಗೌರಿ, ಪನ್ಸಾರೆ ಹತ್ಯೆ ಹೇಗಾಯ್ತು? ಅವರ ಸಾವನ್ನು ಆರ್​ಎಸ್​ಎಸ್ ವಿಜೃಂಭಿಸಲಿಲ್ವೇ? ಅಸಲಿ‌ ತಾಲಿಬಾನ್ ನಾಗಪುರದಲ್ಲಿದೆ ಎಂದು ಹೇಳಿದ್ದಾರೆ.

ಸಿ ಟಿ ರವಿ ಗಾಜಿನ ಮನೆಯಲ್ಲಿದ್ದೇ ಕಲ್ಲು ಎಸೆಯುತ್ತಿದ್ದಾರೆ :ಬಿಜೆಪಿಯಲ್ಲಿ ಹಲವರು ಸಿಎಂ ಆಕಾಂಕ್ಷಿಗಳಿದ್ದಾರೆ. ಅವರು ಮುಖ್ಯಮಂತ್ರಿ ಆಸೆ ಇಟ್ಟುಕೊಂಡಿದ್ದರು. ಅವರ ಹೈಕಮಾಂಡ್ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದೆ. ಸಿ ಟಿ ರವಿ, ಬಸವನಗೌಡ ಯತ್ನಾಳ್, ಕೆ ಎಸ್ ಈಶ್ವರಪ್ಪ ಆಸೆ ಇಟ್ಟುಕೊಂಡಿದ್ರು. ದಿನವೂ ಇವರು ಮಾತುಗಳನ್ನ ಸುರಿಸುತ್ತಿದ್ದಾರೆ.‌ ಸಿ ಟಿ ರವಿ ಗಾಜಿನ ಮನೆಯಲ್ಲಿದ್ದೇ ಕಲ್ಲು ಎಸೆಯುತ್ತಿದ್ದಾರೆ. ಸಿ ಟಿ ರವಿಯವರದ್ದು ಮಕ್ಕಳ ಕಥೆಯಾಗಿದೆ. ಅವರಿಗೆ ಹಿಗ್ಗಾಮುಗ್ಗಾ ಬಿದ್ರೂ ಸಮಾಧಾನವಿಲ್ಲ ಎಂದರು.

ಜೈಲಿಗೆ ಹೋಗಿ ಬಂದವರಿಗೆ ಪ್ರಮೋಷನ್ ಅಂತಾ ಹೇಳಿದ್ದಾರೆ. ರವಿಯವರೇ, ನಿಮ್ಮ‌ ಲಕ್ಷ್ಮಣ ಸವದಿ ಏನು ಮಾಡಿದ್ದರು? ಸೋತವರನ್ನು ಉಪಮುಖ್ಯಮಂತ್ರಿ ಮಾಡಲಿಲ್ವೇ? ಅಶ್ಲೀಲ ಚಿತ್ರ ನೋಡಿದ್ದು ಬಿಟ್ಟರೆ ಇನ್ನೇನು‌ ಮಾಡಿದ್ರು? ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ವಿನಯ್ ಕುಲಕರ್ಣಿ ಫ್ರೀ ಬಿಟ್ಟವರು ಯಾರು?:ಕೇಂದ್ರ ಗೃಹ ಸಚಿವರ ಮೇಲೆ ಯಾವ ಆರೋಪವಿತ್ತು? 17 ಜನರನ್ನು ಎನ್​ಕೌಂಟರ್ ಮಾಡಿಸಿದ ಆರೋಪವಿತ್ತು. ಸೊರಾಬುದ್ದೀನ್ ಎನ್​ಕೌಂಟರ್ ಮಾಡಿದ್ದು ಯಾರು? ಅಂಥರವನ್ನು ಕೇಂದ್ರ ಗೃಹಸಚಿವರನ್ನಾಗಿ ಮಾಡಲಾಗಿದೆ. ಸಿ ಟಿ ರವಿಯವರಿಗೆ ಇದು ಗೊತ್ತಿಲ್ವೇ? ಗೊತ್ತಿದ್ದೂ ಈ ರೀತಿ ಹೇಳಿಕೆಗಳನ್ನ ಕೊಡ್ತಿದ್ದಾರಾ? ವಿನಯ್ ಕುಲಕರ್ಣಿ ಫ್ರೀ ಬಿಟ್ಟವರು ಯಾರು? ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ. ನೀವು ಯಾಕೆ ಆಗ ಅವರನ್ನ ಬಿಡುಗಡೆ ಮಾಡಿಸಿದ್ರಿ? ಬಿಜೆಪಿಗೆ ಅವರನ್ನು ಸೆಳೆಯೋಕೆ ಈ ಪ್ರಯತ್ನ ಮಾಡಿದ್ದು. ಇದು ಎಲ್ಲರಿಗೂ‌ ಗೊತ್ತಿರುವ ವಿಚಾರ ಎಂದು ಹೇಳಿದರು.

ಚಿಕ್ಕಮಗಳೂರಿನಲ್ಲಿ ಸಿ ಟಿ ರವಿಗೆ ಲೂಟಿ‌ ರವಿ ಅಂತಾರೆ :ಆರ್.ಅಶೋಕ್ ಮೇಲೆ ಡಿನೋಟಿಫಿಕೇಶನ್ ಆರೋಪ ಇಲ್ಲವೇ? ಹರತಾಳು ಹಾಲಪ್ಪ ಜೈಲಿಗೆ ಹೋಗಿರಲಿಲ್ವೇ? ಜನಾರ್ದನ್ ರೆಡ್ಡಿ ಜೈಲಿಗೆ ಹೋಗಿ ಬಂದವರಲ್ವೇ? ಕೃಷ್ಣಯ್ಯ ಶೆಟ್ಟಿ ಜೈಲಿಗೆ ಹೋಗಿದ್ದವರಲ್ಲವೇ? ಅರ್ಧಕ್ಕಿಂತ ಹೆಚ್ಚು ಕ್ಯಾಬಿನೆಟ್ ಜೈಲಿನಲ್ಲಿತ್ತು. ಸಿ ಟಿ ರವಿಯವರಿಗೆ ಇದು ಗೊತ್ತಿಲ್ಲವೇ? ಚಿಕ್ಕಮಗಳೂರಿನಲ್ಲಿ ಸಿ ಟಿ ರವಿಗೆ ಲೂಟಿ‌ ರವಿ ಅಂತಾರೆ. ಹೊಟ್ಟೆಗೆ ಹಿಟ್ಟಿಲ್ಲದವ ಇಂದು ಸಾವಿರಾರು ಕೋಟಿ ಮಾಲೀಕ. ಸಿ ಟಿ ರವಿ ಇಷ್ಟು ದೊಡ್ಡ ಸಾಹುಕಾರ ಆಗಿದ್ದು ಹೇಗೆ? ಎಂದು ಕಿಡಿಕಾರಿದರು.

ಮೊದಲು ರಾಜ್ಯದ ಪರವಾಗಿ ನಿಲ್ಲಿ :ಸಿದ್ದು ಸವದಿ ಹೆಣ್ಣುಮಗಳನ್ನ ಎಳೆದಾಡಲಿಲ್ವೇ? ಕೃಷ್ಣ ಪಾಲೇಮಾರ್ ಅಶ್ಲೀಲ ಚಿತ್ರ ನೋಡಲಿಲ್ವೇ? ಯುಪಿಯಲ್ಲಿ ನಿಮ್ಮ ಶಾಸಕರು ಯುವತಿಗೆ ಅತ್ಯಾಚಾರ ಮಾಡಲಿಲ್ವೇ? ಚಿನ್ಮಯಾನಂದ ಅತ್ಯಾಚಾರ ಕೇಸ್ ಗೊತ್ತಿಲ್ವೇ? ನಿಮ್ಮ ಪಕ್ಷದಲ್ಲೇ ಇಂಥವರು ಸಾಕಷ್ಟು ಮಂದಿ ಇದ್ದಾರೆ. ಇದು ನಿಮಗೆ ಗೊತ್ತಿಲ್ಲವೇ ಸಿ ಟಿ ರವಿಯವರೇ? ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ಪರ ಮಾತನಾಡ್ತೀರಾ.. ದಿನೇಶ್ ಗುಂಡೂರಾವ್ ಕೂಡ ತಮಿಳುನಾಡು ಉಸ್ತುವಾರಿ. ಅವರು ಗೋವಾದಲ್ಲೂ ಉಸ್ತುವಾರಿ. ಆದರೂ ಅವರು ರಾಜ್ಯದ ಪರ ಮಾತನಾಡಿದ್ದರು. ಆದರೆ, ನೀವು ತಮಿಳುನಾಡು ಪರ ಮಾತನಾಡ್ತೀರಿ. ಮೊದಲು ರಾಜ್ಯದ ಪರವಾಗಿ ನಿಲ್ಲಿ. ಇಲ್ಲಿ ಶಾಸಕರಾಗಿ ತಮಿಳುನಾಡು ಪರ ಮಾತನಾಡಬೇಡಿ ಎಂದು ವಾಗ್ದಾಳಿ ನಡೆಸಿದರು.

ಓದಿ:ನನ್ನ ತಪ್ಪೇನು? ಯೋಗಿ ವಿರುದ್ಧ ಠಾಕ್ರೆ ಹೇಳಿಕೆ ನೆನಪಿಸಿದ ರಾಣೆ!... ಅಂದು ಉದ್ಧವ್​ ಬಳಸಿದ ಪದ ಯಾವುದು?

For All Latest Updates

TAGGED:

ABOUT THE AUTHOR

...view details