ಕರ್ನಾಟಕ

karnataka

ETV Bharat / state

ಬಿಬಿಎಂಪಿ ವಾರ್ಡ್​ವಾರು ಮೀಸಲು ನಿಗದಿ ಅರ್ಜಿ ವಿಚಾರಣೆ ಮುಂದೂಡಿಕೆ​...

ವಾರ್ಡ್​ವಾರು ಮೀಸಲು ನಿಗದಿ ಪ್ರಶ್ನಿಸಿ ಬಿಬಿಎಂಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ.

KN_BNG_BBMP
ಹೈಕೋರ್ಟ್​

By

Published : Sep 28, 2022, 9:30 AM IST

ಬೆಂಗಳೂರು: ಬಿಬಿಎಂಪಿ ವಾರ್ಡ್‌ವಾರು ಮೀಸಲು ನಿಗದಿ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್​ ನಾಳೆಗೆ ಮುಂದೂಡಿದೆ. ಈಜಿಪುರದ ಕೆ.ಮಹದೇವ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ಕುರಿತು ನ್ಯಾ.ಹೇಮಂತ್ ಚಂದನಗೌಡರ್ ಅವರಿದ್ದ ಏಕ ಸದಸ್ಯಪೀಠ ಮಂಗಳವಾರ ವಾದ-ಪ್ರತಿವಾದ ಅಲಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ, ಪಾಲಿಕೆ ವ್ಯಾಪ್ತಿಯಲ್ಲಿ ಮೀಸಲು ನಿಗದಿಪಡಿಸಿರುವ ನಿಯಮ ಸರಿಯಾಗಿಲ್ಲ. ಆದ್ದರಿಂದ ಮೀಸಲು ರದ್ದುಗೊಳಿಸಿ ಹೊಸದಾಗಿ ನಿಗದಿ ಮಾಡಬೇಕು. ಚುನಾವಣಾ ಆಯೋಗ ಈ ಹಂತದಲ್ಲಿ ಮೀಸಲು ಪಟ್ಟಿ ರದ್ದುಗೊಳಿಸಿದರೆ ಮತ್ತೆ ಚುನಾವಣೆ ವಿಳಂಬವಾಗಲಿದೆ. ಹಾಗಾಗಿ ಈಗ ನಿಗದಿಪಡಿಸಿರುವ ಮೀಸಲು ಪ್ರಕಾರ ಚುನಾವಣೆ ನಡೆಸಬೇಕು ಎಂದು ಮನವಿ ಮಾಡಿದರು. ಅರ್ಜಿದಾರರ ಪರ ವಕೀಲರು, ಒಬಿಸಿ ಮೀಸಲು ನಿಗದಿಗೆ ಸಮೀಕ್ಷೆ ನಡೆಸಿಲ್ಲ, ಹಿಂದುಳಿದ ವರ್ಗಗಳಗಳಿಗೆ ಸರ್ವೆ ನಡೆಸದೇ ಮೀಸಲು ನೀಡಲಾಗಿದೆ. ರಾಜಕೀಯ ಹಿಂದುಳಿದಿರುವಿಕೆ ಕುರಿತು ಯಾವುದೇ ಸಮೀಕ್ಷೆ ನಡೆಸಿಲ್ಲ.

ಸುಪ್ರೀಂಕೋರ್ಟ್ ತೀರ್ಪಿನನ್ವಯ ಚುನಾವಣಾ ಆಯೋಗ ಟ್ರಿಪಲ್ ಟೆಸ್ಟ್ ಮಾನದಂಡ ಅನುಸರಿಸಿಲ್ಲ. ಹಾಗಾಗಿ ಒಬಿಸಿ ಆಯೋಗದ ವರದಿಯಂತೆ ಮೀಸಲು ಪರಿಗಣಿಸಬಾರದು. ಹೊಸದಾಗಿ ಒಬಿಸಿ ಸರ್ವೆ ನಡೆಸಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಅದಕ್ಕೆ ಆಕ್ಷೇಪ ಎತ್ತಿದ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ, ಒಬಿಸಿ ಮೀಸಲು ಪರಿಗಣಿಸದೇ ಚುನಾವಣೆ ನಡೆಸಬಹುದು. ಮಹಾಜನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿರ್ದೇಶನ ಇಲ್ಲೂ ಅನ್ವಯಿಸುತ್ತದೆ.

ಸುಪ್ರೀಂಕೋರ್ಟ್ ನಿರ್ದೇಶನದಂತೆ ಚುನಾವಣೆಗೆ ಸೂಚಿಸಲು ಮನವಿ ಮಾಡಿದರು. ಅಲ್ಲದೆ, ಹೊಸದಾಗಿ ಒಬಿಸಿ ಕುರಿತು ವರದಿ ಪಡೆಯುವುದು ವಿಳಂಬವಾಗುತ್ತದೆ. ಟ್ರಿಪಲ್ ಟೆಸ್ಟ್ ಆಧಾರದಲ್ಲಿ ಮೀಸಲಾತಿ ರೂಪಿಸಲು ಸಮಯಬೇಕಾಗುತ್ತದೆ. ಒಂದು ವೇಳೆ ಮೀಸಲು ಮರು ರೂಪಿಸಲು ನಿರ್ದೇಶನ ನೀಡಿದರೆ 1 ವಾರ ಮಾತ್ರ ಸಮಯ ನೀಡಿ. ಕೇಂದ್ರ ಚುನಾವಣಾ ಆಯೋಗಕ್ಕೆ ಇವಿಎಂ ಮರಳಿಸಬೇಕಿದೆ. ಹಾಗಾಗಿ ಮೀಸಲು ಮರು ರೂಪಿಸಲು ಹೆಚ್ಚಿನ ಸಮಯ ನೀಡಬಾರದು ಎಂದು ಮನವಿ ಮಾಡಿದರು. ವಾದ ಆಲಿಸಿದ ಪೀಠ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ಇದನ್ನೂ ಓದಿ:ಬಾಗ್ಮನೆ ಟೆಕ್​ ಪಾರ್ಕ್​ ಒತ್ತುವರಿ ಪ್ರಕರಣದಲ್ಲಿ ಲೋಕಾಯುಕ್ತ ಮಧ್ಯ ಪ್ರವೇಶ: ವಿಚಾರಣೆ ಮುಂದೂಡಿಕೆ

ABOUT THE AUTHOR

...view details