ಕರ್ನಾಟಕ

karnataka

ETV Bharat / state

ಇಎಸ್ಐ ಆಸ್ಪತ್ರೆಗೆ ತಪ್ಪದ ಕೊರೊನಾ ಕಂಟಕ: ಬಿಬಿಎಂಪಿಯ ಮತ್ತೊಬ್ಬ ಸದಸ್ಯರಿಗೂ ಸೋಂಕು ದೃಢ! - Rajajinagar ESI Hospital

ಇಂದು ಬಿಬಿಎಂಪಿ ಸದಸ್ಯೆ, ಗೈನಾಕಾಲಜಿಸ್ಟ್, ಇನ್ನೊಬ್ಬರು ವೈದ್ಯ ವಿದ್ಯಾರ್ಥಿನಿ ಹಾಗೂ 30 ವರ್ಷದ ಇಬ್ಬರು ಸ್ಟಾಫ್ ನರ್ಸ್ ಗೆ ಕೂಡ ಕೊರೊನಾ ಸೋಂಕು ದೃಢವಾಗಿದೆ. ಇತ್ತ 20 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದ್ದು, ಇಲ್ಲಿಯವರೆಗೆ ಇಎಸ್ಐ ಆಸ್ಪತ್ರೆಯ 10 ಮಂದಿ ಸಿಬ್ಬಂದಿಗೆ ಪಾಸಿಟಿವ್ ಬಂದಿದೆ.

Again 4 are corona positive in Bengaluru ESI Hospital
ಇಎಸ್ಐ ಆಸ್ಪತ್ರೆಗೆ ತಪ್ಪದ ಕೊರೊನಾ ಕಂಟಕ: ಮತ್ತೊಬ್ಬ ಪಾಲಿಕೆ ಸದಸ್ಯನಿಗೆ ಸೋಂಕು ದೃಢ

By

Published : Jun 28, 2020, 2:10 PM IST

ಬೆಂಗಳೂರು: ನಗರದಲ್ಲಿ ಮತ್ತೋರ್ವ ಕಾರ್ಪೊರೇಟರ್​ಗೆ ಕೊರೊನಾ ವಕ್ಕರಿಸಿದೆ. ಜೊತೆ ರಾಜಾಜಿನಗರ ಇಎಸ್ಐ ಆಸ್ಪತ್ರೆಯ ನಾಲ್ವರಿಗೆ ಕಿಲ್ಲರ್ ಕೊರೊನಾ ಸೋಂಕು ದೃಢಪಟ್ಟಿದೆ.

ಬಿಬಿಎಂಪಿ ಸದಸ್ಯೆ, ಒಬ್ಬರು ಗೈನಾಕಾಲಾಜಿಸ್ಟ್, ಇನ್ನೊಬ್ಬರು ವೈದ್ಯ ವಿದ್ಯಾರ್ಥಿನಿ ಹಾಗೂ 30 ವರ್ಷದ ಇಬ್ಬರು ಸ್ಟಾಫ್ ನರ್ಸ್ ಗೆ ಕೂಡ ಕೊರೊನಾ ಸೋಂಕು ದೃಢವಾಗಿದೆ. ಇತ್ತ 20 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದ್ದು, ಇಲ್ಲಿಯವರೆಗೆ ಇಎಸ್ಐ ಆಸ್ಪತ್ರೆಯ 10 ಮಂದಿ ಸಿಬ್ಬಂದಿಗೆ ಪಾಸಿಟಿವ್ ಬಂದಿದೆ.

ಜೆ. ಜೆ ನಗರ ವಾರ್ಡ್ ಮಹಿಳಾ ಸದಸ್ಯೆಗೆ ಸೋಂಕು ತಗುಲಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರನ್ನು ಸೇರಿಸಿದರೆ ಪಾಲಿಕೆಯಲ್ಲಿ ಮೂರು ಮಂದಿಗೆ ಕೊರೊನಾ ತಗುಲಿದಂತಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಅವರ ಮನೆ ಸುತ್ತಲೂ ಸೀಲ್ ಡೌನ್ ಮಾಡಲಾಗಿದೆ.

ಇತ್ತ ಈ ಕಾರ್ಪೊರೇಟರ್​ ಸಂಪರ್ಕದಲ್ಲಿದ್ದ ಮನೆಯ 14 ಮಂದಿಗೂ ಪಾಸಿಟಿವ್ ಬಂದಿದೆ ಎನ್ನಲಾಗ್ತಿದೆ. ಅವರ ಸಂಪರ್ಕಿತರ ಟ್ರಾವೆಲ್ ಹಿಸ್ಟರಿ ಟ್ರ್ಯಾಕ್ ಮಾಡುವುದೇ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ABOUT THE AUTHOR

...view details