ಬೆಂಗಳೂರು: ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರಸದಾಶಿವನಗರದಮನೆಯಲ್ಲಿ ನಡೆಸಿದ ಸರಣಿ ಸಭೆಗಳ ಬಳಿಕ ಮಾಜಿ ಸಿಎಂ ಸಿದ್ಧರಾಮಯ್ಯ, ಕಾವೇರಿ ನಿವಾಸಕ್ಕೆ ವಾಪಾಸ್ಸಾಗಿದ್ದಾರೆ.
ಸರಣಿ ಸಭೆಗಳ ಬಳಿಕ ಏಕಾಂತ ಬಯಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಸಂಜೆ 6 ಗಂಟೆವರೆಗೆ ಯಾರನ್ನೂ ಮೀಟ್ ಮಾಡದೇ ಒಬ್ಬರೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ವೇಣುಗೋಪಾಲ್ ಜೊತೆ ಸಿದ್ದರಾಮಯ್ಯ ಮತ್ತೊಂದು ಸುತ್ತಿನ ಚರ್ಚೆ
ಒಬ್ಬರೇ ಇರಲು ಬಯಸಿರುವ ಸಿದ್ದರಾಮಯ್ಯ, ಯಾರನ್ನು ಮನೆಯೊಳಗೆ ಬಿಡದಂತೆ ಮನೆ ಗೇಟ್ ಬಳಿಯಿರುವ ಪೊಲೀಸರಿಗೆ ಸೂಚನೆ ನೀಡಿದ್ದು, ಸಿದ್ದರಾಮಯ್ಯ ಆಜ್ಞೆಯಂತೆ ಬಂದವರನ್ನೆಲ್ಲಾ ಗೇಟ್ನಿಂದಲೇ ಪೊಲೀಸರು ವಾಪಸ್ ಕಳಿಸುತ್ತಿದ್ದಾರೆ. ಸಂಜೆ 6 ಗಂಟೆವರೆಗೆ ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡಲ್ಲ ಎಂದಿದ್ದಾರಂತೆ. ಇನ್ನು ಸಂಜೆ 7 ರ ಬಳಿಕ ವೇಣುಗೋಪಾಲ್ ಜೊತೆ ಮತ್ತೊಂದು ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.