ಕರ್ನಾಟಕ

karnataka

ETV Bharat / state

ಏರೊ ಇಂಡಿಯಾ 2023: ಸಾರ್ವಜನಿಕರ ಅನುಕೂಲಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದ ಬಿಎಂಟಿಸಿ - ಏರೊ ಇಂಡಿಯಾ 2023

ಏರೊ ಇಂಡಿಯಾ 2023: ಏರ್ ಶೋ ಗೆ ಹೆಚ್ಚುವರಿ ಬಸ್ ಸಂಚಾರ ಕಲ್ಪಿಸಿದ ಬಿಎಂಟಿಸಿ - ಪ್ರಯಾಣಿಕರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ.

aero india 2023
ಏರೊ ಇಂಡಿಯಾ 2023

By

Published : Feb 11, 2023, 10:59 PM IST

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರ್ ಶೋಗೆ ಹೆಚ್ಚುವರಿ ವಿಶೇಷ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೂ ಪ್ರಕಟಣೆಯಲ್ಲಿ ತಿಳಿಸಿದೆ. ಫೆಬ್ರವರಿ 13 ರಿಂದ 17 ರ ವರೆಗೆ ಏರ್ ಶೋ ನಡೆಯಲಿದ್ದು, ಏರ್ ಶೋ ವೀಕ್ಷಿಸಲು ಹೆಚ್ಚಿನ ಜನದಟ್ಟಣೆ ಆಗಮಿಸುವುದರಿಂದ 10 ಹೆಚ್ಚುವರಿ ಬಸ್​ಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.ದಿನಾಂಕ 16 ಹಾಗೂ 17ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಬಸ್​​ಗಳ ಸಂಚಾರದ ವ್ಯವಸ್ಥೆ ಇರಲಿದೆ ಎಂದು ತಿಳಿಸಿದೆ.

ಬಿಎಂಟಿಸಿಯೂ ಬಸ್​ಗಳು ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಶಿವಾಜಿನಗರ, ಹೆಬ್ಬಾಳ, ಬನಶಂಕರಿ ಟಿಟಿಎಂಸಿ, ಯಲಹಂಕ ಎನ್ ಇ ಎಸ್, ಕೆಂಗೇರಿ, ಟಿನ್ ಫ್ಯಾಕ್ಸಿ ಹಾಗೂ ಯಶವಂತಪುರದಿಂದ ಸಂಚರಿಸಲಿವೆ ಎಂದು ಮಾಹಿತಿ ನೀಡಿದೆ.

ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ:ಏರ್ ಶೋಗೆ ಹೋಗುವವರು ಬಸ್ ನಿಲ್ದಾಣದವರೆಗೆ ತಮ್ಮ ಸ್ವಂತ ವಾಹನದಲ್ಲಿ ಬರಬೇಕು. ಅಲ್ಲಿಂದ ಬಸ್‌ನಲ್ಲಿ ತೆರಳಬೇಕು. ಆದ್ದರಿಂದ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಯಶವಂತಪುರ, ಶಾಂತಿನಗರ, ಜಯನಗರ, ಕೋರಮಂಗಲ, ಕೆಂಗೇರಿ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಬಸ್ ನಿಲ್ದಾಣದಲ್ಲಿ ಸ್ವಂತ ವಾಹನ ಪಾರ್ಕಿಂಗ್ ಮಾಡಿ ಬಸ್ ಬಳಸುವಂತೆ ಸಾರ್ವಜನಿಕರಲ್ಲಿ ಬಿಎಂಟಿಸಿ ಮನವಿ ಮಾಡಿದೆ.

ಪೊಲೀಸರಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ: ದೇಶ-ವಿದೇಶಗಳಿಂದ‌ ಗಣ್ಯರು ರಾಜಧಾನಿಗೆ ದೌಡಾಯಿಸಿದ್ದಾರೆ. ಪ್ರತಿಷ್ಠಿತ ತಾರಾ ಹೋಟೆಲ್​​ಗಳಲ್ಲಿ ವಾಸ್ತವ್ಯ ಹೂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿಯೂ ಪೊಲೀಸರು ಭದ್ರತೆಗೆ ಕ್ರಮ ಕೈಗೊಂಡಿದ್ದಾರೆ‌‌ ಎಂದು‌ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಯಲಹಂಕ ವಾಯುನೆಲೆಯ ಏರ್ ಶೋ ಸೂಕ್ತ ಭದ್ರತೆಗೆ ಪೊಲೀಸ್ ಸರ್ಪಗಾವಲು ವ್ಯವಸ್ಥೆ ಕಲ್ಪಿಸಿದೆ. 4 ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ‌. 18 ಡಿಸಿಪಿಗಳು, ಬಹುತೇಕ ಎಲ್ಲಾ ವಲಯದ ಎಸಿಪಿಗಳು, ಪೊಲೀಸ್ ಇನ್ಸ್​​ಪೆಕ್ಟರ್​​, ಪಿಎಸ್​​ಐ ಸೇರಿದಂತೆ‌ ಒಟ್ಟು 5,000 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ‌‌. ಹೆಚ್ಚುವರಿಯಾಗಿ 52 ಕೆಎಸ್​​ಆರ್​​ಪಿ, 26 ಸಿಎಆರ್ ತುಕಡಿಗಳು ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಮಾಹಿತಿ ನೀಡಿದ್ದಾರೆ.

ಯಲಹಂಕ ವಾಯುನೆಲೆಯ ಪ್ರವೇಶ ದ್ವಾರದ ಮುಂದೆ 1500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ‌. ಏರ್ ಶೋನಲ್ಲಿ ಭಾಗಿಯಾಗುವ ಅತಿ ಗಣ್ಯ ಹಾಗೂ ಗಣ್ಯರು ಈಗಾಗಲೇ ನಗರಕ್ಕೆ ಬಂದಿದ್ದು, ವಾಸ್ತವ್ಯ ಹೂಡಿರುವ ಸ್ಟಾರ್ ಹೋಟೆಲ್​​ಗಳ ಮುಂದೆ ಪೊಲೀಸ್ ಚೌಕಿ ತೆರೆಯಲಾಗಿದೆ‌ ಎಂದು‌ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ‌.

ಬಿಬಿಎಂಪಿ ಮಾಂಸ‌ ಮಾರಾಟ:ವಿಮಾನ ಹಾರಾಟಕ್ಕೆ ಅಡಚಣೆಯಾಗುವ ಡ್ರೋನ್​ಗಳು, ಪ್ಯಾರಾಚೂಟ್, ಮೈಕ್ರೋ ಲೈಟ್ಸ್, ಸಣ್ಣ ಪ್ರಮಾಣದ ಏರ್​ಕ್ರಾಪ್ಟ್, ಬಲೂನ್, ಏರಿಯಲ್ ವೆಹಿಕಲ್ಸ್, ರೊಬೋಟಿಕ್ ಆಟೋ ಮಷಿನ್​​ಗಳಿಗೆ ನಿಷೇಧ‌ ಹೇರಲಾಗಿದೆ. ಯಾವುದೇ ರೀತಿಯ ಗಾಳಿಪಟ ಮತ್ತು ಪಾರಿವಾಳ ಹಾರಾಡದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ‌‌. ವೈಮಾನಿಕ ಪ್ರದರ್ಶನ ನಡೆಯುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ 15 ದಿನಗಳ ಹಿಂದೆಯೇ ಬಿಬಿಎಂಪಿ ಮಾಂಸ‌ ಮಾರಾಟ ನಿಷೇಧಿಸಿದೆ.

ಇದನ್ನೂಓದಿ:ಆಡಳಿತ ಯಂತ್ರಕ್ಕೆ ಸರ್ಜರಿ: 17 ಐಎಎಸ್ ಅಧಿಕಾರಿಗಳ ವರ್ಗಾವಣೆ

ABOUT THE AUTHOR

...view details