ಕರ್ನಾಟಕ

karnataka

ETV Bharat / state

ವಿಟಿಯು- ಬೆಂಗಳೂರು‌ ವಿವಿ ಡಿಜಿಟಲ್ ಮೌಲ್ಯಮಾಪನ ಒಡಂಬಡಿಕೆ.. ‌ಇನ್ಮೇಲೆ ಇವ್ಯಾಲುವೇಷನ್ ಸರಳ! - undefined

ಬೆಂಗಳೂರು ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳು ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾ ಮತ್ತು ಮೌಲ್ಯಮಾಪನ ಕಾರ್ಯಗಳನ್ನು ಡಿಜಿಟಲೀಕರಣಗೊಳಿಸಲು ಸಾಫ್ಟ್​ವೇರ್ ತಂತ್ರಾಂಶದ ಭಾಗಗಳನ್ನು ಹಂಚಿಕೆ ಮಾಡಿಕೊಳ್ಳುವ ಬಗ್ಗೆ ಹಾಗೂ ಡಿಜಿಟಲ್ ಮೌಲ್ಯಮಾಪನ ಕೇಂದ್ರವನ್ನು ಸ್ಥಾಪಿಸುವ ಕುರಿತಂತೆ ಒಡಂಬಡಿಕೆ ಮಾಡಿಕೊಂಡಿವೆ.

ಡಿಜಿಟಲ್ ಮೌಲ್ಯಮಾಪನ ಒಡಂಬಡಿಕೆ.. ‌

By

Published : May 4, 2019, 1:13 PM IST

ಬೆಂಗಳೂರು:ಬೆಂಗಳೂರು ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳು ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾ ಮತ್ತು ಮೌಲ್ಯಮಾಪನ ಕಾರ್ಯಗಳನ್ನು ಡಿಜಿಟಲೀಕರಣಗೊಳಿಸಲು ಸಾಫ್ಟ್​ವೇರ್ ತಂತ್ರಾಂಶದ ಭಾಗಗಳನ್ನು ಹಂಚಿಕೆ ಮಾಡಿಕೊಳ್ಳುವ ಬಗ್ಗೆ ಹಾಗೂ ಡಿಜಿಟಲ್ ಮೌಲ್ಯಮಾಪನ ಕೇಂದ್ರವನ್ನು ಸ್ಥಾಪಿಸುವ ಕುರಿತಂತೆ ಒಡಂಬಡಿಕೆ ಮಾಡಿಕೊಂಡಿವೆ. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೇಣುಗೋಪಾಲ್ ಕೆ.ಆರ್ ಮತ್ತು ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪನವರ ಅಧ್ಯಕ್ಷತೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಬಿ.ಕೆ.ರವಿ ಮತ್ತು ವಿಟಿಯು ಕುಲಸಚಿವ ಸತೀಶ್ ಅಣ್ಣಿಗೆರೆ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.

ಈ ಸಂಬಂಧ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ವೇಣುಗೋಪಾಲ್ ಕೆ.ಆರ್ ಮಾತನಾಡಿ, ಈ ಡಿಜಿಟಲ್ ಮೌಲ್ಯಮಾಪನದ ಅಳವಡಿಕೆಯಿಂದ, ಮೌಲ್ಯಮಾಪನ ಕಾರ್ಯದಲ್ಲಿ ಮಾನವಿಕ ತಪ್ಪುಗಳು, ಉತ್ತರ ಪತ್ರಿಕೆಗಳ ತಿದ್ದುಪಡಿ ಮತ್ತು ಪರೀಕ್ಷಾ ಅಕ್ರಮಗಳನ್ನು ತಡೆಯಬಹುದಾಗಿದೆ. ಈ ಪ್ರಕ್ರಿಯೆಯು ತುಂಬಾ ಪಾರದರ್ಶಕತೆಯಿಂದ ಕೂಡಿದ್ದು, ಬಹುಬೇಗನೆ ಫಲಿತಾಂಶಗಳನ್ನು ಪ್ರಕಟಿಸಬಹುದಾಗಿದೆ. ಇದರಿಂದ ವಿಶ್ವವಿದ್ಯಾಲಯದ ಪರೀಕ್ಷಾ ಕಾರ್ಯಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳುವ ಗುರಿಯಿದೆ ಹಾಗೂ ಮಾನವಿಕ ಮೌಲ್ಯಮಾಪನ ಪ್ರಕ್ರಿಯೆಯಿಂದ ಉಂಟಾಗುವ ಅನೇಕ ಸಮಸ್ಯೆಗಳನ್ನು ಇದು ಪರಿಹರಿಸುತ್ತದೆ. ರೀ ಟೋಟಲಿಂಗ್‍ನಲ್ಲಿ ಆಗುವ ಶೇ. 10 ರಷ್ಟು ತಪ್ಪುಗಳು ಇದರಿಂದಾಗಿ ನಿವಾರಣೆಗೊಳ್ಳಲಿದೆ. ಪರೀಕ್ಷಾ ವೆಚ್ಚಗಳು ಬಹಳಷ್ಟು ತಗ್ಗಲಿವೆ. ಪ್ರಸ್ತುತ ಪರೀಕ್ಷಾ ಕಾರ್ಯಗಳಿಗೆ 2.5 ಕೋಟಿ ರೂ. ವೆಚ್ಚವಾಗುತ್ತಿತ್ತು. ಈ ವೆಚ್ಚವು 20 ಲಕ್ಷ ರೂ. ಗೆ ತಗ್ಗಲಿದೆ ಎಂದು ಮಾಹಿತಿ ನೀಡಿದರು.

ಡಿಜಿಟಲ್ ಮೌಲ್ಯಮಾಪನ ಒಡಂಬಡಿಕೆ.. ‌

ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಸಿ.ಶಿವರಾಜು ಹೇಳುವಂತೆ, ಮೌಲ್ಯಮಾಪಕರುಗಳಿಗೆ ಸಂಭಾವನೆ ನೀಡುವ ಪ್ರಕ್ರಿಯೆಯು ಸಹ ಸರಳಗೊಳ್ಳಲಿದ್ದು, ಇವರುಗಳಿಗೆ ಸಂಭಾವನೆಗಾಗಿ ಅನಗತ್ಯ ಓಡಾಟಗಳು ತಪ್ಪುವುದು. ವಿದ್ಯಾರ್ಥಿಗಳು ಮತ್ತು ಪೋಷಕರು ಉತ್ತರ ಪತ್ರಿಕೆಗಳನ್ನು ಬಹು ಸುಲಭವಾಗಿ ಪಡೆಯಬಹುದಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2012ನೇ ಸಾಲಿನಿಂದ ತನ್ನದೇ ಆದ ಡಿಜಿಟಲ್ ಮೌಲ್ಯಮಾಪನ ಪದ್ದತಿಯನ್ನು ಅಳವಡಿಸಿಕೊಂಡಿದ್ದು, ಬೆಂಗಳೂರು ವಿಶ್ವವಿದ್ಯಾಲಯವೂ ಸಹ ಈ ಒಡಂಬಡಿಕೆಯಿಂದಾಗಿ ವರ್ಷಾಂತ್ಯದಲ್ಲಿ ಸಂಪೂರ್ಣವಾಗಿ ಡಿಜಿಟಲ್ ಮೌಲ್ಯಮಾಪನವನ್ನು ಅಳವಡಿಸಿಕೊಳ್ಳಲಿದೆ. ಈ ಒಡಂಬಡಿಕೆಯ ಉದ್ದೇಶವು ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕಾರ್ಯಗಳನ್ನು ಡಿಜಿಟಲೀಕರಣಗೊಳಿಸುವುದು. ವಿಟಿಯು ಉಪಯೋಗಿಸುತ್ತಿರುವ ಡಿಜಿಟಲೀಕೃತ ಮೌಲ್ಯಮಾಪನ ವ್ಯವಸ್ಥೆಯ ತಂತ್ರಾಂಶಗಳನ್ನು, ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅಗತ್ಯ ಮಾರ್ಪಾಡು ಮಾಡಿಕೊಂಡು ಅಗತ್ಯ ನೆರವಿನೊಂದಿಗೆ ಅಳವಡಿಸಲು ವಿಟಿಯು ಒಪ್ಪಿದೆ. ಈ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಿಬ್ಬಂದಿಗೆ ತರಬೇತಿಯನ್ನು ಸಹ ನೀಡಲಿದೆ. ಡಿಜಿಟಲ್ ಮೌಲ್ಯಮಾಪನ ಕೇಂದ್ರಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಅಗತ್ಯ ಹಾರ್ಡ್‍ವೇರ್ ಮತ್ತು ಕಂಪ್ಯೂಟರ್​ಗಳನ್ನು ಒದಗಿಸಲಿದೆ. ಈ ಒಡಂಬಡಿಕೆಯು 3 ವರ್ಷಗಳ ಅವಧಿಯದ್ದಾಗಿರುತ್ತದೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details