ಕರ್ನಾಟಕ

karnataka

ETV Bharat / state

ಲಾಕ್​ಡೌನ್ ತೆರವಿನ ಬಳಿಕ ಕೆಎಸ್​ಆರ್​ಟಿಸಿಗೆ ಕಾಡಲಿದೆಯಂತೆ ಬ್ರೇಕ್ ಡೌನ್ ಸಮಸ್ಯೆ! - ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಸಮಸ್ಯೆ

ರಾಜ್ಯದಲ್ಲಿ ಲಾಕ್​ಡೌನ್​ ಹಿನ್ನೆಲೆ ಕೆಎಸ್​ಆರ್​ಟಿಸಿ ಬಸ್​ಗಳು ನಿಂತಿದ್ದು, ಇದರಿಂದ ಬಸ್​ಗಳು ತಾಂತ್ರಿಕ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಘಟಕ ಹಾಗೂ ನಿಲ್ದಾಣಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳವ ಭರವಸೆಯನ್ನು ಮೇಲಾಧಿಕಾರಿಗಳು ನೀಡುತ್ತಿದ್ದಾರೆ.

KSRTC buses
ಕೆಎಸ್​ಆರ್​ಟಿಸಿಗೆ ಕಾಡಲಿದೆ ಬ್ರೇಕ್ ಡೌನ್

By

Published : Apr 14, 2020, 10:38 PM IST

ಬೆಂಗಳೂರು: ದೇಶಾದ್ಯಂತ ಲಾಕ್​ಡೌನ್ ಮೇ 3ರವರೆಗೆ ವಿಸ್ತರಿಸಿದ್ದು, ತೆರವಿನ ಬಳಿಕ ಸಾರಿಗೆ ಸಂಸ್ಥೆಯ ಬಸ್​ಗಳು ಬ್ರೇಕ್ ಡೌನ್ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚಾಗಿದೆ.

ಕೆಎಸ್​ಆರ್​ಟಿಸಿಗೆ ಕಾಡಲಿದೆ ಬ್ರೇಕ್ ಡೌನ್ ಸಮಸ್ಯೆ

ರಾಜ್ಯ ರಸ್ತೆ ಸಾರಿಗೆ ನಿಗಮದ 4 ವಿಭಾಗಗಳಿಂದ 25 ಸಾವಿರದಷ್ಟು ಬಸ್​ಗಳಿದ್ದು, ಸದ್ಯ ಬಿಎಂಟಿಸಿಯ ಬೆರಳೆಣಿಕೆಯಷ್ಟು ಬಸ್ ಹೊರತುಪಡಿಸಿದರೆ ಉಳಿದೆಲ್ಲಾ ಬಸ್​ಗಳು ನಿಲ್ದಾಣ ಹಾಗೂ ಘಟಕಗಳಲ್ಲಿ ನಿಂತಿವೆ. ಸಾಮಾನ್ಯ ಚಾಲನೆಯಲ್ಲಿರುವ ವಾಹನ ಕೆಲಕಾಲ ನಿಂತರೆ ಅದು ವಿವಿಧ ರೀತಿಯ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತದೆ.

ನೂರಾರು ಕಿ.ಮೀ. ಸಂಚರಿಸುವ ಬಸ್​ಗಳು ಏಕಾಏಕಿ ನಿಂತಿರುವ ಹಿನ್ನೆಲೆ ಯಾವ ರೀತಿಯ ಸಮಸ್ಯೆಗಳು ಮುಂದೆ ಎದುರಿಸುತ್ತವೆಯೋ ಎಂಬ ಆತಂಕ ಕೆಎಸ್ಆರ್​ಟಿಸಿ ಅಧಿಕಾರಿಗಳನ್ನು ಕಾಡುತ್ತಿದೆ. ಸಾಮಾನ್ಯವಾಗಿ ಬಸ್​​​ಅ​ನ್ನ ಕನಿಷ್ಠ 4 ಲಕ್ಷ ಕಿ.ಮೀ. ಓಡಿಸುವ ಕಾರ್ಯವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೊದಲಿನಿಂದಲೂ ರೂಢಿಸಿಕೊಂಡಿದೆ.

ಎಲ್ಲಾ ಸರಿ ಇರುವ ಸಂದರ್ಭದಲ್ಲಿಯೇ ಆಗಾಗ ಬಸ್​ಗಳು ಕೆಟ್ಟು ಮಾರ್ಗ ಮಧ್ಯೆ ನಿಲ್ಲುವುದನ್ನು ಸಾಕಷ್ಟು ಕಡೆ ಕಂಡಿದ್ದೇವೆ. ಇದೀಗ ತಿಂಗಳಿಂದ ಘಟಕದಲ್ಲಿ ನಿಂತಿರುವ ಬಸ್​ಗಳು ಸಹಜವಾಗಿಯೇ ಲಾಕ್​ಡೌನ್​ ತೆರವಿನ ನಂತರ ಸಮಸ್ಯೆಗಳನ್ನು ಎದುರಿಸಲಿವೆ ಎಂದು ಆಟೋ ಮೊಬೈಲ್ ವಿಭಾಗದ ತಜ್ಞರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೇ 4ರಿಂದ ಸಂಚಾರ ಆರಂಭಿಸಿದರೂ ಸಾಕಷ್ಟು ಕಡೆ ಹಾಳಾಗಿ ನಿಲ್ಲುವ ಆತಂಕ ಇದೆ. ಒಂದೆರಡು ವಾಹನಗಳಿದ್ದರೆ ಅದನ್ನು ಹೇಗೋ ನಿಭಾಯಿಸಬಹುದು. ಒಂದೊಂದು ಘಟಕ ಹಾಗೂ ನಿಲ್ದಾಣಗಳಲ್ಲಿ ನೂರಾರು ಬಸ್​ಗಳು ನಿಂತಿವೆ. ಇವನ್ನು ದಿನಕ್ಕೊಮ್ಮೆ ಆನ್ ಮಾಡಿ, ಇಲ್ಲವೇ ಚಾಲನೆ ಮಾಡಿ ಪರೀಕ್ಷಿಸುವುದು ಸಾಧ್ಯವಾಗುವ ಮಾತಲ್ಲ. ಮೇ 4ರ ನಂತರ ಒಮ್ಮೆಲೇ ಬಸ್​ಗಳು ರಸ್ತೆಗಿಳಿಯಲು ಮುಂದಾದರೆ ಸಾಕಷ್ಟು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

‘ಸೂಕ್ತ ಪರಿಶೀಲನೆ ಮಾಡುತ್ತಿದ್ದೇವೆ. ಆದರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೆಕ್ಯಾನಿಕ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯಂತೆ, ನಾವು ಸಂಸ್ಥೆಯ ಘಟಕಗಳಲ್ಲಿ ಕೆಲ ಸಿಬ್ಬಂದಿ ಕಾರ್ಯನಿರ್ವಹಣೆಯನ್ನು ಜಾರಿಯಲ್ಲಿಟ್ಟಿದ್ದೇವೆ. ನಿಂತ ವಾಹನಗಳ ನಿರಂತರ ತಪಾಸಣೆ ಹಾಗೂ ಅವುಗಳ ಕಾರ್ಯದಕ್ಷತೆಯ ಪರಿಶೀಲನೆ ನಡೆಸುತ್ತಿದ್ದೇವೆ. ಲಾಕ್​ಡೌನ್ ತೆರವಿನ ನಂತರ ಕೆಲವೆಡೆ ಬಸ್​ಗಳು ಬ್ರೇಕ್ ಡೌನ್ ಆಗುವ ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ನಾವು ಇದರ ನಿರ್ವಹಣೆಗೆ ಸೂಕ್ತ ಸಿಬ್ಬಂದಿಯನ್ನು ಹೊಂದಿದ್ದು, ಪ್ರಯಾಣಿಕರಿಗೆ ಸಂಸ್ಥೆಯಿಂದ ಯಾವುದೇ ತೊಂದರೆ ಹಾಗೂ ಅಡೆತಡೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಕೆಎಸ್​ಆರ್​ಟಿಸಿ ಮೇಲಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ABOUT THE AUTHOR

...view details