ಕರ್ನಾಟಕ

karnataka

ETV Bharat / state

ದಿಲ್ಲಿಯಲ್ಲಿ ನಾಳೆ ಎಐಸಿಸಿ ಕೇಂದ್ರ ಚುನಾವಣಾ ಸಮಿತಿ ಸಭೆ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ ?! - ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಸಭೆ. ಕಾಂಗ್ರೆಸ್​ನ 120 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಿ ರಾಜ್ಯನಾಯಕರು ದಿಲ್ಲಿಗೆ ಕಳುಹಿಸಿಕೊಟ್ಟಿದ್ದು, ನಾಳೆ ಇದಕ್ಕೆ ಅಂತಿಮ ರೂಪ ನೀಡುವ ಸಾಧ್ಯತೆ ಹೆಚ್ಚಿದೆ.

congress
ಕಾಂಗ್ರೆಸ್ ಚಿಹ್ನೆ

By

Published : Mar 16, 2023, 10:50 PM IST

ಬೆಂಗಳೂರು: ನಾಳೆ ದಿಲ್ಲಿಯಲ್ಲಿ ಎಐಸಿಸಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು ಅದರಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಜಿ ಪರಮೇಶ್ವರ್ ಸೇರಿದಂತೆ ಹಲವು ರಾಜ್ಯ ನಾಯಕರು ನಾಡಿನ ಸಭೆಯಲ್ಲಿ ಭಾಗವಹಿಸುವರು.

ಗುರುವಾರ ಸಂಜೆಯ ಕೆಪಿಸಿಸಿ ಅಧ್ಯಕ್ಷರು ಹಾಗೂ ಇತರ ನಾಯಕರು ಇಲ್ಲಿಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ, ನಾಳೆ ಬೆಳಗ್ಗೆ ಎಲ್ಲರೂ ದಿಲ್ಲಿಗೆ ಹೊರಟು ಮಧ್ಯಾಹ್ನದೊಳಗೆ ತಲುಪುವ ಸಾಧ್ಯತೆ ಇದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಬೆಳಗಾವಿಗೆ ಭೇಟಿ ನೀಡಿ, ಅಲ್ಲಿ ಸಭೆಗಳನ್ನು ಕೈಗೊಂಡು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಸಂಜೆಯವರೆಗೂ ಬೆಳಗಾವಿಯಲ್ಲಿ ಇದ್ದ ಹಿನ್ನೆಲೆ ತಡವಾಗಿ ಬೆಂಗಳೂರಿಗೆ ತಲುಪಿದ್ದು, ದಿಲ್ಲಿಗೆ ಪ್ರಯಾಣಿಸಿಲ್ಲ.

ನಾಳೆ ಬಿಡುಗಡೆ ಆಗಬಹುದಾ ಮೊದಲ ಪಟ್ಟಿ?:ನಾಳೆ ಎಐಸಿಸಿ ಕೇಂದ್ರ ಚುನಾವಣಾ ಸಮಿತಿ ಸಭೆಯ ಬಳಿಕ ರಾಜ್ಯ ಕಾಂಗ್ರೆಸ್ ನಾಯಕರ ಭೇಟಿಗೆ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಕಾಲಾವಕಾಶ ನೀಡಿದ್ದಾರೆ. ಈ ಸಂದರ್ಭ ರಾಜ್ಯದ ವಿಧಾನಸಭೆ ಚುನಾವಣೆ ಸಂಬಂಧ ಪ್ರಗತಿಯ ಮಾಹಿತಿ ಪಡೆಯಲಿದ್ದಾರೆ. ಚುನಾವಣೆ ಸಿದ್ಧತೆಗೆ ಹಾಗೂ ಎದುರಿಸಲು ಕೈಗೊಂಡಿರುವ ಕ್ರಮ ಹಾಗೂ ಕಾರ್ಯತಂತ್ರದ ಕುರಿತು ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಗೆ ವಿವರ ನೀಡಲಿದ್ದಾರೆ.

ಈಗಾಗಲೇ 120 ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಿ ರಾಜ್ಯನಾಯಕರು ದಿಲ್ಲಿಗೆ ಕಳುಹಿಸಿಕೊಟ್ಟಿದ್ದು, ನಾಳೆ ಇದಕ್ಕೆ ಅಂತಿಮ ರೂಪ ನೀಡುವ ಸಾಧ್ಯತೆ ಹೆಚ್ಚಿದೆ. ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಜತೆ ನಡೆಸುವ ಸಭೆಯ ಫಲವಾಗಿ ರಾತ್ರಿಯ ಒಳಗೆ 2023 ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.

ಸಂಭಾವ್ಯ ಅಭ್ಯರ್ಥಿಗಳ ವಿವರ:ಮುಂದಿನ ವಿಧಾನಸಭೆ ಚುನಾವಣೆಗೆ ಮೊದಲ ಪಟ್ಟಿಯಲ್ಲಿ ಕೆಲ ಕ್ಷೇತ್ರಗಳಿಗೆ ಒಂದು ಹಾಗೂ ಮತ್ತೆ ಕೆಲ ಕ್ಷೇತ್ರಗಳಿಗೆ ಎರಡು ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಹೈಕಮಾಂಡ್​​​ಗೆ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ರಾಜ್ಯದಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಬೀಡು ಬಿಟ್ಟು ಸ್ಕ್ರೀನಿಂಗ್ ಕಮಿಟಿ ಅಂತಿಮ ಪಟ್ಟಿ ಸಿದ್ಧಪಡಿಸಿದ್ದು, ಅದರಲ್ಲಿ ಕೆಲವರ ಮಾಹಿತಿ ಲಭ್ಯವಾಗಿದೆ. ಲಭ್ಯ ಮಾಹಿತಿ ಪ್ರಕಾರ 2023ರ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯ ವಿವರ ಇಂತಿದೆ.

ವಿಧಾನಸಭಾ ಕ್ಷೇತ್ರಕ್ಕೊಂದೇ ಹೆಸರು

ಬಸವನಗುಡಿ - ಯುಬಿ ವೆಂಕಟೇಶ್
ರಾಜಾಜಿನಗರ - ಪುಟ್ಟಣ್ಣ
ಸೊರಬ - ಮಧು ಬಂಗಾರಪ್ಪ
ಚಿತ್ರದುರ್ಗ - ವೀರೇಂದ್ರ ಪಪ್ಪಿ
ಹಿರಿಯೂರು - ಸುಧಾಕರ್
ಹಿರೇಕೆರೂರು - ಯುಬಿ ಬಣಕಾರ್
ವಿರಾಜಪೇಟೆ - ಪೊನ್ನಣ್ಣ
ರಾಮನಗರ - ಇಕ್ಬಾಲ್ ಹುಸೇನ್
ಮಾಗಡಿ - ಬಾಲಕೃಷ್ಣ
ಹೊಸಕೋಟೆ- ಶರತ್ ಬಚ್ಚೇಗೌಡ
ಚಿಂತಾಮಣಿ - ಎಂ ಸಿ ಸುಧಾಕರ್
ಚಿಕ್ಕಬಳ್ಳಾಪುರ -ಕೊತ್ತೂರ್ ಮಂಜುನಾಥ್
ಟಿ. ನರಸಿಪುರ- ಸುನಿಲ್ ಬೋಸ್
ನಿಪ್ಪಾಣಿ - ಕಾಕಾಸಾಹೇಬ್ ಪಾಟೀಲ್
ಹುಕ್ಕೇರಿ - ಎ.ಬಿ ಪಾಟೀಲ್
ಗೋಕಾಕ್ - ಅಶೋಕ್ ಪೂಜಾರಿ
ಹುನಗುಂದ- ವಿಜಯಾನಂದ ಕಾಶಪ್ಪನವರ್
ಮುದ್ದೇಬಿಹಾಳ -ಸಿ.ಎಸ್ ನಾಡಗೌಡ
ರಾಯಚೂರು - ಎನ್.ಎಸ್ ಬೋಸರಾಜ್
ಕನಕಗಿರಿ - ಶಿವರಾಜ್ ತಂಗಡಗಿ
ಯಲಬುರ್ಗಾ- ಬಸವರಾಜ್ ರಾಯರೆಡ್ಡಿ
ಕಾರವಾರ - ಸತೀಶ್ ಸೈಲ್
ಭಟ್ಕಳ- ಮಂಕಾಳ ವೈದ್ಯ
ಹಾನಗಲ್ - ಶ್ರೀನಿವಾಸ್ ಮಾನೆ
ಬೈಂದೂರು - ಗೋಪಾಲ್ ಪೂಜಾರಿ
ಕೋಲಾರ - ಸಿದ್ದರಾಮಯ್ಯ
ಕಾಪು - ವಿನಯ್ ಕುಮಾರ್ ಸೊರಕೆ
ಕಡೂರು - ವೈಎಸ್‌ವಿ ದತ್ತಾ
ನಾಗಮಂಗಲ- ಚೆಲುವರಾಯಸ್ವಾಮಿ
ಶ್ರೀರಂಗಪಟ್ಟಣ- ರಮೇಶ್ ಬಂಡಿಸಿದ್ದೇಗೌಡ

ಒಂದು ಕ್ಷೇತ್ರ ಎರಡು ಹೆಸರು
ಹೊಳಲ್ಕೆರೆ - ಸವಿತಾ ರಘು/ ಆಂಜನೇಯ
ತೀರ್ಥಹಳ್ಳಿ - ಕಿಮ್ಮನೆ ರತ್ನಾಕರ್/ ಮಂಜುನಾಥ್ ಗೌಡ
ಬಳ್ಳಾರಿ ಸಿಟಿ - ಅಲ್ಲಂ ಪ್ರಶಾಂತ್/ ಅನಿಲ್ ಲಾಡ್
ಶಿಗ್ಗಾಂವಿ - ಅಜಂಪೀರ್ ಖಾದ್ರಿ/ ಸೋಮಣ್ಣ ಬೇವಿನಮರದ
ಗಂಗಾವತಿ - ಇಕ್ಬಾಲ್ ಅನ್ಸಾರಿ/ ಎಚ್.ಆರ್ ಶ್ರೀನಾಥ್
ಕಲಬುರಗಿ ಗ್ರಾಮೀಣ - ರೇವುನಾಯಕ ಬೆಳಮಗಿ/ ವಿಜಯಕುಮಾರ್
ತೇರದಾಳ್ - ಉಮಾಶ್ರೀ/ ಮಲ್ಲೇಶಪ್ಪ
ಬಾಗಲಕೋಟ - ಎಚ್ ವೈ ಮೇಟಿ/ ದೇವರಾಜ್ ಪಾಟೀಲ್
ಬೆಳಗಾವಿ ಉತ್ತರ - ಫೀರೋಜ್ ಸೇಠ್/ ಆಸೀಫ್ ಸೇಠ್
ಕುಡಚಿ - ಶ್ಯಾಮ್ ಭೀಮ್ ಘಾಟ್ಗೆ/ ಮಹೇಂದ್ರ ತಮ್ಮಣ್ಣ
ಕಾಗವಾಡ - ರಾಜೂ ಕಾಗೆ/ ದಿಗ್ವಿಜಯ್ ದೇಸಾಯಿ
ಅಥಣಿ - ಗಜಾನನ್ ಮಂಗಸೂಳಿ/ ಶ್ರೀಕಾಂತ್ ಪೂಜಾರಿ
ನಂಜನಗೂಡು - ಮಹದೇವಪ್ಪ/ ಧೃವನಾರಾಯಣ
ಚಾಮುಂಡೇಶ್ವರಿ - ಮರಿಗೌಡ/ ಚಂದ್ರಶೇಖರ್
ಮಂಗಳೂರು ಸೌತ್ - ಐವಾನ್ ಡಿಸೋಜಾ/ ಜೆ ಆರ್ ಲೋಬೋ
ಬೆಳ್ತಂಗಡಿ- ರಕ್ಷಿತ್ / ಶಿವರಾಂ
ಬೆಂಗಳೂರು ಸೌತ್- ಆರ್ ಕೆ ರಮೇಶ್/ ಸುಷ್ಮಾ ರಾಜಗೋಪಾಲ್
ದಾಸರಹಳ್ಳಿ- ಕೃಷ್ಣಮೂರ್ತಿ/ ಸಿ.ಎಂ ಧನಂಜಯ
ಕಲಘಟಗಿ - ಸಂತೋಷ್ ಲಾಡ್/ ನಾಗರಾಜ್ ಚಬ್ಬಿ

ಹಾಲಿ ಶಾಸಕರಿರುವ ಕ್ಷೇತ್ರಕ್ಕೂ ಎರಡೆರಡು ಹೆಸರು
ಕುಂದಗೋಳ - ಕುಸುಮಾ ಶಿವಳ್ಳಿ ಶಾಸಕಿ/ ಚಂದ್ರಶೇಖರ್ ಜತ್ತಲ್
ದೊಡ್ಡಬಳ್ಳಾಪುರ - ವೆಂಕಟರಮಣಯ್ಯ ಶಾಸಕ/ ಬಿಸಿ ಆನಂದ್
ಪಾವಗಡ - ವೆಂಕಟರಮಣಪ್ಪ ಶಾಸಕ/ಎಚ್.ವಿ ವೆಂಕಟೇಶ್
ಲಿಂಗಸುಗೂರು - ಡಿ‌ಎಸ್ ಹೂಲಗೇರಿ ಶಾಸಕ/ಹಂಪನಗೌಡ ಬಾದರ್ಲಿ/ರುದ್ರಯ್ಯ


ನಾಳೆ ರಾಷ್ಟ್ರೀಯ ನಾಯಕರ ಭೇಟಿ:ನಾಳೆ ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆ ಆಗುತ್ತದೆಯೇ ಎಂಬ ಪ್ರಶ್ನೆಗೆ ಸಮರ್ಪಕವಾಗಿ ಉತ್ತರ ನೀಡದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾಳೆ ಬೆಳಗ್ಗೆ ದೆಲ್ಲಿಗೆ ತೆರಳುತ್ತಿದ್ದೇನೆ. ಮಧ್ಯಾಹ್ನ ಎಐಸಿಸಿ ಕೇಂದ್ರ ಚುನಾವಣಾ ಸಮಿತಿ ಸಭೆ ಇದೆ. ಇದಾದ ಬಳಿಕ ಬೇಟಿಗೆ ರಾಹುಲ್ ಗಾಂಧಿ ಅವಕಾಶ ಮಾಡಿಕೊಟ್ಟಿದ್ದಾರೆ. ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ. ಇದೇ ತಿಂಗಳು 20ರಂದು ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ನಾಳೆ ಸಭೆ ನಡೆಸುತ್ತೇನೆ ಎನ್ನುವುದನ್ನು ಖಚಿತವಾಗಿ ಹೇಳಬಲ್ಲೆ ಎಂದಿದ್ದಾರೆ.
ಇದನ್ನೂ ಓದಿ:ಕರ್ನಾಟಕದ 800 ಹಳ್ಳಿಗಳಿಗೆ ಮಹಾಸರ್ಕಾರದ ಸಹಾಯ, ಇದು ಚುನಾವಣೆ ಗಿಮಿಕ್: ಡಿಕೆಶಿ ಆರೋಪ.

ABOUT THE AUTHOR

...view details