ಬೆಂಗಳೂರು: ಸಿಎಂ ಯಡಿಯೂರಪ್ಪನವರು ಆರೋಪಿಯನ್ನು ಚುನಾವಣಾ ಪ್ರಚಾರಕ್ಕೆ ಆಹ್ವಾನಿಸುವ ಬದಲು, ಬಂಧಿಸಲು ಸೂಚಿಸಲಿ. ನಾಳೆಯೇ ಬಂಧಿಸಿದರೆ ಒಳ್ಳೇದು. ಈ ಮೂಲಕ ಸಿಎಂ ತನ್ನ ಸ್ಥಾನದ ಘನತೆ ಉಳಿಸಿಕೊಳ್ಳಲಿ ಎಂದು ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಪರ ವಕೀಲ ಜಗದೀಶ್ ಹೇಳಿದರು.
ಮಲ್ಲೇಶ್ವರಂನ ಅಪಾರ್ಟ್ಮೆಂಟ್ ಬಳಿ ಮಾತನಾಡಿದ ಅವರು, ಸ್ಥಳ ಮಹಜರು ಪ್ರಕ್ರಿಯೆ ನಡೆಯುತ್ತಿದೆ. ಗಂಭೀರ ಪ್ರಕರಣವಾಗಿರುವುದರಿಂದ ಪ್ರತಿಯೊಂದಕ್ಕೂ ಪುರಾವೆ ಮುಖ್ಯವಾಗಿರುತ್ತದೆ. ಬಟ್ಟೆ ಬರೆ ಸೇರಿದಂತೆ ಸಿಕ್ಕ ಎಲ್ಲಾ ವಸ್ತುಗಳು ಕೂಡ ಪುರಾವೆಯಾಗಿರುತ್ತೆ ಎಂದು ತಿಳಿಸಿದರು.
ಯುವತಿ ಪರ ವಕೀಲ ಜಗದೀಶ್ ಹೇಳಿಕೆ ಇದನ್ನೂ ಓದಿ : ಸಿಡಿ ತನಿಖೆ: ಮಲ್ಲೇಶ್ವರಂನ ಅಪಾರ್ಟ್ಮೆಂಟ್ನಲ್ಲಿ ಎಸ್ಐಟಿಯಿಂದ ಮಹಜರು
ಸಿಆರ್‌ಪಿಸಿ ಸೆಕ್ಷನ್ 164 ಮತ್ತು 161 ಅಡಿಯಲ್ಲಿ ಸಂತ್ರಸ್ತೆ ಏನು ಹೇಳಿಕೆ ಕೊಟ್ಟಿದ್ದಾರೋ, ಅದಕ್ಕೆ ಪೂರಕವಾದ ದಾಖಲೆ ಒದಗಿಸುವುದೇ ಪಂಚನಾಮೆ. ಇದು ಕರ್ನಾಟಕದ ಹೈ ಫ್ರೊಫೈಲ್ ಕೇಸ್. ರಾಜ್ಯದ ಜನ ಈ ಬಗ್ಗೆ ಕಾತರದಿಂದ ಕಾಯುತ್ತಿದ್ದಾರೆ. ಹಾಗಾಗಿ, ಆದಷ್ಟು ಬೇಗ ಆರೋಪಿಯನ್ನು ಬಂಧಿಸಬೇಕು. ಸದ್ಯ, ಸಂತ್ರಸ್ತೆಯ ವಿಚಾರವಾಗಿಯೇ ತನಿಖೆ ನಡೆಯುತ್ತಿದೆ. ನಾಳೆ ಆರೋಪಿಯನ್ನು ವಿಚಾರಣೆಗೆ ಕರೆದಿದ್ದಾರೆ ಎಂದು ಮಾಹಿತಿ ನೀಡಿದರು.
ಪೊಲೀಸರು ಆರೋಪಿಯನ್ನು ಬಂಧಿಲು ರೆಡಿ ಇದ್ದಾರೆ. ಆದರೆ, ಸರ್ಕಾರ ಬಂಧಿಸಲು ಬಿಡುತ್ತಿಲ್ಲ, ಪೊಲೀಸರ ಮೇಲೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದರು.