ರಾಜ್ಯ ಆಡಳಿತ ಸೇವೆಯಲ್ಲಿನ ಅಧಿಕಾರಿಗಳ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲು ಒಡಂಬಡಿಕೆ
ರಾಜ್ಯ ಸಿವಿಲ್ ಸೇವೆಯ ಅಧಿಕಾರಿಗಳ ನೇಮಕಾತಿ, ವೇತನ, ಬಡ್ತಿ ಮತ್ತು ಪದೋನ್ನತಿ, ತರಬೇತಿ, ವೃಂದ ಮತ್ತು ನೇಮಕಾತಿ, ವೃಂದ ನಿರ್ವಹಣೆ ಇತ್ಯಾದಿ ವಿಷಯಗಳು ಸೇರಿ ರಾಜ್ಯ ಆಡಳಿತ ಸೇವೆಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಅಧ್ಯಯನ ನಡೆಸಲು ಯೋಜಿಸಲಾಗಿದೆ..
ರಾಜ್ಯ ಆಡಳಿತ ಸೇವೆಯಲ್ಲಿನ ಅಧಿಕಾರಿಗಳ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲು ಒಡಂಬಡಿಕೆ
ಬೆಂಗಳೂರು :ವಿವಿಧ ರಾಜ್ಯಗಳಲ್ಲಿನ ರಾಜ್ಯ ಆಡಳಿತ ಸೇವೆಯ ಅಧಿಕಾರಿಗಳ ಸ್ಥಿತಿಗತಿ ಸೇರಿದಂತೆ ಹಲವು ವಿಷಯಗಳ ಕುರಿತು ಅಧ್ಯಯನ ನಡೆಸಲು ಐಎಸ್ಇಸಿ (ISEC) ಜೊತೆ ಒಡಂಬಡಿಕೆ ಮಾಡಲಾಗಿದೆ.
ಕರ್ನಾಟಕ ಆಡಳಿತ ಸೇವಾ ಅಧಿಕಾರಿಗಳ ಸಂಘದ ಪರವಾಗಿ ಸದರಿ ಅಧ್ಯಯನವನ್ನು ಬೆಂಗಳೂರಿನ ಪ್ರತಿಷ್ಠಿತ ಅಧ್ಯಯನ ಸಂಸ್ಥೆಯಾದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಅಧ್ಯಯನ ಸಂಸ್ಥೆ ಐಎಸ್ಇಸಿ ಮುಖಾಂತರ ನಡೆಸಲಾಗುವುದು.
ಕರ್ನಾಟಕ ಆಡಳಿತ ಸೇವಾ ಅಧಿಕಾರಿಗಳ ಸಂಘದ ಪರವಾಗಿ ಸಂಘದ ಅಧ್ಯಕ್ಷ ಬಿ.ಎನ್.ವರಪ್ರಸಾದ್ ರೆಡ್ಡಿ, ಉಪಾಧ್ಯಕ್ಷ ಶಾಂತಾ.ಎಲ್ ಹುಲ್ಮನಿ, ಕಾರ್ಯಾದರ್ಶಿಗಳಾದ ಸಿ.ಎನ್, ಮಂಜುನಾಥ, ಜಂಟಿ ಕಾರ್ಯದರ್ಶಿಗಳಾದ ಡಾ. ರವಿ.ಎಂ ತಿರ್ಲಾಪೂರ ಮತ್ತು ಇತರೆ ಪದಾಧಿಕಾರಿಗಳು, ಅಧಿಕಾರಿಗಳು ಭಾಗವಹಿಸಿದ್ದರು.