ಕರ್ನಾಟಕ

karnataka

ETV Bharat / state

ಕಬಾಬ್​​ ವ್ಯಾಪಾರಿ ಕೊಲೆ ಪ್ರಕರಣ: ಹೆಂಡತಿ ಅನೈತಿಕ ಸಂಬಂಧ ವಿರೋಧಿಸಿದ್ದಕ್ಕೆ ಮರ್ಡರ್​​​!? - kannada news

ಕಬಾಬ್ ವ್ಯಾಪಾರಿ ಉಮೇಶ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ , ಪತ್ನಿಯೊಂದಿಗಿನ ಅನೈತಿಕ ಸಂಬಂಧವನ್ನ ವಿರೋಧಿಸಿ ಆರೋಪಿಯನ್ನ ಜೈಲಿಗೆ ಕಳಿಸಿದ್ದೇ ಮರ್ಡರ್​ಗೆ ಕಾರಣ ಎನ್ನಲಾಗಿದೆ.

ಕಬಾಬ್ ವ್ಯಾಪಾರಿ ಉಮೇಶ್ ಕೊಲೆ ಪ್ರಕರಣ

By

Published : May 16, 2019, 7:42 PM IST

ಬೆಂಗಳೂರು: ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ದಿನದ ಹಿಂದಷ್ಟೆ ನಡೆದಿದ್ದ ಕಬಾಬ್ ವ್ಯಾಪಾರಿ ಉಮೇಶ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿಯೊಂದಿಗಿನ ಅನೈತಿಕ ಸಂಬಂಧವನ್ನ ವಿರೋಧಿಸಿ ಆರೋಪಿಯನ್ನ ಜೈಲಿಗೆ ಕಳಿಸಿದ್ದೇ ಮರ್ಡರ್​​ಗೆ ಕಾರಣದು ಹೇಳಲಾಗಿದೆ.

ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾದ ಸ್ನೇಹಿತ ಕಿಶೋರ್ ಕುಮಾರ್​ ಎಂಬಾತನನ್ನ ಕಳೆದ ಜನವರಿಯಲ್ಲಿ ಉಮೇಶ್ ಜೈಲಿಗೆ ಕಳಿಸಿದ್ದ. ಉಮೇಶ್ ಪತ್ನಿ ಕಿಶೋರ್ ತನ್ನ ನಗ್ನ ವೀಡಿಯೋ ಚಿತ್ರೀಕರಿಸಿ ಬ್ಲಾಕ್​ಮೇಲ್ ಮಾಡುತ್ತಿದ್ದ ಅಂತಲೇ ದೂರಿದ್ರಿಂದ ಜೈಲು ಸೇರಿದ್ದ ಕಿಶೋರ್, ಹೊರ ಬಂದ ಮೇಲೆ ತನ್ನ ಟೀಂ ಜೊತೆ ಸೇರಿ ಮೇ 12 ರಂದು ಉಮೇಶ್​ನ ಕೊಲೆಗೈದಿದ್ದ ಎನ್ನಲಾಗಿದೆ.

ಆದ್ರೆ ಸದ್ಯ ತನಿಖೆ ವೇಳೆ ಆರೋಪಿ ಕಿಶೋರ್ ಹಾಗೂ ಉಮೇಶ್ ಪತ್ನಿಯ ಖಾಸಗಿ ವಿಡಿಯೋಗಳು ಲಭ್ಯವಾಗಿದ್ದು, ಇಬ್ಬರ ನಡುವಿನ ಅನೈತಿಕ ಸಂಬಂಧಕ್ಕೆ ಮುಳುವಾಗ್ತಾನೆ ಅಂತಾ ಗಂಡನನ್ನ ಮುಗಿಸಲು ಹೆಂಡತಿಯೇ ಕೈ ಜೋಡಿಸಿದಳಾ ಅನ್ನೋ ಅನುಮಾನ ಸಹ ಕಾಡತೊಡಗಿದೆ. ಸದ್ಯ ಪೋಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details