ಬೆಂಗಳೂರು:ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ 2023 ರ ಫೆಬ್ರವರಿ 13 ರಿಂದ 17ರ ವರೆಗೆ ಯಲಹಂಕದ ವಾಯುನೆಲೆಯಲ್ಲಿ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.
ರಕ್ಷಣಾ ಸಚಿವಾಲಯ ಈ ಬಗ್ಗೆ ಅಧಿಕೃತವಾಗಿ ದಿನಾಂಕ ಪ್ರಕಟಿಸಿರುವುದರಿಂದ ಉತ್ತರ ಪ್ರದೇಶ, ಗೋವಾಗೆ ವೈಮಾನಿಕ ಪ್ರದರ್ಶನ ಸ್ಥಳಾಂತರಗೊಳ್ಳಲಿದೆ ಎನ್ನುವ ಎಲ್ಲಾ ಅನುಮಾನಗಳಿಗೆ ತೆರೆಬಿದ್ದಿದೆ. ದೇಶ ವಿದೇಶಗಳ ನೂರಾರು ರಕ್ಷಣಾ ಉಪಕರಣ ತಯಾರಿಕ ಕಂಪನಿಗಳು ತಮ್ಮ ಉತ್ಪನ್ನ ಪ್ರದರ್ಶಿಸಲಿವೆ. ಅಲ್ಲಿ ಜಗತ್ತಿನ ದೇಶಗಳ ಎದುರು ತಮ್ಮ ದೇಶದಲ್ಲಿರುವ ರಕ್ಷಣಾ ಸಾಮರ್ಥ್ಯವನ್ನು ಅನಾವರಣ ಮಾಡಲು ಸೂಕ್ತ ವೇದಿಕೆ ಇದಾಗಿದೆ.