ಬೆಂಗಳೂರು: ಇದು ಆಫ್ರಿಕನ್ ಖಂಡದಿಂದ ಏಷ್ಯಾಕ್ಕೆ ಬಂದು, ಭಾರತದ ಬೆಂಗಳೂರಿನಲ್ಲಿ ಬಿಸಿನೆಸ್ ಮಾಡಿಕೊಂಡಿದ್ದು, ಭಾರತದ ಹೆಣ್ಣಿಗಾಗಿ ಕಡಿದಾಡಿಕೊಂಡು ಕೊಲೆಯಾದ ಆಫ್ರಿಕನ್ ಪ್ರಜೆಯ ದುರಂತ ಅಂತ್ಯ ಇದು. ಆಫ್ರಿಕಾದ 36 ವರ್ಷದ ಆರಡಿ ಡೇವಿಡ್ ಕೊಲೆಯಾದ ವ್ಯಕ್ತಿ. ಈತನನ್ನು ಕೊಲೆ ಮಾಡಿರುವ ಆರೋಪದಡಿ ಆಫ್ರಿಕಾ ಮೂಲದ ವಿಕ್ಟರ್ ಎಂಬಾತನನ್ನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಸಂಜೆ 6-30ಕ್ಕೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ದಾಸರಹಳ್ಳಿಯ ಮುನಿಕೆಂಪಣ್ಣ ಬಡಾವಣೆಯ ನಡುರಸ್ತೆಯಲಿ ಡೇವಿಡ್ ಹೆಣವಾಗಿದ್ದ. ಡೇವಿಡ್ ಕೊಲೆ ಆರೋಪಿ ಮನೆಗೆ ಬಂದು ಆತನ ಲಿವಿಂಗ್ ಟುಗೆದರ್ ಪಾರ್ಟನರ್ ಜೊತೆ ಸಾಂಗತ್ಯ ಬಯಸಿದ್ದ. ಇದು ವಿಕ್ಟರ್ಗೆ ಇಷ್ಟವಿರಲಿಲ್ಲ. ತಾನಿದ್ದ ಬಾಡಿಗೆ ಮನೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಪಾರ್ಟನರ್ ಜೊತೆ ಡೇವಿಡ್ನನ್ನು ಕಂಡ ಆರೋಪಿ ವಿಕ್ಟರ್ ಜಗಳ ತೆಗೆದಿದ್ದಾನೆ.