ಬೆಂಗಳೂರು: ಸೂರ್ಯನ ವಾತಾವರಣ, ಸೂರ್ಯನ ತೋಪಾಲಜಿ, ಆಯಸ್ಕಾಂತೀಯ ವಲಯದ ಅಳತೆ ಅಧ್ಯಯನ ಮಾಡಲು "ಆದಿತ್ಯ ಎಲ್-1" ಬಾಹ್ಯಾಕಾಶ ನೌಕೆಯನ್ನು 2022ಕ್ಕೆ ಉಡಾವಣೆ ಮಾಡಲು ಇಸ್ರೋ ನಿರ್ಧರಿಸಿದೆ.
ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಸೌರ ವೀಕ್ಷಣಾಲಯ "ಆದಿತ್ಯ ಎಲ್-1" ಆಗಿದ್ದು, ಬಾಹ್ಯಾಕಾಶ ನೌಕೆಯನ್ನು ಭೂಮಿ-ಸೂರ್ಯ ಲಾಗ್ ರೇಂಜ್ ಪಾಯಿಂಟ್ ಎಲ್1ನಲ್ಲಿ ಇರಿಸಲು ಇಸ್ರೋ ತಯಾರಿ ನಡೆಸುತ್ತಿದೆ.
ಸೂರ್ಯನ ವಿದ್ಯಮಾನಗಳ ಅಧ್ಯಯನ ನಡೆಸುವ ಆದಿತ್ಯ ಮಿಷನ್ನ ಗುರಿಗಳೇನು?
- 1. ಸೂರ್ಯ ನಕ್ಷತ್ರದ ವಾತಾವರಣದ ಡೈನಾಮಿಕ್ಸ್ ಅಧ್ಯಯನ
- 2. ಸೂರ್ಯನ ಉಷ್ಣಾಂಶ, ಆಯಾನು ಪ್ಲಾಸ್ಮಾ ಹಾಗೂ ಅದರ ಹಿಂದೆ ಇರುವ ಭೌತಶಾಸ್ತ್ರದ ಬಗ್ಗೆ ಅಧ್ಯಯನ.
- 3. ಆಯಸ್ಕಾಂತೀಯ ವಲಯದ ಅಳತೆಯ ಅಧ್ಯಯನ ಸೇರಿ ಸೂರ್ಯನ ಯುವಿ ಕಿರಣ ಹಾಗೂ ಇನ್ನಿತರೆ ಅಧ್ಯಯನಗಳನ್ನು ಆದಿತ್ಯ ಮಾಡಲಿದೆ.
ಈ ಎಲ್ಲಾ ಗುರಿಗಳನ್ನ ಸಾಧಿಸಲು 7ಪೇ ಲೋಡ್ಗಳನ್ನ ಬಾಹ್ಯಾಕಾಶ ನೌಕೆಯಲ್ಲಿ ಇರಿಸಲಾಗುವುದು, ಇದರಲ್ಲಿ 4ಪೇ ಲೋಡ್ಗಳು ಸೂರ್ಯನ ವೀಕ್ಷಣೆಗೆ ಹಾಗೂ ಇನ್ನುಳಿದ 3ಪೇ ಲೋಡ್ಗಳು ಸೂರ್ಯನ ಆಯಸ್ಕಾಂತ ವಲಯ ಹಾಗೂ ಇತರೆ ಅಳತೆಗೆ ವಿನ್ಯಾಸಗೊಳಿಸಲಾಗುತ್ತಿದೆ.
ಇದನ್ನೂ ಓದಿ:ವಿಡಿಯೋ ಕಾಲ್ ಮೂಲಕ ಮಕ್ಕಳಿಗೆ ಧೈರ್ಯ ತುಂಬಿದ ಕಿಚ್ಚ ಸುದೀಪ್
ಆದಿತ್ಯ ಎಲ್1 ಬಗ್ಗೆ ಮಾತನಾಡಿದ ಇಸ್ರೋ ಹಿರಿಯ ವಿಜ್ಞಾನಿವೊಬ್ಬರು, ಸೂರ್ಯನ ಅಧ್ಯಯನ ಶಕ್ತಿ ಹೆಚ್ಚಿಸಲು ಮಾರ್ಚ್ 2020ರಲ್ಲಿ ಮೊದಲ ಮೀಟಿಂಗ್ ಆಗಿತ್ತು. ಈ ಮಿಷನ್ ಕುರಿತ ಚಿತ್ರಣವನ್ನು ಅಲ್ಲಿ ವಿಜ್ಞಾನಿಗಳಿಗೆ ನೀಡಿ ಅವರ ಸಲಹೆಗಳನ್ನು ಸಂಗ್ರಹಿಸಲಾಯಿತು.
2022ಕ್ಕೆ ಆದಿತ್ಯ ಎಲ್1 ಮಿಷನ್ ಉಡಾವಣೆಗೆ ನಿರ್ಧಾರ ಆಗಿದೆ. ಕೋವಿಡ್ ಮಹಾಮಾರಿ ಕೆಲ ಅಡೆತಡೆಗಳನ್ನು ಉಂಟುಮಾಡಿದ್ದು, ನಿಗದಿಪಡಿಸಿದ ವರ್ಷಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.