ಕರ್ನಾಟಕ

karnataka

ETV Bharat / state

ಪಿಎಂ ಕಿಸಾನ್ ಯೋಜನೆಯಡಿ ಶೇ. 97ರಷ್ಟು ಆಧಾರ್ ಜೋಡಣೆ: ಕೇಂದ್ರದಿಂದ ರಾಜ್ಯ ಕೃಷಿ ಇಲಾಖೆಗೆ ಪುರಸ್ಕಾರ - B.C.PATEL

ಕರ್ನಾಟಕದಲ್ಲಿ ಮೊಬೈಲ್ ಬೆಳೆ ಸಮೀಕ್ಷೆ ಯಶಸ್ವಿಯಾಗಿದ್ದು, ಕೇಂದ್ರದಿಂದ ಮೆಚ್ಚುಗೆಯನ್ನು ಸಹ ಪಡೆದಿದೆ. ಅಲ್ಲದೇ ಇತರೆ ರಾಜ್ಯಗಳಿಗೂ ಮಾದರಿಯಾಗಿದೆ.

Agriculture Minister BC Patil felicitated by central government
ಕೇಂದ್ರದಿಂದ ರಾಜ್ಯ ಕೃಷಿ ಇಲಾಖೆಗೆ ಪುರಸ್ಕಾರ

By

Published : Feb 24, 2021, 5:31 PM IST

ನವದೆಹಲಿ/ಬೆಂಗಳೂರು: ಪಿಎಂ ಕಿಸಾನ್ ಯೋಜನೆಯಡಿ ಕರ್ನಾಟಕ ಮೊದಲ ಸ್ಥಾನ ಪಡೆದಿದ್ದಕ್ಕಾಗಿ ಕೇಂದ್ರ ಸರ್ಕಾರದಿಂದ ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್​ಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಯಡಿಯಲ್ಲಿ ರಾಜ್ಯವು ಅತಿ ಹೆಚ್ಚು ಪ್ರಮಾಣದಲ್ಲಿ ಆಧಾರ್​​ ಜೋಡಣೆ ಮೂಲಕ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಅನುಷ್ಠಾನಗೊಳಿಸಿರುವುದಕ್ಕೆ ರಾಜ್ಯವು ಈ ಪ್ರಶಸ್ತಿಗೆ ಭಾಜನವಾಗಿದೆ. ನವದೆಹಲಿಯ ‘ಪೂಸಾ’ದಲ್ಲಿ ನಡೆದ ಪಿಎಂ ಕಿಸಾನ್ ಯೋಜನೆಯ 2ನೇ ವರ್ಷದ ವರ್ಷಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಇಲಾಖಾ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಈ ಯೋಜನೆಯಡಿ ರಾಜ್ಯವು ಶೇ. 97 ರಷ್ಟು ‘ಆಧಾರ್​​​’ ದೃಢೀಕರಿಸಿದ ದತ್ತಾಂಶವನ್ನು ಹೊಂದಿದ್ದು, ರಾಜ್ಯದ ಶೇ. 90ಕ್ಕೂ ಹೆಚ್ಚು ಫಲಾನುಭವಿಗಳಿಗೆ ‘ಆಧಾರ್​’ ಆಧಾರಿತ ನೇರ ನಗದು ವರ್ಗಾವಣೆ ವಿಧಾನದ ಮೂಲಕ ಈ ಯೋಜನೆಯಡಿ ಪ್ರಯೋಜನಗಳನ್ನು ನೀಡಲಾಗುತ್ತಿದೆ. ರಾಜ್ಯವು ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿರುವುದಕ್ಕೆ ಈ ಪ್ರಶಸ್ತಿ ಸಂದಿದೆ.

ABOUT THE AUTHOR

...view details