ಕರ್ನಾಟಕ

karnataka

ETV Bharat / state

ಅಪರಾಧ ಪತ್ತೆಗೆ ನೂತನ ತಂತ್ರಜ್ಞಾನದ ಮೊರೆ ಹೋದ ಬೆಂಗಳೂರು ರೈಲ್ವೆ ಪೊಲೀಸರು.. - cc camera adopted by Bengalore railway police

ರೈಲ್ವೆ ಹಳಿಗಳ ಮೇಲಿನ ಸಾವುಗಳ ನಿಗೂಢತೆ ಬೇಧಿಸಲು ರೈಲುಗಳ ಇಂಜಿನ್ ಮುಂಭಾಗ ಮಾತ್ರವಲ್ಲದೇ ರೈಲು ಭೋಗಿಗಳಿಗೂ ಕ್ಯಾಮೆರಾ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ..

cc camera
ಸಿಸಿ ಕ್ಯಾಮರಾ

By

Published : Feb 8, 2021, 7:54 PM IST

ಬೆಂಗಳೂರು :ರೈಲ್ವೆ ಹಳಿಗಳ ಮೇಲೆ ಸಂಭವಿಸುವ ಅಪರಾಧಗಳನ್ನ ಪತ್ತೆ ಹಚ್ಚಲು ನಗರ ರೈಲ್ವೆ ಪೊಲೀಸರು ಹೊಸ ತಂತ್ರಜ್ಞಾನ ಪರಿಚಯಿಸಲು ಮುಂದಾಗಿದ್ದಾರೆ. ರೈಲ್ವೆ ಇಂಜಿನ್ ಮುಂಭಾಗದಲ್ಲಿ ಅತ್ಯಾಧುನಿಕ ಕ್ಯಾಮೆರಾ ಅಳವಡಿಕೆಗೆ ಅನುಮತಿ ಕೋರಿ ಕೇಂದ್ರ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರೈಲ್ವೆ ಹಳಿಗಳ ಮೇಲೆ‌ ಸಾವು, ರೈಲ್ವೆ ಇಲಾಖೆಗೆ ಸಂಬಂಧಿಸಿದ ವಸ್ತುಗಳ ಕಳವು ಪ್ರಕರಣ ಹೆಚ್ಚಾಗುತ್ತಿವೆ. ಅವುಗಳನ್ನು ಬೇಧಿಸುವ ಸಲುವಾಗಿ ಕ್ಯಾಮೆರಾ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ. ಈ ಕುರಿತು ಈಗಾಗಲೇ ಬೆಂಗಳೂರು‌ ರೈಲ್ವೆ ಪೊಲೀಸರು ಕೇಂದ್ರ ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಓದಿ:ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಪರಿಷತ್​ನಲ್ಲಿ ಮಂಡನೆ; ಚರ್ಚೆ ಆರಂಭ

ರಾಜ್ಯವೊಂದರಲ್ಲೇ ವರ್ಷಕ್ಕೆ 1500 ಮಂದಿ ರೈಲು ಹಳಿ ಮೇಲೆ ಸಾಯುತ್ತಿದ್ದಾರೆ. ಹೆಚ್ಚಿನ ಪ್ರಕರಣ ಅಸಹಜ ಸಾವು ಎಂದೇ ದಾಖಲಿಸಿಕೊಳ್ಳಲಾಗುತ್ತಿದೆ. ಈ ಸಾವು ಆತ್ಮಹತ್ಯೆಯೋ? ಕೊಲೆಯೋ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಕೂಡ ಸಿಗುತ್ತಿಲ್ಲ.

ಹೀಗಾಗಿ, ರೈಲ್ವೆ ಹಳಿಗಳ ಮೇಲಿನ ಸಾವುಗಳ ನಿಗೂಢತೆ ಬೇಧಿಸಲು ರೈಲುಗಳ ಇಂಜಿನ್ ಮುಂಭಾಗ ಮಾತ್ರವಲ್ಲದೇ ರೈಲು ಭೋಗಿಗಳಿಗೂ ಕ್ಯಾಮೆರಾ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ.

ಹೀಗಾಗಿ, ಕ್ಯಾಮೆರಾ ಅಳವಡಿಸಲು ಬೆಂಗಳೂರು ರೈಲ್ವೆ ಪೊಲೀಸರು ಕೇಂದ್ರ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ. ಸದ್ಯ ಕೇಂದ್ರದ ಪ್ರತಿಕ್ರಿಯೆಗಾಗಿ ನಗರ ರೈಲ್ವೆ ಪೊಲೀಸರು ಕಾಯುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details