ಬೆಂಗಳೂರು: 36 ಸದಸ್ಯರನ್ನೊಳಗೊಂಡ ಕೆಪಿಸಿಸಿ ಚುನಾವಣಾ ಸಮಿತಿ ರಚನೆ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ. ಕಾಂಗ್ರೆಸ್ ಚುನಾವಣಾ ಚಟುವಟಿಕೆಗಳ ತೀರ್ಮಾನ ಮಾಡಲಿರುವ ಪ್ರದೇಶ ಚುನಾವಣಾ ಸಮಿತಿ, ಟಿಕೆಟ್ ಹಂಚಿಕೆ ವಿಚಾರದಲ್ಲಿ ಅರ್ಜಿಗಳ ಪರಿಶೀಲನೆ ನಡೆಸಲಿದೆ. ಸಮಿತಿ ಕ್ಷೇತ್ರಕ್ಕೆ ಕನಿಷ್ಠ 1 ರಿಂದ ಗರಿಷ್ಠ 3 ಮಂದಿ ಹೆಸರನ್ನು ಶಿಫಾರಸು ಮಾಡಲಿದೆ.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನ ಪರಿಸಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ಮಾಜಿ ಸಚಿವ ವಿನಯ್ ಕುಲಕರ್ಣಿ, ಮಾಜಿ ಮೇಯರ್ ಜಿ.ಪದ್ಮಾವತಿ, ಶರಣಪ್ಪ ಸುನಗಾರ್, ಶಿವರಾಜ ತಂಗಡಗಿ, ಎಂ.ಆರ್. ಸೀತಾರಾಂ ಸೇರಿದಂತೆ 36 ಜನ ಸದಸ್ಯರನ್ನೊಳಗೊಂಡ ಎಲೆಕ್ಷನ್ ಕಮಿಟಿ ರಚನೆ ಮಾಡಲಾಗಿದೆ.
ಚುನಾವಣಾ ಸಮಿತಿ ಸದಸ್ಯರ ಹೆಸರು ಹೀಗಿದೆ:
- ಡಿ.ಕೆ. ಶಿವಕುಮಾರ್
- ಸಿದ್ದರಾಮಯ್ಯ
- ಬಿ.ಕೆ.ಹರಿಪ್ರಸಾದ್
- ಎಂ.ಬಿ.ಪಾಟೀಲ್
- ದಿನೇಶ್ ಗುಂಡೂರಾವ್
- ಹೆಚ್.ಕೆ.ಪಾಟೀಲ್
- ಕೆ.ಹೆಚ್.ಮುನಿಯಪ್ಪ
- ವೀರಪ್ಪ ಮೊಯ್ಲಿ
- ಡಾ.ಜಿ ಪರಮೇಶ್ವರ್
- ಆರ್ ವಿ ದೇಶ್ಪಾಂಡೆ
- ಅಲ್ಲಮ್ ವೀರಬದ್ರಪ್ಪ
- ರಾಮಲಿಂಗಾರೆಡ್ಡಿ
- ಈಶ್ವರ್ ಖಂಡ್ರೆ
- ಸತೀಶ್ ಜಾರಕಿಹೊಳಿ
- ಧ್ರುವ ನಾರಾಯಣ್
- ಸಲೀಂ ಅಹ್ಮದ್
- ರೆಹಮಾನ್ ಖಾನ್
- ಮಾರ್ಗ್ರೆಟ್ ಆಳ್ವಾ
- ಕೆ.ಜೆ.ಜಾರ್ಜ್
- ಯು.ಟಿ. ಖಾದರ್
- ಕೆ. ಗೋವಿಂದರಾಜ್
- ಹೆಚ್.ಸಿ.ಮಹದೇವಪ್ಪ
- ಚೆಲುವರಾಯ ಸ್ವಾಮಿ
- ಬಸವರಾಜ್ ರಾಯರೆಡ್ಡಿ
- ಬಿ.ಕೆ.ಸುರೇಶ್
- ಎಲ್ ಹನುಮಂತಯ್ಯ
- ನಾಸಿರ್ ಹುಸೇನ್
- ಎಂ ಆರ್ ಸೀತಾರಾಮ್
- ಶಿವರಾಜ್ ತಂಗಡಗಿ
- ವಿನಯ್ ಕುಲಕರ್ಣಿ
- ವಿ ಎಸ್ ಉಗ್ರಪ್ಪ
- ಬೋಸ್ ರಾಜ್
- ವಿನಯ್ ಕುಮಾರ್
- ಶರಣಪ್ಪ
- ಜಿ ಪದ್ಮಾವತಿ
- ಶಾಮನೂರ್ ಶಿವಶಂಕರಪ್ಪ
ಇದನ್ನೂ ಓದಿ:ವಿಜಯಾನಂದ ಕಾಶಪ್ಪನವರಗೆ ಪರೋಕ್ಷವಾಗಿ ಟಿಕೆಟ್ ಖಾತ್ರಿ ಪಡಿಸಿದ ಸಿದ್ದರಾಮಯ್ಯ