ಬೆಂಗಳೂರು: ನಟಿ ರಾಗಿಣಿ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದು, ಸದ್ಯ ಆಕೆಯನ್ನು ಭೇಟಿ ಮಾಡಿ ಬಂದ ವಕೀಲ ರವಿಶಂಕರ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.
ಮಾನಸಿಕವಾಗಿ ರಾಗಿಣಿ ಸದೃಢವಾಗಿದ್ದಾರೆ: ವಕೀಲ ರವಿಶಂಕರ್ ಹೇಳಿಕೆ - ಬೆಂಗಳೂರು
ನಟಿ ರಾಗಿಣಿ ಪೊಲೀಸ್ ಕಸ್ಟಡಿಯಲ್ಲಿದ್ದು, ಆಕೆಯನ್ನು ಭೇಟಿ ಮಾಡಲು ಬಂದ ವಕೀಲ ರವಿಶಂಕರ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

ವಕೀಲ ರವಿಶಂಕರ್ ಮಾತು
ರಾಗಿಣಿ ಮಾನಸಿಕವಾಗಿ ಸದೃಢರಾಗಿದ್ದಾರೆ. ಆಕೆಯ ಮೇಲೆ ಡ್ರಗ್ ಆಪಾದನೆ ಇದೆ. ಆದರೆ ನ್ಯಾಯಾಲಯ ರಾಗಿಣಿಯವನ್ನು ಅಪರಾಧಿ ಅಂದಿಲ್ಲ. ಸದ್ಯ ರಾಗಿಣಿ ಅವರಿಗೆ ಲೀಗಲ್ ಅಡ್ವೈಸ್ ನೀಡಲು ನಾನು ಬಂದಿದ್ದೀನಿ ಎಂದರು.
ವಕೀಲ ರವಿಶಂಕರ್ ಮಾತು
ಇನ್ನು ರಾತ್ರಿಯಿಂದ ಆ್ಯಸಿಡಿಟಿ ಸಮಸ್ಯೆ ಇದೆ ಎಂದಿದ್ದಾರೆ. ಹೀಗಾಗಿ ಅವರ ಆರೋಗ್ಯದ ಬಗ್ಗೆ ವಿಚಾರಣೆ ಮಾಡಿದ್ದೇನೆ. ಆಕೆಗೆ ಖಂಡಿತ ಜಾಮೀನು ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.