ಬೆಂಗಳೂರು: ಮತ್ತೆ ರಾಜ್ಯದ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮತ್ತೆ ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ - ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
ನಿನ್ನೆ ರಾಜ್ಯ ಸರ್ಕಾರ ಇಬ್ಬರು ಹಿರಿಯ ಆಧಿಕಾರಿಗಳಿಗೆ ಬಡ್ತಿ ನೀಡಿ ಒಟ್ಟು ಮೂವರನ್ನು ವರ್ಗಾವಣೆಗೊಳಿಸಿತ್ತು. ಈ ಬೆನ್ನಲ್ಲೇ ಇಂದು ಕೂಡ ಮತ್ತೆ ಮೂವರು ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವಿಧಾನಸೌಧ
ತರಬೇತಿ ವಿಭಾಗದ ಡಿಜಿಪಿಯಾಗಿ ಪದಮ್ ಕುಮಾರ್ ಗರ್ಗ್, ಅಪರಾಧ ತನಿಖಾದಳ ಮತ್ತು ಆರ್ಥಿಕ ಅಪರಾಧ ವಿಭಾಗದ ಡಿಜಿಪಿಯಾಗಿ ಪಿ.ಎಸ್.ಸಂಧು, ಗೃಹ ರಕ್ಷಕ ದಳದ ಕಮಾಂಡೆಂಟ್ ಮತ್ತು ನಾಗರಿಕ ರಕ್ಷಣಾ, ಅಗ್ನಿಶಾಮಕ ದಳದ ಇಲಾಖೆಯ ಡಿಜಿಪಿಯಾಗಿ ಅಮರ್ ಕುಮಾರ್ ಪಾಂಡೆ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ನಿನ್ನೆ ಸಹ ರಾಜ್ಯ ಸರ್ಕಾರ ಇಬ್ಬರು ಹಿರಿಯ ಆಧಿಕಾರಿಗಳಿಗೆ ಬಡ್ತಿ ನೀಡಿ ಒಟ್ಟು ಮೂವರನ್ನು ವರ್ಗಾವಣೆಗೊಳಿಸಿತ್ತು.