ಕರ್ನಾಟಕ

karnataka

ETV Bharat / state

ನಾನು ಹೆಣ್ಣಾಗಿರುವುದಕ್ಕೆ ಸುಮ್ಮನಿದ್ದೇನೆ, ಗಂಡಾಗಿದ್ದರೆ ಕಥೆಯೇ ಬೇರೆಯಾಗಿರುತಿತ್ತು: ವಕೀಲೆ ಮೀರಾ - ಸಾಹಿತಿ ಕೆ.ಎಸ್.ಭಗವಾನ್ ಮುಖಕ್ಕೆ‌ ಮಸಿ

ಕೋರ್ಟ್ ಆವರಣದಲ್ಲಿ ನಾನು ಭಗವಾನ್ ಮುಖಕ್ಕೆ ಮಸಿ ಬಳಿದಿಲ್ಲ. ನ್ಯಾಯಾಲಯದ ಹೊರಗಡೆ ಮಾಡಿದ್ದೇನೆ. ಅವರ ಮುಖಕ್ಕೆ ಮಸಿ ಬಳಿದಿರುವುದು ಇನ್ನೂರರಷ್ಟು ಸಂತೋಷ ಕೊಟ್ಟಿದೆ. ನಾನು ಹೆಣ್ಣು ಮಗಳಾಗಿರುವುದ್ದಕ್ಕೆ ಸುಮ್ಮನಿದ್ದೇನೆ. ಗಂಡಾಗಿದ್ದರೆ ಅದರ ಕಥೆಯೇ ಬೇರೆ ಇರುತ್ತಿತ್ತು ಎಂದಿದ್ದಾರೆ.

ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರ
ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರ

By

Published : Feb 5, 2021, 5:08 AM IST

Updated : Feb 5, 2021, 5:18 AM IST

ಬೆಂಗಳೂರು: ಹಿಂದೂ ವಿರೋಧಿ ಹೇಳಿಕೆ ನೀಡಿದ ಸಂಬಂಧ ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಮುಖಕ್ಕೆ‌ ಮಸಿ ಬಳಿದ ಆರೋಪಕ್ಕೆ ಗುರಿಯಾಗಿರುವ ವಕೀಲೆ ಮೀರಾ ರಾಘವೇಂದ್ರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು,ನಾನು ಹೆಣ್ಣು‌ ಆಗಿದಕ್ಕೆ ಸುಮ್ಮನಿದ್ದೇನೆ, ಗಂಡಾಗಿದ್ದರೆ ಅದರ ಕಥೆಯೇ ಬೇರೆಯಾಗಿರುತಿತ್ತು ಎಂದು ಹೇಳಿದ್ದಾರೆ.

ಕೋರ್ಟ್ ಆವರಣದಲ್ಲಿ ನಾನು ಭಗವಾನ್ ಮುಖಕ್ಕೆ ಮಸಿ ಬಳಿದಿಲ್ಲ. ನ್ಯಾಯಾಲಯದ ಹೊರಗಡೆ ಮಾಡಿದ್ದೇನೆ. ಅವರ ಮುಖಕ್ಕೆ ಮಸಿ ಬಳಿದಿರುವುದು ಇನ್ನೂರರಷ್ಟು ಸಂತೋಷ ಕೊಟ್ಟಿದೆ. ನಾನು ಹೆಣ್ಣು ಮಗಳಾಗಿರುವುದ್ದಕ್ಕೆ ಸುಮ್ಮನಿದ್ದೇನೆ. ಗಂಡಾಗಿದ್ದರೆ ಅದರ ಕಥೆಯೇ ಬೇರೆ ಇರುತ್ತಿತ್ತು ಎಂದಿದ್ದಾರೆ.

ಭಗವಾನ್ ಅವರು ಹಿಂದೂ ಪದ ಬಳಸಬಾರದು ಎಂದು ಹೇಳಿದ್ದಾರೆ. ಶೂದ್ರರ ಮಕ್ಕಳನ್ನು ವೈಶ್ಯರ ಮಕ್ಕಳೆಂದು, ಭಗವದ್ಗೀತೆಯನ್ನು ಹರಿದು ಹಾಕಬೇಕು ಎಂಬ ಹೇಳಿಕೆ ನೀಡಿದ್ದಾರೆ. ಎಲ್ಲೋ ಮೈಸೂರಿನಲ್ಲಿ ಕುಳಿತುಕೊಂಡು‌ ದರ್ಪ ತೋರಿಸುತ್ತಿದ್ದರು. ಅವರ ಬಗ್ಗೆ ಯಾರೂ ಧ್ವನಿ ಎತ್ತಲ್ಲ ಎಂಬ ಭ್ರಮೆಯಲ್ಲಿದ್ದರು. ಹಾಗಾಗಿ ಅವರಿಗೆ ಇವತ್ತು ತಕ್ಕ ಪಾಠ ಕಲಿಸಿದ್ದೇನೆ ಎಂದು ಮೀರಾ ತಿಳಿಸಿದ್ದಾರೆ.

ನ್ಯಾಯಾಲಯದಲ್ಲಿ ಭಗವಾನ್ ಅವರಿಗೆ ಜಾಮೀನು ಸಿಗುವುದು ನನಗೆ ತಿಳಿದಿತ್ತು‌.‌‌ ಉದ್ದೇಶಪೂರ್ವಕವಾಗಿ ನಾನು ಅವರಿಗೆ ಮಸಿ ಬಳಿದಿದ್ದೇನೆ. ನನ್ನ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಂಡರೂ ಎದುರಿಸಲು ಸಿದ್ಧ. ಅವರು ಸಾಮಾನ್ಯ ವ್ಯಕ್ತಿಯಾಗಿ ಅಷ್ಟು ದಿಮಾಕಿದ್ದರೆ, ನಾನು ಅಡ್ವೋಕೇಟ್, ನನಗೆ ಕಾನೂನು ಸರಿಯಾಗಿ ತಿಳಿದಿದೆ. ಎಲ್ಲಾ ರೀತಿಯಲ್ಲೂ ಅವರಿಗೆ ಉತ್ತರ ಕೊಡಲು ಸಿದ್ಧ. ಒಂದು ವೇಳೆ ಹಿಂದೂ ವಿರೋಧಿ ಹೇಳಿಕೆ ನಿಲ್ಲಿಸದಿದ್ದರೆ ಜನಸಾಮಾನ್ಯರು ಬೀದಿಬೀದಿಯಲ್ಲಿ ಕಲ್ಲಲ್ಲಿ ಹೊಡೆಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:ವಕೀಲೆ ಮೀರಾ ರಾಘವೇಂದ್ರ ವಿರುದ್ಧ ದೂರು ದಾಖಲಿಸಿದ ಭಗವಾನ್​

Last Updated : Feb 5, 2021, 5:18 AM IST

ABOUT THE AUTHOR

...view details