ಕರ್ನಾಟಕ

karnataka

ETV Bharat / state

ಕೃಷಿಮೇಳ: ಎರಡನೇ ದಿನ 2.45 ಲಕ್ಷ ರೈತರು ಭೇಟಿ - ಕೃಷಿ ವಿಶ್ವವಿದ್ಯಾಲಯದ ಆವರಣ

ಯಲಹಂಕದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK) ದಲ್ಲಿ ಕೃಷಿ ಮೇಳ 2022 ನಡೆಯುತ್ತಿದ್ದು, ನಿನ್ನೆ ಉದ್ಘಾಟನೆಗೊಂಡ ಮೇಳ ಮಳೆಯಿಂದ ಸ್ವಲ್ಪ ಕಳೆಗುಂದಿದೆ. ಆದರೆ, ಎರಡನೇ ದಿನವಾದ ಇಂದು ಕೃಷಿ ಮೇಳಕ್ಕೆ ಜನಸಾಗರವೇ ಹರಿದು ಬಂದಿದೆ.

ಕೃಷಿಮೇಳ
ಕೃಷಿಮೇಳ

By

Published : Nov 4, 2022, 10:16 PM IST

ಯಲಹಂಕ: ಕೃಷಿ ಮೇಳ -2022 ರ ಎರಡನೇ ದಿನಕ್ಕೆ ಜನಸಾಗರವೇ ಹರಿದು ಬಂದಿದೆ. ಸುಮಾರು 2.45 ಲಕ್ಷ ರೈತರು ಕೃಷಿ ಮೇಳಕ್ಕೆ ಭೇಟಿ ನೀಡಿದ್ದಾರೆ.

ಕೃಷಿಮೇಳದಲ್ಲಿ ಭಾಗವಹಿಸಿದ ಜನ ಸಾಗರ

ಯಲಹಂಕದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK) ದಲ್ಲಿ ಕೃಷಿ ಮೇಳ -2022 ನಡೆಯುತ್ತಿದ್ದು, ನಿನ್ನೆ ಉದ್ಘಾಟನೆಗೊಂಡ ಮೇಳ ಮಳೆಯಿಂದ ಸ್ವಲ್ಪ ಕಳೆಗುಂದಿದೆ. ಆದರೆ, ಎರಡನೇ ದಿನವಾದ ಇಂದು ಕೃಷಿ ಮೇಳಕ್ಕೆ ಜನಸಾಗರವೇ ಹರಿದು ಬಂದಿದೆ. ಇಂದು 2.45 ಜನರು ಕೃಷಿಮೇಳಕ್ಕೆ ಭೇಟಿ ನೀಡಿದ್ದಾರೆ. 11,250 ಜನರು ಕೃಷಿ ವಿಶ್ವವಿದ್ಯಾಲಯದ ರಿಯಾಯಿತಿ ದರದ ಭೋಜನಾಲಯದಲ್ಲಿ ಮಧ್ಯಾಹ್ನದ ಊಟ ಸವಿದಿದ್ದಾರೆ. ಮಳಿಗೆಗಳಲ್ಲಿ 2.10 ಕೋಟಿ ವಹಿವಾಟು ನಡೆದಿದೆ. 575 ರೈತರು ಸಲಹಾ ಕೇಂದ್ರದಿಂದ ಮಾಹಿತಿ ಪಡೆದಿದ್ದಾರೆ.

ಕೃಷಿ ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು ಸೂರ್ಯಕಾಂತಿ ಬೆಳೆ, ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹೊಸ ತಳಿಗಳ ಪ್ರದರ್ಶನದ ತಾಟುಗಳಿದ್ದು, ಅದರಲ್ಲಿ ನೋಡುಗರ ಕಣ್ಮನ ಸೆಳೆಯುತ್ತಿದೆ. ಸೂರ್ಯಕಾಂತಿ ಬೆಳೆ, ಸೂರ್ಯಕಾಂತಿ ಬೆಳೆಯ ಮುಂದೆ ಸೆಲ್ಫಿ ಕ್ರೇಜ್ ಜೋರಾಗಿತ್ತು. ಕೃಷಿ ಮೇಳಕ್ಕೆ ಬಂದ ಪ್ರತಿಯೊಬ್ಬರು ಸೂರ್ಯಕಾಂತಿ ಬೆಳೆಯ ಮುಂದೇ ಫೋಟೋ ತೆಗೆಸದೆ ಮುಂದೆ ಹೋಗುತ್ತಿರಲಿಲ್ಲ.

ಓದಿ:ಕೀಟ ಬಾಧೆಯಿಂದ ಬೆಳೆ ಕಳೆದುಕೊಳ್ಳುವ ಚಿಂತೆಯಿಲ್ಲ: ಇಲ್ಲಿದೆ ಹೊಸ ಪರಿಹಾರೋಪಾಯ

ABOUT THE AUTHOR

...view details